ಕೆರೆಗೋಡೂ ನಲ್ಲಿ ಹಾರಿಸಿದ್ದು ಪಾಕಿಸ್ತಾನದ ಬಾವುಟವಲ್ಲ ಹನುಮ ಧ್ವಜ, ರಾಜ್ಯದ ಮತ್ತೊಂದು ಈದ್ಗ ಮೈದಾನ ಆಗುತ್ತೆ – ಶಾಸಕ ಸುರೇಶ ಗೌಡ ವಿವಾದಾತ್ಮಕ ಹೇಳಿಕೆ.

ಕೆರೆಗೋಡಿನಲ್ಲಿ ಹಾರಿಸಿದ್ದು ಪಾಕಿಸ್ತಾನದ ಬಾವುಟವಲ್ಲ ಹನುಮ ಧ್ವಜ, ರಾಜ್ಯದ ಮತ್ತೊಂದು ಈದ್ಗ ಮೈದಾನ ಆಗುತ್ತೆ – ಶಾಸಕ ಸುರೇಶ ಗೌಡ ವಿವಾದಾತ್ಮಕ ಹೇಳಿಕೆ.

 

 

 

 

ತುಮಕೂರು _ ಕೆರೆಗೋಡು ಹನುಮ ದ್ವಜ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ್ಯಂತ ಬಿಜೆಪಿ ಬೀದಿಗಳಿದು ಬಾವುಟ ತೆರವುಗೊಳಿಸಿದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಇದರ ಹಿನ್ನೆಲೆಯಲ್ಲಿ ತುಮಕೂರಿನಲ್ಲೂ ಸಹ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸರ್ಕಾರದ ಧೋರಣೆ ಘಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಬ್ಬಕ ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

ಪ್ರತಿಭಟನೆ ವೇಳೆ ಮಾತನಾಡಿರುವ ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು ಕೆರಗೋಡಿನಲ್ಲಿ ಹಾರಿಸಿದ್ದು ಪಾಕಿಸ್ತಾನದ ಬಾವುಟವಲ್ಲ ಬದಲಿಗೆ ಹನುಮದ್ವಜ ಹಾರಿಸಿರುವುದು, ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಎಂದಿರುವ ಅವರು ರಾಜ್ಯ ಸರ್ಕಾರ ಗುಂಡ ಸರ್ಕಾರದಂತೆ ವರ್ತಿಸುತ್ತಿದ್ದು ಕೆರೆಗೋಡು ರಾಜ್ಯದ ಮತ್ತೊಂದು ಈದ್ಗಾ ಮೈದಾನವಾಗಿ ಬದಲಾವಣೆಯಾಗುತ್ತೆ ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಾಶವಾಗುತ್ತೆ ಆ ಮೂಲಕ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಜೊತೆಗೆ ಕೆರೆಗೋಡು ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

 

ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ  ಮನಿವಿ ಪತ್ರ ಸಲ್ಲಿಸಿದರು ಪ್ರತಿಭಟನೆ ವೇಳೆ ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿ ಗಣೇಶ್ ,ಸಂಸದ ಜಿಎಸ್ ಬಸವರಾಜು, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿ ನಾಯ್ಕರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version