ಗ್ರಾಮಾಂತರ ಕ್ಷೇತ್ರದಲ್ಲಿ ಇಂದು ನಡೆದ 7 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆ ಪೈಕಿ 6 ರಲ್ಲಿ ಬಿಜೆಪಿ – ಬಿ.ಸುರೇಶಗೌಡ
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ 7 ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ
ಆರು ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಇಂದು ಪದಗ್ರಹಣ ಮಾಡಿದರು ಎಂದು ಮಾಜಿ ಶಾಸಕ ಬಿ ಸುರೇಶ ಗೌಡ ತಿಳಿಸಿದರು.
ಇಂದು ತುಮಕೂರಿನಲ್ಲಿ ನೂತನವಾಗಿ ಆಯ್ಕೆ ಅದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಸನ್ಮಾನಿಸಿ ಬಿ.ಸುರೇಶಗೌಡ ಮಾತನಾಡಿದರು.
ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರಗಳ ಆಯ್ಕೆ ಚುನಾವಣೆಯಲ್ಲಿ ಗಳಿಗೆನಹಳ್ಳಿ, ಕೆಸರುಮಡು, ಮಲ್ಲಸಂದ್ರ, ಸ್ವಾಂದೇನಹಳ್ಳಿ, ದೊಡ್ಡನಾರವಂಗಲ, ತಿಮ್ಮರಾಜನಹಳ್ಳಿ. ಗ್ರಾಮಪಂಚಾಯಿತಿಗಳ ಅಧ್ಯಕ್ಷರುಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಸುರೇಶ್ ಗೌಡ ತಿಳಿಸಿದರು.
ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಸದೃಢವಾಗಿದೆ. ಪ್ರತಿ ಮತಗಟ್ಟೆಯಲ್ಲೂ ಕೂಡ ಕಾರ್ಯಕರ್ತರ ಪಡೆ ಇರುವ ಕಾರಣದಿಂದ ನಮ್ಮಲ್ಲಿ ಅತೀ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆ ಆಗಿದ್ದಾರೆ ಎಂದು ಬಿ.ಸುರೇಶ್ ಗೌಡ ತಿಳಿಸಿದರು.
ಗ್ರಾಮಗಳ ಸಬಲೀಕರಣಕ್ಕಾಗಿ ಗಾಂಧೀಜಿಯವರು ಕಂಡ ಕನಸು ನನಸು ಮಾಡಲು ಗ್ರಾಮ ಸ್ವರಾಜ್ಯಗಳಾಗಲು ಗ್ರಾಮಮಟ್ಟದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಸೌಲಭ್ಯಗಳನ್ನು ನೀಡಲು ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಂದ ಗ್ರಾಮಮಟ್ಟದಲ್ಲಿ ಉತ್ತಮ ಆಡಳಿತ ನೀಡಲು ಸೂಕ್ತ ತರಬೇತಿ ಮತ್ತು ಅರಿವು ಮೂಡಿಸುವುದಾಗಿ ಬಿ. ಸುರೇಶಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕೂಡ ಅಭಿವೃದ್ಧಿಗೆ ಒಂದು ಹೆಸರುವಾಸಿಯಾದ ಅಂತ ಕ್ಷೇತ್ರ, ಈ ಹಿಂದೆ ನನ್ನ ಕಾಲಾವಧಿಯಲ್ಲಿ ಆಗಿರುವಂತ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಬೆಂಬಲದಿಂದ ಆಯ್ಕೆಗೊಂಡಿರುವ ನೂತನ ಗ್ರಾಮ ಪಂಚಾಯತಿ ಸದಸ್ಯರು ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಬಿ. ಸುರೇಶಗೌಡ ತಿಳಿಸಿದರು.