ತುಮಕೂರು ನಗರದಲ್ಲಿ ನಿಲ್ಲದ ಫ್ಲಕ್ಸ್ ಜಟಾಪಟಿ.
ತುಮಕೂರು_ತುಮಕೂರು ನಗರದಲ್ಲಿ ಫ್ಲಕ್ಸ್ ಅಳವಡಿಕೆ ಸಂಬಂಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ತುಮಕೂರು ನಗರದ ಅಂತರಸನಹಳ್ಳಿ ಯಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಸಾವರ್ಕರ್ ಭಾವಚಿತ್ರದೊಂದಿಗೆ ಫ್ಲೆಕ್ಸ್ ಅಳವಡಿಸಿದ್ದು ಇನ್ನು ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಗಣಪತಿ ಹಬ್ಬದ ಪ್ರಯುಕ್ತ ಶುಭ ಕುರಿ ಅಳವಡಿಸಲಾಗಿರುವ ಫ್ಲಕ್ಸ್ ಗಳನ್ನು ವಿನಾಕಾರಣ ತೆರವುಗೊಳಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಾಲಿಕೆ ಹಾಗೂ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಪಾಲಿಕೆ ವತಿಯಿಂದ ಪೂರ್ವ ಅನುಮತಿಯ ಅವಶ್ಯಕತೆ ಇದ್ದು ಅದನ್ನ ಪಡೆಯುವ ಸಂದರ್ಭದಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಆದರೆ ಅಳವಡಿಸಿರುವ ಫ್ಲಕ್ಸ್ ಗಳನ್ನು ತೆರವುಗೊಳಿಸುವ ಕೆಲಸಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಅಂತರಸನಹಳ್ಳಿ ಬಳಿ ಗೌರಿ ಹಾಗೂ ಗಣಪತಿ ಹಬ್ಬದ ಪ್ರಯುಕ್ತ ಶುಭಕೋರಿ ಅಳವಡಿಸಲಾಗಿರುವ ಫ್ಲಕ್ಸ್ ಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಅಳವಡಿಸಿರುವ ಫ್ಲಕ್ಸ್ ಗಳನ್ನು ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಫ್ಲೆಕ್ಸ್ ಅಳವಡಿಕೆ ಸಂಬಂಧ ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸುವ ಸಂಬಂಧ ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು ಅದರಂತೆಯೇ ಫ್ಲಕ್ಸ್ ಗಳನ್ನು ಅಳವಡಿಸಬೇಕು ಎಂದು ಆದೇಶಿಸಿದೆ ಆದರೆ ಇನ್ನು ಫ್ಲಕ್ಸ್ ಜಟಾಪಟಿ ಇನ್ನೂ ಮುಂದುವರೆದಿದೆ