ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ನರಸೇಗೌಡ ಅವರಿಗೆ ಬಲ ತುಂಬಲು ಮುಂದಾದ ತುಮಕೂರಿನ ಒಕ್ಕಲಿಗ ಮುಖಂಡರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ನರಸೇಗೌಡ ಅವರಿಗೆ ಬಲ ತುಂಬಲು ಮುಂದಾದ ತುಮಕೂರಿನ ಒಕ್ಕಲಿಗ ಮುಖಂಡರು.

 

 

 

 

 

 

 

 

 

 

ಇಂದು ಸಂಜೆ ತುಮಕೂರಿನ ನರಸೇಗೌಡರ ನಿವಾಸಕ್ಕೆ ಧಿಡಿರ್ ಎಂದು ಆಗಮಿಸಿದ ಕೆಲ ಒಕ್ಕಲಿಗ ಮುಖಂಡರು ತಾವು ನಮ್ಮ ಸಮುದಾಯಕ್ಕೆ ಕಳೆದ ಹತ್ತಾರು ವರ್ಷಗಳಿಂದ ಮಾಡಿರುವ ಸೇವೆ ಹಾಗೂ ಹಲವಾರು ಹೋರಾಟಗಳು ನಮ್ಮ ಸಮುದಾಯ ತುಮಕೂರು ನಗರದಲ್ಲಿ ಭೇರು ಬಿಡಲು ತಾವೂ ಸಹ ಒಬ್ಬರಾಗಿದ್ದೀರಿ ಎಂದು ನೆನಪಿಸಿಕೊಂಡರು.

 

 

 

 

 

 

 

 

 

 

 

ಜೊತೆಗೆ ತಮ್ಮ ಹೋರಾಟದ ಪರಿಶ್ರಮದಿಂದಲೇ ಇಂದು ತುಮಕೂರಿನ ಟೌನ್ ಹಾಲ್ ವೃತ್ತಕ್ಕೆ ಬಿ ಜಿ ಎಸ್ ವೃತ್ತ ಎಂದು ಬರಲು ಕಾರಣ ಎಂದು ನರಸೇಗೌಡರ ಹೋರಾಟ ಮತ್ತು ಸೇವೆಯನ್ನು ನೆನಪಿಸಿದರು.

 

 

 

 

 

 

 

 

 

 

 

ನಾವುಗಳು ಪಕ್ಷಭೇದ ಮರೆತು ನಾವು ನಿಮಗೆ ಸ್ವ ವ್ಯಕ್ತಿಗತವಾಗಿ ನಿಮ್ಮೊಂದಿಗೆ ಇರುತ್ತೇವೆ ನಾವು ನಮ್ಮ ಶಕ್ತಿ ಮೀರಿ ನೀವು ಗೆಲ್ಲಲು ನಿಮ್ಮ ಬೆನ್ನೆಲುಬಾಗಿ ನಿಲ್ಲಲು ಸಿದ್ದರಿದ್ದೇವೆ ನಿಮ್ಮಗೆ ಆಗಿರುವ ನೋವು ನಮಗೆ ಬೇಸರ ತಂದಿದೆ ಎಂದು ಒಕ್ಕಲಿಗ ಮುಖಂಡರು ಹೇಳಿದರು.

 

 

 

 

 

 

 

 

 

 

 

ಮುಂದುವರೆದು ಪಕ್ಷೇತರ ಅಭ್ಯರ್ಥಿ ನರಸೇಗೌಡ್ರು ಮಾತನಾಡುತ್ತಾ ನೀವುಗಳು ನನ್ನ ಸಹಕಾರಕ್ಕೆ ಬಂದಿರುವುದು ನನ್ನ ಸುದೈವ ನಾನು ನಿಷ್ಠೆಯಿಂದ ನೀವು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದರು.

 

 

 

 

 

 

 

 

 

 

 

 

 

ನಾನು ಈಗಾಗಲೇ ಬಹುತೇಕ ಎಲ್ಲಾ ಸಮುದಾಯದ ಮುಖಂಡರುಗಳನ್ನು ಭೇಟಿ ಮಾಡಿದ್ದೇನೆ ನನಗೆ ಉತ್ತಮವಾದ ಪ್ರತಿಕ್ರಿಯೆ ವ್ಯಾಪಾಕವಾಗಿ ವ್ಯಕ್ತವಾಗುತ್ತಿದೆ ಅಲ್ಲದೆ ನಾನು ಯಾರಿಗೂ ಯಾವುದೆ ವಿಧವಾದ ಆಮಿಷಗಳನ್ನು ಒಡ್ಡದೇ ಎಲ್ಲರ ಪ್ರೀತಿ ವಿಶ್ವಾಸಗಳಿಸಿ ಮಾತಾಯಾಚನೆ ಮಾಡುತ್ತಿದ್ದೇನೆ ಎಂದರು.

 

 

 

 

 

 

 

 

 

 

 

ಪ್ರತಿಯೊಂದು ವಾರ್ಡ್ಗಳಲ್ಲೂ ನನಗೆ ನನ್ನದೇ ಆದ ದೊಡ್ಡ ಯುವ ಪಡೆ ಇದೆ ಅವರೇ ನನ್ನ ಶಕ್ತಿ ಜೊತೆಗೆ ಇದೀಗ ನನ್ನ ಸಮುದಾಯದ ಮುಖಂಡರು ಸ್ವಯಂ ಪ್ರೇರಿತರಾಗಿ ನನ್ನೊಟ್ಟಿಗೆ ಬಂದು ಬೆಂಬಲಿಸಿರುವುದು ನನ್ನ ಗೆಲುವಿಗೆ ಮುನ್ನುಡಿ ಎನ್ನಬಹುದು ಎಂದರು.

 

 

 

 

 

 

 

 

 

 

 

 

 

ನಾನು ತುಮಕೂರು ನಗರದ ಶಾಸಕನಾಗಿ ಆಯ್ಕೆ ಆದ ನಂತರ ನಿಮ್ಮ ಮನೆ ಮಗನ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುವುದರಲ್ಲದೆ ನಿಮ್ಮಗಳ ಸೇವಕನಾಗಿ ಕಾರ್ಯ ನಿರ್ವಹಿಸಲು ಸದಾ ಸಿದ್ದನೆದ್ದೇನೆ ಎಂದರು.

 

 

 

 

 

 

 

 

 

 

 

ಈ ಸಂದರ್ಭದಲ್ಲಿ ಒಕ್ಕಲಿಗ ಕೆಲಸ ಮುಖಂಡರಾದ ನೇತಾಜಿ ಶ್ರೀಧರ್, ಜಯರಾಮೆ ಗೌಡ, ಲೋಕೇಶ್ ಚಿನ್ನಕವಜ್ರ ಸೇರಿದಂತೆ ಹಲವಾರು ಮುಖಂಡರು ಬಾಗಿಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version