ರಾತ್ರೋರಾತ್ರಿ ಕೋಳಿಗಳನ್ನು ಕದ್ದ ಕಳ್ಳರು ಸಿಸಿಟಿವಿಯಲ್ಲಿ ಸರಿಯಾಯಿತು ಕಳ್ಳರ ಕೈಚಳಕ.

ರಾತ್ರೋರಾತ್ರಿ ಕೋಳಿಗಳನ್ನು ಕದ್ದ ಕಳ್ಳರು ಸಿಸಿಟಿವಿಯಲ್ಲಿ ಸರಿಯಾಯಿತು ಕಳ್ಳರ ಕೈಚಳಕ.

 

 

ತುಮಕೂರು_ತುಮಕೂರು ತಾಲೂಕಿನ ಹೆಬ್ಬೂರು ವ್ಯಾಪ್ತಿಯಲ್ಲಿ ಕೋಳಿ ಅಂಗಡಿಗೆ ಗಳಿಗೆ ಡೆಲಿವರಿ ಮಾಡಲಾಗಿದ್ದ ಕೋಳಿಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿರುವ ಘಟನೆ ವರದಿಯಾಗಿದ್ದು ಇನ್ನೂ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ತುಮಕೂರಿನ ನಾಗೇಶ್ ಎಂಬುವರು ತುಮಕೂರಿನ ವೆಂಕಾಬ್ ಚಿಕನ್ ವತಿಯಿಂದ ತುಮಕೂರು ತಾಲೂಕಿನ ಹೆಬ್ಬುರಿನಿಂದ ಬಳಗೆರೆ ವರೆಗೆ ಪ್ರತಿ ನಿತ್ಯದಂತೆ ಫೆಬ್ರವರಿ 20ರಂದು ಮುಂಜಾನೆ ಹೆಬ್ಬುರು ಭಾಗದಲ್ಲಿ ಕೋಳಿಗಳನ್ನು ನಿಗದಿತ ಅಂಗಡಿಗಳಿಗೆ ಸರಬರಾಜು ಮಾಡಿದರು ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳರು ಬೆಳಗಿನ ಜಾವದಲ್ಲಿ ಕೋಳಿಗಳನ್ನು ಹಾಗೂ ಬಾಕ್ಸ್ಗಳನ್ನು ಕದ್ದೊಯ್ದಿದ್ದಾರೆ

 

 

 

 

ಇನ್ನೂ ಕಳವಾಗಿರುವ ಕೋಳಿಗಳು ಹಾಗೂ ಕೋಳಿಗಳನ್ನು ಸರಬರಾಜು ಮಾಡುವ ಬಾಕ್ಸ್ ನ ಬೆಲೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನದಾಗಿದ್ದು ಸುಮಾರು 640 ಕೆಜಿ ಕೋಳಿ ಹಾಗೂ ಬಾಕ್ಸ್ಗಳನ್ನು ಹುಡುಕಿಕೊಡುವಂತೆ ನಾಗೇಶ್ ಎಂಬವರು ಹೆಬ್ಬೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version