ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತ ಸಮುದಾಯಕ್ಕೆ ಸಾವಿರಾರು ಕೋಟಿ ಅನುದಾನ

ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತ ಸಮುದಾಯಕ್ಕೆ ಸಾವಿರಾರು ಕೋಟಿ ಅನುದಾನ.

ದೇವನಹಳ್ಳಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ದಲಿತರ ಏಳ್ಗೆಗಾಗಿ ಅನೇಕ ಕಾರ್ಯಕ್ರಮವನ್ನು ಜಾರಿಗೆತಂದು ಸಾವಿರಾರು ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಕಾರಣರಾದವರ ಮೇಲೆ ಬಿಜೆಪಿ ಸರ್ಕಾರ ರಾಜಕೀಯ ಪಿತೂರಿಗಾಗಿ ಅವರ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ತಿಳಿಸಿದರು.

 

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಎಸ್ಸಿ ಘಟಕದ ದೇವನಹಳ್ಳಿ ಮತ್ತು ವಿಜಯಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯದ ಬಗ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದಲಿತ ವಿರೋಧಿಗಳು ಎನ್ನುವ ಬಿಜೆಪಿಯವರ ಆರೋಪ ಮಾಡಿರುವ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಒಂದೇ ತಿಂಗಳಲ್ಲಿ ದಲಿತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ 1537 ಕೋಟಿ ವೆಚ್ಚದಲಿ ರಾಜ್ಯದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳನ್ನು ನೀಡಿದ್ದಾರೆ, 16 ವಿಶ್ವವಿದ್ಯಾಲಯ ಗಳನ್ನು ಹಾಗೂ ಸ್ನಾತಕೋತ್ತರ ವಸತಿ ಶಾಲೆಗಳನ್ನು ನೀಡಿದ್ದು ಅಂಬೇಡ್ಕರ್, ಜಗಜೀವನರಾಂ, ವಾಲ್ಮೀಕಿ ಹೆಸರಿನಲ್ಲಿ 8199 ಭವನಗಳನ್ನು ನೀಡಿದ್ದಾರೆ ಹೀಗೆ ಹೇಳಿದರೆ ಪಟ್ಟಿ ದೊಡ್ಡದಿದೆ ಆದರೆ ಬಿಜೆಪಿ ಪಕ್ಷದವರು ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು? ನಮ್ಮ ರಾಜ್ಯದಿಂದ ಜಿ.ಎಸ್.ಟಿ ಮುಖಾಂತರ ಹೋಗಿರುವ ಹಣವನ್ನು ಸರಿಯಾಗಿ ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲಾ . ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಹಾನಗಲ್ ನ ಫಲಿತಾಂಶಕ್ಕೆ ಆಡಳಿತ ಪಕ್ಷ ಬೆದರಿದ್ದರಿಂದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಸಧ್ಯಕ್ಕಿಲ್ಲಾ ಎಂದು ಘೋಷಿಸಿದ್ದಾರೆ. ಜನರ ಕಣ್ಣೊರೆಸಲು ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಿಂಬಾಗಿಲಿನಿAದ ಕರೆದು ಸರ್ಕಾರ ರಚನೆ ಮಾಡಿದ್ದಾರೆ ಅವರ ಕೊಡುಗೆ ಏನು? ಶೇಕಡ 18 ರಿಂದ 23 ಮೀಸಲಾತಿ ಏರಿಸಿದ್ದು ಸಿದ್ದರಾಮಯ್ಯ ನವರು, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಒಂದು ಮನೆ ನಿವೇಶನ ನೀಡಿಲ್ಲಾ ಬಿಜೆಪಿ ಸರ್ಕಾರದ ಸಾಧನೆ ಬಡವರ ಮೇಲೆ ದಿನನಿತ್ಯ ಬಳಕೆಯ ವಸ್ತುಗಳ ದುಬಾರಿ ಹೊರೆ ಹಾಕಿರುವುದು ಮತ್ತು ಕಳೆದ ಸರ್ಕಾರದಲ್ಲಿದ್ದ ಸಾಲದ ಮೊತ್ತಕ್ಕಿಂತ ದೇಶದ ಸಾಲ ದ್ವಿಗುಣಗೊಳಿದ್ದಾರೆ ಎಂದರು

 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿ ರಾಜ್ಯದ ಬಹುತೇಕ ಹಳ್ಳಿಗಳ ರಸ್ತೆ ಕಾಂಕ್ರೀಟೀಕರಣ ಆಗಿರುವುದಕ್ಕೆ ಕಾರಣ ಸಿದ್ದರಾಮಯ್ಯನವರು ನೀಡಿದ ಎಸಿಪಿ ಟಿಎಸ್ಪಿ ಯೋಜನೆಯಲ್ಲಿ, ಬಿಜೆಪಿ ಯಲ್ಲಿನ ನಾಯಕರು ಅರ್ಥಮಾಡಿಕೊಳ್ಳಬೇಕಿದೆ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೆ ಬದಲಾವಣೆ ಮಾಡಲು ಬಂದಿರುವುದಾಗಿ ಎಂದು ಹೇಳಿದಾಗ ಪ್ರಶ್ನೆ ಮಾಡಲು ಆಗಲಿಲ್ಲಾ, ದಲಿತರನ್ನು ಹೀನಾಮಾನವಾಗಿ ಮಾತಾಡಿದಾಗ ಚಕಾರ ಎತ್ತಲಿಲ್ಲ ಎಂದರು.

 

ಇದೆ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಅಸಂಘಟಿ ಕಾರ್ಮಿಕ ಜಿಲ್ಲಾಧ್ಯಕ್ಷ ಡಿ.ವಿ.ಕೃಷ್ಣಮುರ್ತಿ ಕುಂದಾಣ ಗ್ರಾಮ ಪಂಚಾಯತಿ ಸದಸ್ಯ ಕೆ.ವಿ.ಸ್ವಾಮಿ, ವಿಜಯಪುರ ಪುರಸಭೆ ಸದಸ್ಯ ನಾರಾಯಣಸ್ವಾಮಿ, ದೇವನಹಳ್ಳಿ ಬ್ಲಾಕ್ ಎಸ್ಸಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ತಿರುಮಳೇಶ್, , ಶ್ರೀನಿವಾಸ್ ಮತ್ತಿತರರು ಇದ್ದರು.

 

ಮಂಜು ಬೂದಿಗೆರೆ

9113893926

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version