ಅಕ್ರಮ ಮಣ್ಣು ಮಾಫಿಯಾಗೆ ಬ್ರೇಕ್ ಹಾಕಲು ಹಿಂದೇಟು ಹಾಕಿದ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ…?
ತುಮಕೂರು-ತುಮಕೂರು ತಾಲ್ಲೂಕು ಚಿಕ್ಕತೊಟ್ಲುಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ,ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಕಂದಾಯ ಇಲಾಖೆ,ಅರಣ್ಯಿಇಲಾಖೆ ಹಾಗೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿವೆ.
ಕಳೆದ ಹಲವಾರು ದಿನಗಳಿಂದ ಚಿಕ್ಕತೊಟ್ಲುಕೆರೆ ಗ್ರಾಮದ ಸರ್ಕಾರಿ ಭೂಮಿ ಹಾಗೂ ಬೆಟ್ಟದ ತಪ್ಪಲು ಪ್ರದೇಶಗಳಿಂದ ರಾಜಾರೋಷವಾಗಿ ಮಣ್ಣು ಸಾಗಣೆ ನಡೆಯುತ್ತಿದೆ,ರಸ್ತೆ ಭಾರಮಿತಿಗಿಂತಲೂ ಹೆಚ್ಚು ಮಣ್ಣು ತುಂಬಿ 10 ಚಕ್ರಗಳ ಲಾರಿಗಳ ಓಡಾಡುತ್ತಿದ್ದು ರಸ್ತೆ ಹಾಳಾಗುತ್ತಿದೆ ಎಂದು ಪ್ರಜ್ಙಾವಂತರು ಆರೋಪಿಸಿದ್ದಾರೆ.
ಲಾರಿಗಳ ವೇಗದ ಸಂಚಾರದಿಂದ ದ್ವಿಚಕ್ರವಾಹನ ಸವಾರರು, ಶಾಲಾ ಮಕ್ಕಳು ಈ ರಸ್ತೆಯಲ್ಲಿ ಜೀವ ಬಿಗಿಹಿಡಿದು ಓಡಾಡುವ ಸ್ತಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ತುಮಕೂರಿನ ಪ್ರಭಾವಿ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ತುಮಕೂರಿನಲ್ಲಿ ನಡೆಸುತ್ತಿರುವ ರಸ್ತೆ ಕಾಮಗಾರಿಗೆ ಈ ಮಣ್ಣು ಸಾಗಿಸಲಾಗುತ್ತಿದೆ ಎಂಬ ಆರೋಪಗಳೂ ಸಹ ಕೇಳಿ ಬರುತ್ತಿವೆ,ಸರ್ಕಾರದ ಆಸ್ತಿ ಕಾಪಾಡಬೇಕಾದ ಸರ್ಕಾರಿ ಅಧಿಕಾರಿಗಳು ಸರ್ಕಾರದ ಜಮೀನು ಖಾಸಗಿಯವರು ಕೊಳ್ಳೆ ಹೊಡೆಯುತ್ತಿದ್ದರೂ ಸಹ ಮೌನಕ್ಕೆ ಶರಣಾಗಿದ್ದಾರೆ,ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ,ದಂಧೆ ತಡೆಯುವಲ್ಲಿ ತಾಲ್ಲೂಕು ಆಡಳಿತ ವಿಫಲವಾಯಿತೇ ಅಥವ ದಂಧೆಕೋರರೊಂದಿಗೆ ಶಾಮೀಲಾಯಿತೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡತೊಡಗಿದೆ .