ಆಟೋ ಚಾಲಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಟೋ ಚಾಲಕರ ಒತ್ತಾಯ.

ನಗರದಲ್ಲಿ ಆಟೋ ನಿಲ್ದಾಣ ನಿರ್ಮಿಸಿ ಆಟೋ ಚಾಲಕರ ರಕ್ಷಣೆಗೆ ಮುಂದಾಗಲು ಆಟೋ ಚಾಲಕರ ಒತ್ತಾಯ

 

ತುಮಕೂರು_ ನಗರದ ಪ್ರಮುಖ ರಸ್ತೆಗಳಲ್ಲಿ ಆಟೋ ನಿಲ್ದಾಣ ಇಲ್ಲದೆ ಆಟೋ ಚಾಲಕರು ಹೈರಾಣಗಿದ್ದು ಕೂಡಲೇ ಜಿಲ್ಲಾಡಳಿತ ಪ್ರಮುಖ ರಸ್ತೆಗಳಲ್ಲಿ ಆಟೋ ನಿಲ್ದಾಣ ಸ್ಥಾಪನೆ ಮಾಡುವ ಮೂಲಕ ಆಟೋ ಚಾಲಕರಿಗೆ ಅನುಕುಲ ಮಾಡುವುದರೊಂದಿಗೆ ಆಟೋ ಚಾಲಕರ ರಕ್ಷಣೆಗೆ ತುಮಕೂರು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರತಾಪ್ ಒತ್ತಾಯಿಸಿದ್ದಾರೆ.

 

 

 

ಶುಕ್ರವಾರ ಮಧ್ಯಾನ ದಿಡೀರ್ ಪ್ರತಿಭಟನೆ ನಡೆಸಿದ ಆಟೋ ಚಾಲಕರು ಸಂಚಾರಿ ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದು ಇನ್ನು ತುಮಕೂರು ಹೃದಯ ಭಾಗವಾದ ಬಸ್ ನಿಲ್ದಾಣದ ಎದುರು ಆಟೋ ನಿಲ್ದಾಣ ಇಲ್ಲದ ಕಾರಣ ರಸ್ತೆಯಲ್ಲಿ ಆಟೋಗಳನ್ನು ನಿಲ್ಲಿಸುವ ವೇಳೆಯಲ್ಲಿ ಸಂಚಾರಿ ಪೊಲೀಸರಿಂದ ಸಹ ತೀವ್ರ ತೊಂದರೆ ಉಂಟಾಗುತ್ತಿದ್ದು ದುಬಾರಿ ಮೊತ್ತದ ದಂಡ ಹಾಕುವ ಮೂಲಕ ಆಟೋ ಚಾಲಕರಿಗೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ಆಟೋ ಚಾಲಕರ ಜೀವನ ಸoಕಷ್ಟಕ್ಕೆ ಇಡಾಗಿದ್ದು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಆಟೋ ಚಾಲಕರ ರಕ್ಷಣೆಗೆ ಮುಂದಾಗಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.

 

 

ಇನ್ನು ತುಮಕೂರು ನಗರದಲ್ಲಿ ಇದ್ದ ಹಳೆಯ ಆಟೋ ನಿಲ್ದಾಣಗಳನ್ನು ನಗರವನ್ನ ಅಭಿವೃದ್ಧಿ ಮಾಡುವ ಹೆಸರಿನಲ್ಲಿ ತೆರವುಗೊಳಿಸಿ ಈಗ ಇರುವ ಬೆರಣಿಕೆಯಷ್ಟು ಆಟೋ ನಿಲ್ದಾಣಗಳಲ್ಲಿ ಆಟೋಗಳನ್ನು ನಿಲ್ಲಿಸಲು ಸ್ಥಳವಿಲ್ಲದೆ ರಸ್ತೆಯಲ್ಲಿ ನಿಲ್ಲಿಸಿಕೊಳ್ಳುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೂ ಸಹ ತೊಂದರೆ ಆಗುತ್ತಿದ್ದು ಜಿಲ್ಲಾಡಳಿತ ಆಟೋ ಚಾಲಕರ ರಕ್ಷಣೆ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಆಟೋ ಚಾಲಕರ ರಕ್ಷಣೆಗೆ ಮುಂದಾಗ ಬೇಕಾಗಿದೆ ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಆಟೋ ಚಾಲಕರ ಅಧ್ಯಕ್ಷ ಪ್ರತಾಪ್ ಆಕ್ರೋಶ ಹೊರಹಾಕಿದ್ದಾರೆ.

 

 

 

ಇನ್ನು ಕೊರೋನಾ ಬಂದಾಗಿನಿಂದ ಆಟೋ ಚಾಲಕರ ಜೀವನ ಸಂಪೂರ್ಣ ದುಸ್ಥಿತಿಯಲ್ಲಿದ್ದು ಸರ್ಕಾರದ ಬೋಕ್ಕಸಕ್ಕೆ ಆಟೋ ಚಾಲಕರಿಂದ ದುಬಾರಿ ಮತ್ತದ ತೆರಿಗೆ ಸಹ ಸಂದಾಯವಾಗುತ್ತಿದೆ ಇನ್ನು ಆಟೋ ಚಾಲಕರು ಇನ್ಸೂರೆನ್ಸ್ ಟ್ಯಾಕ್ಸ್ ಹೆಸರಿನಲ್ಲಿ ಹಣ ಸಂದಾಯ ಮಾಡುತ್ತಿದ್ದರೂ ಸಹ ಆಟೋ ಚಾಲಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಆಟೋ ಚಾಲಕರ ರಕ್ಷಣೆಗೆ ಮುಂದಾಗಬೇಕು ಎಂದರು.

 

 

 

 

 

ಇನ್ನು ತುಮಕೂರು ನಗರದಲ್ಲಿ 10,000ಕ್ಕೂ ಹೆಚ್ಚು ಆಟೋಗಳಿಗೆ ಅನುಮತಿ ನೀಡಲಾಗಿದ್ದು ಇದರ ಜೊತೆಯಲ್ಲಿ ಅನಧಿಕೃತ ಆಟಗಳ ಸಂಚಾರವು ಸಹ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅನುಮತಿ ಪಡೆದ ಆಟೋ ಚಾಲಕರಿಗೂ ಸಹ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಆಟೋ ಚಾಲಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

 

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version