ಸಂತೋಷ್ ಆತ್ಮಹತ್ಯೆ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದೆ_ ಕೆ.ಎಸ್ ಈಶ್ವರಪ್ಪ.
ತುಮಕೂರು_ಬೆಳಗಾವಿ ಮೂಲದ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಹುದೊಡ್ಡ ಷಡ್ಯಂತ್ರ ಅಡಗಿದೆ ಎಂದು ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ಯಾವುದೇ ಸಾಮಾನ್ಯ ಕಾರ್ಯಕರ್ತನಿಗೆ ಮೋಸ ಮಾಡುವುದಿಲ್ಲ , ಪ್ರಕರಣದ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ ಶೀಘ್ರದಲ್ಲೇ ಆರೋಪ ಮುಕ್ತನಾಗಿ ಹೊರಬರುತ್ತೇನೆ ಎನ್ನುವ ವಿಶ್ವಾಸವನ್ನು ಸಚಿವ ಕೆ.ಎಸ್ ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬೊಮ್ಮಾಯಿ ರವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದೇನೆ ಅದಕ್ಕೂ ಮುಂಚಿತವಾಗಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆಯ ಆಶೀರ್ವಾದ ಪಡೆದು ಬೆಂಗಳೂರಿಗೆ ತೆರಳುತ್ತಿರುವುದಾಗಿ ಮಾಹಿತಿ ತಿಳಿಸಿದ್ದಾರೆ.
ಇನ್ನು ನಾಲ್ಕು ಸಚಿವರ ಮೇಲೆ ಆರೋಪವಿದೆ
ಇನ್ನು ನಾಲ್ಕು ಸಚಿವರ ಮೇಲೆ ಆರೋಪಗಳಿವೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇನ್ನೂ ಕೆಲವರು ಕುಡಿದು ಕುಡಿದು ಮಾತನಾಡುತ್ತಾರೆ
ಇನ್ನು ಯಾವನೋ ಒಬ್ಬ ಕುಡಿದು ಮಾತನಾಡುತ್ತಾನೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಇನ್ನು ಇನ್ನು ಕುಡಿದು ಮಾತನಾಡುವನು ಇಂಥ ಸಚಿವರು ಇದ್ದಾರೆ ಎನ್ನುವ ಮಾತನ್ನು ಹೇಳಲಿ ಅದು ಬಿಟ್ಟು ನಾಲ್ಕು ಜನ ಇದ್ದಾರೆ ಎಂದು ಹೇಳಿದರೆ ಹೇಗೆ .
ರಾಜ್ಯದಲ್ಲಿ ವಿರೋಧ ಪಕ್ಷಗಳು ಬದುಕಿರಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿ ವಿರೋಧಪಕ್ಷಗಳು ಇಲ್ಲ ಎನ್ನುವಂತಾಗುತ್ತದೆ .
ಜೀವನದಲ್ಲಿ ತಾನು ಎಂದಿಗೂ ಎದೆಗುಂದುವುದಿಲ್ಲ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಇನ್ನು ಪ್ರಕರಣದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಆರೋಪ ಮುಕ್ತರಾಗಿ ಹೊರ ಬರುತ್ತೇನೆ ಇನ್ನು ಪಕ್ಷ ,ರಾಜ್ಯ ಹಾಗೂ ದೇಶಕ್ಕಾಗಿ ಶ್ರಮಿಸುವ ವೇಳೆಯಲ್ಲಿ ಎಲ್ಲಾ ವಿಚಾರದಲ್ಲೂ ಜಯಗಳಿಸಿದ್ದೇನೆ ಇದರಲ್ಲೂ ಸಹ ಆರೋಪ ಮುಕ್ತನಾಗಿ ಹೊರಬರುತ್ತೇನೆ ಇನ್ನು ತನಿಖೆಯ ಸತ್ಯಾಸತ್ಯತೆ ಯಾವಾಗ ಹೊರಬರಲಿದೆಯೋ ಅಂದು ಆರೋಪ ಮುಕ್ತನಾಗುತ್ತೇನೆ ಇನ್ನು ತನಿಖೆಯ ತೀರ್ಪು ಸಹ ಬಿಜೆಪಿ ಪರವಾಗಿಯೇ ಬರಲಿದೆ.
ಇನ್ನು ಕಾಂಗ್ರೆಸ್ ಪಕ್ಷದವರು ಸಾಯುವತನಕ ಹೋರಾಟ ಮಾಡುತ್ತಲೇ ಇರಲಿ ಎಂದು ಪರೋಕ್ಷವಾಗಿ ವಿರೋಧಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ವರದಿ_ ಮಾರುತಿ ಪ್ರಸಾದ್ ತುಮಕೂರು