ಕುಲದಲ್ಲಿ ಕೀಳ್ಯಾವೂದೋ ಹುಚ್ಚಪ್ಪ ಹಾಡಿಗೆ ಸಖತ್ ಸ್ಟೆಪ್ ಹಾಕಿ ನಿರಾಶ್ರಿತರನ್ನು ರಂಜಿಸಿದ ತಹಶಿಲ್ದಾರ್...
ದಾವಣಗೆರೆ:- ಅಧಿಕಾರಿಗಳೆಂದ್ರೇ ಸರ್ಕಾರಿ ಕೆಲಸಕ್ಕೆ ಸೀಮಿತವಾಗಿರ್ತಾರೆ, ಇಲ್ಲ ಮನೆ ಬಿಟ್ರೇ ಕಚೇರಿ, ಕಚೇರಿ ಬಿಟ್ಟರೆ ಮನೆ ಎಂಬಂತೆ ಮೈಡ್ ಸೆಟ್ ಮಾಡಿಕೊಂಡಿರುತ್ತಾರೆ. ಅದ್ರೇ ಇಲ್ಲೊಬ್ಬರು ತಹಶಿಲ್ದಾರ್ ನಾನು ಅಧಿಕಾರಿ ಎಂಬ ಅಹಂಕಾರ ಬಿಟ್ಟು ನಿರಾಶ್ರಿತರರೊಂದಿಗೆ ಸಖತ್ತಾಗಿ ಕುಣಿದು ಕುಪ್ಪಳಿಸಿ ನಿರಾಶ್ರಿತರಿಗೆ ರಂಜಿಸಿದ್ದಾರೆ. ಹೌದು…ದಾವಣಗೆರೆ ತಹಶಿಲ್ದಾರ್ ಗಿರೀಶ್ ರವರು
ಕುಲದಲ್ಲಿ ಕೀಳ್ಯಾವೂದೋ ಹುಚ್ಚಪ್ಪ ಹಾಡಿಗೆ ಸಖತ್ ಸ್ಟೆಪ್ ಹಾಕಿ ನಿರಾಶ್ರಿತರನ್ನು ರಂಜಿಸಿದರು, ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕೇಂದ್ರದಲ್ಲಿ ಕಳೆದ ದಿನ ಹಬ್ಬದ ವಾತವರಣ ನಿರ್ಮಾಣ ಆಗಿತ್ತು. ಊರು ಮನೆ ಕುಟುಂಬ ಬಿಟ್ಟು ಬಂದಿದ್ದ ನಿರಾಶ್ರಿತರಿಗೆ ಹಬ್ಬವನ್ನು ಆಚರಣೆ ಮಾಡಿಲ್ವಲ್ಲ ಎಂಬ ಕೊರಗನ್ನು ತಹಶಿಲ್ದಾರ್ ಹಾಗು ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕರಾದ ನಳೀನಿಯವರು ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಿರಾಶ್ರಿತರಿಗೆ ರಂಜಿಸಿದ್ರು. ಇನ್ನು ಗಣೇಶನನ್ನು ಮೂರು ದಿನಗಳ ಬಳಿಕ ಗಣೇಶನ ನಿಮಜ್ಜನ ಮಾಡಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ದಾವಣಗೆರೆ ತಹಶಿಲ್ದಾರ್ ಗಿರೀಶ್ ಭಾಗಿಯಾಗಿ ನಿರಾಶ್ರಿತರೊಂದಿಗೆ ಕುಲದಲ್ಲಿ ಕೀಳ್ಯಾವೂದೋ ಹುಚ್ಚಪ್ಪ, ಹಾಗು ಹುಟ್ಟಿದ್ರೇ ಕನ್ನಡ ನಾಡಿನಲ್ಲಿ ಹುಟ್ಟಬೇಕೆ ಹಾಡಿಗೆ ನಿರಾಶ್ರಿತರೊಂದಿಗೆ ಸಖತ್ ಸ್ಟೆಪ್ ಹಾಕಿ ರಂಜಿಸಿದರು.