ಟಿಕೇಟ್ ನೀಡುವ ಯಂತ್ರ ಕೈ ಕೊಟ್ಟಿದ್ದಕ್ಕೆ ಕಾಡಿನ ಮಧ್ಯ ಹೆಣ್ಣು ಮಕ್ಕಳನ್ನು ಕೆಳಗಿಳಿಸಿದ ನಿರ್ವಾಹಕ
ಹನೂರು :- ತಾಲೂಕಿನ ಅಜ್ಜಿಪುರ ಸಮೀಪದಲ್ಲಿ ಶಾಲಾ ಕಾಲೇಜು ಮುಗಿಸಿ ಮನೆಗೆ ತೆರಳುವ ವೇಳೆ ಕೆ ಎಸ್ ಆರ್ ಟಿ ಸಿ ನಿರ್ವಾಹಕ ಟಿಕೆಟ್ ನೀಡುವ ಯಂತ್ರ ಕೈಕೋಟ್ಟಿತೆಂದು ಸರ್ಕಾರಿ ವಾಹನದಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ಇರುವ ಕಾರಣ ಪ್ರಯಾಣಿಕರನ್ನು ದಾರಿ ಮಧ್ಯೆ ಇಳಿಸಿದ ಘಟನೆ ನಡೆದಿದೆ. ಕೊಳ್ಳೇಗಾಲದಿಂದ ಹನೂರು ರಾಮಾಪುರ ಮಾರ್ಗದಿಂದ ಹುಗ್ಯಾಮ್ ಕಡೆ ತೆರಳುತಿದ್ದ ಬಸ್ಸನ್ನು ಕಾಡಿನ ಮದ್ಯೆ ನಿಲ್ಲಿಸಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಕಾಡಿನ ಮದ್ಯೆ ಅರಣ್ಯ ವಲಯದಲ್ಲಿ ಕೆಳಗಿಳಿಸಿ ನಂತರ ಹನೂರು ಸರ್ಕಾರಿ ಬಸ್ ನಿಲ್ದಾಣಕ್ಕೆ ಚಾಲಕ ಹಿಂದಿರುಗಿದ್ದಾನೆ ಎಂದು ತಿಳಿದು ಬಂದಿದೆ.
ಕೊಳ್ಳೇಗಾಲ ಡಿಪೋಗೆ ಸೇರಿದ ಬಸ್ ಇದಾಗಿದ್ದು ಇಂತಹ ನಡತೆ ನಡೆದು ಕೊಂಡಿರುವುದು ನಿಜಕ್ಕೂ ವಿಷಾದನೀಯ. ಹೆಣ್ಣು ಮಕ್ಕಳನ್ನು ಕಾಡಿನ ಮಧ್ಯ ಕೆಳಗೆ ಇಳಿಸಿ ವಿಕೃತಿ ಮೆರೆದಿದ್ದಾರೆ .ಇದರಿಂದ ಮನನೊಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನಿರ್ವಾಹಕನ ನಡತೆಗೆ ಕೋಪಗೊಂಡು ನಡೆದುಕೊಂಡೆ ತಮ್ಮ ಗ್ರಾಮವನ್ನು ತಲುಪಿದ್ದಾರೆ.
ನಿಜಕ್ಕೂ ಇಡೀ ಕರ್ನಾಟಕ ರಾಜ್ಯವೇ ತಲೆತಗ್ಗಿಸುವಂತಹ ಕೆಲಸವಿದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ವಿಚಾರವನ್ನು ತುಂಬಾ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಬಸ್ಸಿನ ನಿರ್ವಾಹಕನ ಮೇಲೆ ಸೂಕ್ತ ಕ್ರಮ ವಹಿಸಿ ಆತನನ್ನು ಕರ್ತವ್ಯದಿಂದ ವಜಾಗೊಳಿಸಿ ಆತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್