ಗಮನ ಸೆಳೆದ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಪತ್ರಕರ್ತರ ನಡುವೆ ನಡೆದ ಲಗೋರಿ ಆಟ
ತುಮಕೂರು – ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರು ಕೆಲಸಕ್ಕಾಗಿ ಯಾವುದೇ ಸಮಯ ಮೀಸಲಿಡದೆ ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಾರೆ ಇದರ ನಡುವೆ ಉತ್ತಮ ಆರೋಗ್ಯಕ್ಕೆ ಹಾಗೂ ಒತ್ತಡ ಕಡಿಮೆ ಮಾಡಿಕೊಳ್ಳಲು ಯಾವುದೇ ಸಮಯ ಸಿಗದ ಹಿನ್ನೆಲೆಯಲ್ಲಿ ಒಂದಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತುಮಕೂರು ಜಿಲ್ಲಾ ಪತ್ರಕರ್ತರು ಹಾಗೂ ಮಾಧ್ಯಮ ತಂಡದವರು ಒಂದಷ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಆಟದ ಮೊರೆ ಹೋದರು.
ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ಡಿಎಆರ್ ಮೈದಾನದಲ್ಲಿ ನಡೆದ ಕ್ರಿಕೆಟ್ ಹಾಗೂ ಲಗೋರಿ ಪಂದ್ಯಾವಳಿಗಳು ನೆರೆದಿದ್ದ ಸಾರ್ವಜನಿಕರಿಗೆ ಒಂದಷ್ಟು ಖುಷಿ ಹಾಗೂ ಕುತೂಹಲ ತರುವ ಮೂಲಕ ಎರಡು ತಂಡಗಳು ಪರಸ್ಪರ ಕ್ರಿಕೆಟ್ ಹಾಗೂ ಲಗೋರಿ ಆಟ ಆಡಿದರು.
ಪಂದ್ಯಕ್ಕೆ ಚಾಲನೆ ನೀಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಶಹಪೂರ್ವಡ್ ರವರು ಉಭಯ ತಂಡಗಳಿಗೆ ಶುಭ ಕೋರುವ ಮೂಲಕ ಚಾಲನೆ ನೀಡಿದ ಅವರು ತಾವು ಸಹ ದೇಸಿ ಆಟವಾದ ಲಗೋರಿ ಆಟಕ್ಕೆ ತಾವು ಸಹ ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಕ್ರೀಡಾ ಸ್ಪೂರ್ತಿ ಮೆರೆದದ್ದು ವಿಶೇಷವಾಗಿತ್ತು.
ನಿರೀಕ್ಷೆಯಂತೆ ಎರಡು ಆಟದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಜಯಗಳಿಸಿದ್ದು ವಿಶೇಷವಾಯಿತು.
ಇನ್ನು ಎರಡು ಪಂದ್ಯಾವಳಿಯಲ್ಲು ತುಮಕೂರು ಜಿಲ್ಲಾ ಅಡಿಷನಲ್ ಎಸ್ಪಿ ಮರಿಯಪ್ಪ, ತುಮಕೂರು ಡಿವೈಎಸ್ಪಿ ಶ್ರೀನಿವಾಸ್, ತೆರಿದಂತೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ಗಳು ಹಾಗೂ ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಂತೆ ತುಮಕೂರು ಜಿಲ್ಲೆಯ ಮಾಧ್ಯಮ ಮಿತ್ರರು ಹಾಗೂ ಪತ್ರಕರ್ತರು ಆಟವಾಡುವ ಮೂಲಕ ಗಮನ ಸೆಳೆದಿದ್ದಾರೆ .