ಅಧಿಕಾರಿಗಳ ನಡೆಯಿಂದ ಬೀದಿಗೆ ಬಿದ್ದ ರೈತ ಕುಟುಂಬ.
ಗುಬ್ಬಿ_ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದ ಸರ್ವೆ ನಂಬರ್ 116 ರಲ್ಲಿ ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ ರೈತ ಕುಟುಂಬದ ಶಾರದಮ್ಮ ಎಂಬವರು ಹಲವು ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು.
ಆದರೆ ಭಾನುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಶಾರದಮ್ಮ ಎನ್ನುವ ರೈತ ಮಹಿಳೆಗೆ ಯಾವುದೇ ನೋಟಿಸ್ ನೀಡದೆ ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸಲಾಗಿದ್ದು ಇದರಿಂದ ರೈತರ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ಹಲವು ವರ್ಷಗಳಿಂದ ರೈತ ಮಹಿಳೆ ಶಾರದಮ್ಮ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ಬೆಳೆಸಿದ್ದರು ಇದಕ್ಕೆ ಸಂಬಂಧಿಸಿದಂತೆ ರೈತ ಮಹಿಳೆ ಶಾರದಮ್ಮ ಕೋರ್ಟ್ ಮೊರೆ ಹೋಗಿದ್ದರು ಇದಕ್ಕೆ ಸಂಬಂಧಿಸಿದಂತೆ ರೈತ ಮಹಿಳೆ ಶಾರದಮ್ಮ ಇಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಾಳೆ ತಡೆಯಾಜ್ಞೆ ಅರ್ಜಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸೋಮವಾರ ನೀಡಲಿದ್ದೇವೆ ಎಂದು ಅಂಗಲಾಚಿದರು ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದಕ್ಕೂ ಜಗ್ಗದೆ ಭಾನುವಾರ ಏಕಾಏಕಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ಉರುಳಿಸುವ ಮೂಲಕ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹತ್ತು ವರ್ಷದ ಹಿಂದೆ ಸರ್ವೆ ಕಲ್ಲನು ಹಾಕಿದ್ದು ಇಂದು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಮರಗಳನ್ನು ತೆರವುಗೊಳಿಸಿದ ಇದರಿಂದ ರೈತ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ಕಳೆದ ಮೂರು ವರ್ಷದ ಹಿಂದೆಯೇ ಸಹ ಗುಬ್ಬಿ ತಾಲೂಕಿನ ಮತ್ತೋರ್ವ ರೈತ ಮಹಿಳೆಗೂ ಇದೇತರಹದ ಅಧಿಕಾರಿಗಳು ಹಲವು ವರ್ಷಗಳಿಂದ ಬೆಳೆಸಿದ್ದ ಮರಗಳನ್ನು ಕಡಿದು ಹಾಕಿದ್ದು . ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು ಆದರೆ ಪುನಹ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ರೈತ ಕುಟುಂಬ ಬೀದಿಗೆ ಬಿದ್ದಂತಾಗಿ ಇರುವುದು ವಿಪರ್ಯಾಸವೇ ಸರಿ.
ಅದೇನೇ ಇರಲಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡುವರೆ ಕಾದುನೋಡಬೇಕಾಗಿದೆ.