ಗ್ರಾಮ ಪಂಚಾಯಿತಿ ಸದಸ್ಯೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ
ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಗೊಂಡನಹಳ್ಳಿ ಗ್ರಾಮದಲ್ಲಿ ವಾರ್ಡ್ ಸಭೆ ನೆಡೆಯುವ ಸಂದರ್ಭದಲ್ಲಿ ಆದೆ ಗ್ರಾಮವಾಸಿ ವೆಂಕಟೇಶಪ್ಪ ಮತ್ತು ಆತನ ಸಹಚರರು ಸೇರಿ ಹಾಲಿ ಗ್ರಾಮ ಪಂಚಾಯಿತಿ ಸದಸ್ಯೆ ಭೂಮಿಕ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಲಾಗಿದೆ .
ಘಟನೆಗೆ ಮೂಲ ಕಾರಣ ಚುನಾವಣೆ ಸಂದರ್ಭದಲ್ಲಿ ಭೂಮಿಕ ರವರು ಲಲಿತಮ್ಮ ಹಾಗೂ ಇತರರ ಪ್ರತಿಸ್ಪರ್ಧಿಯಾಗಿ ಜಯಗಳಿಸಿದ ಕಾರಣವನ್ನು ಮುಂದಿಟ್ಟು ದ್ವೇಷದ ರಾಜಕಾರಣ ಮಾಡುವ ಮೂಲಕ ವಾರ್ಡ್ ಸಭೆ ನೆಡೆಯುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣ ತೆಗೆದು ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ಹಾಲಿ ಗ್ರಾಮ ಪಂಚಾಯಿತಿ ಸದಸ್ಯೆ ಭೂಮಿಕ ತಿಳಿಸಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಹಾಲಿ ಗ್ರಾಮ ಪಂಚಾಯಿತಿ ಸದಸ್ಯೆ ಭೂಮಿಕ ಮತ್ತು ಆಕೆಯ ಪತಿ ರಮೇಶ್ ಮಧುಗಿರಿ ಸರ್ಕಾರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಗ್ರಾಮ ಪಂಚಾಯಿತಿ ಸದಸ್ಯೆ ಭೂಮಿಕ ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ .
ಈ ಘಟನೆಗೆ ಸಂಬಂಧಿಸಿದಂತೆ ಇದೇ ಗ್ರಾಮವಾಸಿಗಳಾದ ವೆಂಕಟೇಶ್. ರಾಮಚಂದ್ರಪ್ಪ, ವೆಂಕಟರಮಣಪ್ಪ, ಇಂದ್ರಕುಮಾರ್, ದುರ್ಗಪ್ಪ, ಮುಂತಾದವರು ನಮ್ಮ ಮೇಲೆ ಪದೇ ಪದೇ ವಿನಾಕಾರಣ ಕಲಹಗಳನ್ನು ಮಾಡುತ್ತಿದ್ದಾರೆ ಇದರ ವಿಚಾರವಾಗಿ ನಾವುಗಳು ಸಾಕಷ್ಟು ಭಾರಿ ಪೋಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರು ನಮಗೆ ನ್ಯಾಯ ಒದಗಿಸಲುವಲ್ಲಿ ವಿಫಲರಾಗಿದ್ದಾರೆ ಎಂದು ಹಲ್ಲೆಗೊಳಗಾದ ಹಾಲಿ ಗ್ರಾಮ ಪಂಚಾಯಿತಿ ಸದಸ್ಯೆ ಭೂಮಿಕ ತಿಳಿಸಿದ್ದಾರೆ.
ವರದಿ: ಯೋಗೀಶ್ ಮೆಳೆಕಲ್ಲಹಳ್ಳಿ