ಹಾಡು ಹಗಲೇ  ಜ್ಯೂನಿಯರ್ ಕಾಲೇಜು ಮೈದಾನದ ಪಾರ್ಕ್ ನಲ್ಲಿ  ಲವರ್ಸ್ ಗಳ ಲವ್ವಿಡವ್ವಿ

ಹಾಡು ಹಗಲೇ  ಜ್ಯೂನಿಯರ್ ಕಾಲೇಜು ಮೈದಾನದ ಪಾರ್ಕ್ ನಲ್ಲಿ  ಲವರ್ಸ್ ಗಳ ಲವ್ವಿಡವ್ವಿ

 

 

ತುಮಕೂರು_ಕಲ್ಪತರು ನಾಡು ಶಿಕ್ಷಣಿಕ ನಗರವೆಂದೇ ಖ್ಯಾತಿ ಪಡೆದ ತುಮಕೂರು ನಗರದಾದ್ಯಂತ ಸಾಕಷ್ಟು ವಿದ್ಯಾಸಂಸ್ಥೆಗಳು ಉತ್ತಮ ವಿದ್ಯಾಭ್ಯಾಸ ನೀಡುತ್ತಾ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿವೆ.

 

 

ಇನ್ನೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರೆಸುವ ಸಲುವಾಗಿ ಗ್ರಾಮಾಂತರ ಪ್ರದೇಶದಿಂದ, ನಗರಪ್ರದೇಶದಿಂದ ಸೇರಿದಂತೆ ಸಾಕಷ್ಟು ಭಾಗಗಳಿಂದ ವಿದ್ಯಾರ್ಥಿಗಳು ತುಮಕೂರು ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ ಆಗಮಿಸುತ್ತಾರೆ.

 

 

ಆದರೆ ತುಮಕೂರಿನ ಹೈಸ್ಕೂಲ್ ಆವರಣದಲ್ಲಿ ಇರುವ ಸಾಲು ಆಲದ ಮರ ಟ್ರೀ ಟೆಕ್ ಪಾರ್ಕ್ ಪದೇಪದೇ ಸುದ್ದಿಯಲ್ಲಿ ನಿರತ ವಾಗುತ್ತದೆ ಇದಕ್ಕೆ ಕಾರಣ ಇಲ್ಲಿ ಆಗಮಿಸುವ ವಿದ್ಯಾರ್ಥಿಗಳು ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದೆ ಇದಕ್ಕೆ ಕಾರಣ.

 

 

ಇದಕ್ಕೆ ಪುಷ್ಟಿ ನೀಡುವಂತೆ ಮೈದಾನದ ಬಳಿ ಇರುವ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿಕೊಳ್ಳುತ್ತ ಅಸಭ್ಯವಾಗಿ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

 

ಇನ್ನೂ ಹಾಡುಹಗಲೇ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಸಮಯದಲ್ಲಿ ಈ ರೀತಿ ವರ್ತಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

 

 

 

ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸದರಿ ಸಾಲು ಆಲದಮರ ಟ್ರೀ ಟೆಕ್ ಪಾರ್ಕ್ ನಲ್ಲಿ ಪ್ರತಿನಿತ್ಯ ಬೀಟ್ ವ್ಯವಸ್ಥೆಯನ್ನು ಮಾಡಿದ್ದಾರೆ ಆದರೂ ಸಹ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಒಳ್ಳೆಯ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ಘಟನೆಗಳು ನಡೆಯದಂತೆ ಕಡಿವಾಣ ಹಾಕಬೇಕಾಗಿದೆ.

 

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರ್ವಜನಿಕರೊಬ್ಬರು ಪ್ರತಿನಿತ್ಯ ಒಂದಲ್ಲ ಒಂದು ಇಂತಹ ಘಟನೆಗಳು ನಡೆಯುತ್ತಲೇ ಇವೆ ಇನ್ನೂ ಸದರಿ ಆಲದಮರ ಶ್ರೀ ಟೆಕ್ ಪಾರ್ಕ್ ನಲ್ಲಿ ಸಿಸಿಟಿವಿ ಕ್ಯಾಮರಾಗಳ ಅವಶ್ಯಕತೆ ಇದ್ದು ಕೂಡಲೇ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಸಾಲು ಆಲದ ಮರದ ಪಾರ್ಕ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಂತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

One thought on “ಹಾಡು ಹಗಲೇ  ಜ್ಯೂನಿಯರ್ ಕಾಲೇಜು ಮೈದಾನದ ಪಾರ್ಕ್ ನಲ್ಲಿ  ಲವರ್ಸ್ ಗಳ ಲವ್ವಿಡವ್ವಿ

  1. This students are have done very illegal act in college campus they should be punished in front of college…it should be a lesson for those who are thinking or planning for this type of activity in public places …shame on this peoples

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version