1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, 15000 ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ತುಮಕೂರು – ರೈತರೊಬ್ಬರ ಜಮೀನು ಪೋಡಿ ಮಾಡಲು ಏನ್ ಓ ಸಿ ನೀಡುವ ಸಲುವಾಗಿ ಒಂದು ಲಕ್ಷ ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 15000 ರೂಗಳನ್ನು ಲಂಚ ಪಡೆಯುವಾಗ ಇಂಜಿನಿಯರ್ ಒಬ್ಬರು ಲೋಕಾಯುಕ್ತ ದಾಳಿಗೆ ಬಿದ್ದಿರುವ ಘಟನೆ ವರದಿಯಾಗಿದೆ.
ಇನ್ನು ಲಂಚ ಪಡೆಯುವಾಗ ದಿಡೀರ್ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಇಂಜಿನಿಯರ್ ರನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ತುಮಕೂರು ನಗರದ ಬನಶಂಕರಿ 2ನೇ ಹಂತದಲ್ಲಿ ಇರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇ ಕಾಶಿ ವಿಶ್ವನಾಥ್ ಎಂಬುವವರೇ ಲೋಕಾಯುಕ್ತ ದಾಳಿಗೆ ಬಿದ್ದಿರುವ ಅಧಿಕಾರಿ.
ತುಮಕೂರಿನ ರೈತರು ಒಬ್ಬರಿಂದ ಎಕರೆ 7ಗುಂಟೆ ಜಮೀನಿನಲ್ಲಿ ನಾಲ್ಕು ಗುಂಟೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೇರಿದ್ದು ಅದನ್ನ ಪೋಡಿ ಮಾಡಲು ಇಲಾಖೆಯಿಂದ ಎನ್ ಒಸಿ ನೀಡಬೇಕಿತ್ತು ಆದರೆ ಕಳೆದ 4 ವರ್ಷದಿಂದ ಎನ್. ಓ .ಸಿ ಪತ್ರ ನೀಡಿರಲಿಲ್ಲ ,ಇನ್ನು ಪತ್ರ ನೀಡುವ ಸಲುವಾಗಿ ಕಾಶಿ ವಿಶ್ವನಾಥ್ ರೈತರಿಂದ 15000 ರೂಪಾಯಿ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇನ್ನು ಪ್ರಕರಣ ದಾಖಲಿಸಿ ಮುಂದಿನ ಕ್ರಮವನ್ನ ಜರುಗಿಸಿದ್ದು ಇನ್ನು ದಾಳಿಯಲ್ಲಿ ತುಮಕೂರು ಲೋಕಾಯುಕ್ತ ಎಸ್ ಪಿ ವಲ್ಲಿ ಭಾಷಾ ಅವರ ನೇತೃತ್ವದಲ್ಲಿನ ಡಿವೈಎಸ್ಪಿ ಗಳಾದ ಮಂಜುನಾಥ್ ,ಹರೀಶ್ ಇನ್ಸ್ಪೆಕ್ಟರ್ಗಳಾದ ಸತ್ಯನಾರಾಯಣ್, ಸಲೀಂ, ಶಿವರುದ್ರಪ್ಪ ಮೇಟಿ , ರಾಮರೆಡ್ಡಿ ಸೇರಿದಂತೆ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು