ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ವಿದ್ಯಾರ್ಥಿಗಳು.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ವಿದ್ಯಾರ್ಥಿಗಳು.

 

 

 

ತುಮಕೂರು_ವಾಹನ ಸವಾರರಿಗೆ ಸರ್ಕಾರದ ಸಂಚಾರಿ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾದದ್ದು.

 

ಸಂಚಾರಿ ಪೊಲೀಸರು ವಾಹನ ಸವಾರರಿಗೆ ಪದೇಪದೇ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಹಲವುಬಾರಿ ಮನವಿ ಮಾಡುತ್ತಲೇ ಇದ್ದರೂ ಸಹ ಕೆಲ ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಭಂಡತನ ಪ್ರದರ್ಶಿಸುವುದು, ಪೊಲೀಸರ ಮೇಲೆ ಹಲ್ಲೆ ನಡೆಸುವುದು ಸೇರಿದಂತೆ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ.

 

 

ಆದರೆ ತುಮಕೂರಿನ ಭದ್ರಮ್ಮ ವೃತ್ತದ ಬಳಿ ಕಳೆದ ಮಂಗಳವಾರದಂದು ಕರ್ತವ್ಯದಲ್ಲಿ ನಿರತರಾಗಿದ್ದ ಸಂಚಾರಿ ಪೊಲೀಸರನ್ನು ಕಂಡ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸದೆ , ತ್ರಿಬಲ್ ರೈಡ್ ಮಾಡಿಕೊಂಡು ಬರುತ್ತಿದ್ದ ಕೂಡಲೇ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರನ್ನು ಕಂಡು ಅವರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ತುಮಕೂರಿನ ಹೈಸ್ಕೂಲ್ ಗ್ರೌಂಡ್ ಆವರಣದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಬೈಕ್ ಏಕಾಏಕಿ ಮೈದಾನದಲ್ಲಿ ಬಿದ್ದ ಕಾರಣ, ಬೈಕ್ ನಲ್ಲಿ ಕುಳಿತಿದ್ದ ಇಬ್ಬರು ಹಾಗೂ ಬೈಕ್ ಸವಾರ ….. ಎದ್ದೆನೋ…. ಬಿದ್ದೆನೋ…..ಎಂದು ಬಿದ್ದಿದ್ದ ಬೈಕ್ ಅನ್ನು ಎತ್ತಿಕೊಂಡು ಸ್ಥಳದಿಂದ ಪಲಾಯನಗೈದಿದ್ದಾರೆ.

 

 

 

 

ಇನ್ನು ಸ್ಥಳದಲ್ಲೇ ಇದ್ದ ಸಂಚಾರಿ ಪೊಲೀಸರು ಸಹ ಬೈಕ್ ಸವಾರರು ಬಿದ್ದ ತಕ್ಷಣ ಅವರ ನೆರವಿಗೆ ಸಹ ಧಾವಿಸಿದ್ದಾರೆ ಆದರೆ ಬೈಕನ್ನು ಏರಿದ ಮಹಾನುಭಾವ ಹಿಂತಿರುಗಿ ನೋಡದೆ ಕಣ್ಮರೆಯಾದ ಘಟನೆ ವರದಿಯಾಗಿದೆ.

 

 

 

ಇನ್ನು ಪದೇಪದೇ ಸಂಚಾರಿ ನಿಯಮಗಳನ್ನು ವಾಹನ ಸವಾರರು ಪಾಲಿಸದೆ ಇರುವ ಕಾರಣ ಇಂತಹ ಘಟನೆಗಳು ನಡೆಯುತ್ತಿದ್ದು ಸಾರ್ವಜನಿಕರು ಕೇವಲ ಸಂಚಾರಿ ಪೊಲೀಸರನ್ನು ದೂರುವ ಬದಲು ತಾವಾಗಿಯೇ ಅರಿತು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಈ ಮೂಲಕ  ಸಂಚಾರಿ ಪೊಲೀಸರೊಂದಿಗೆ ಸಹಕರಿಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಿಳಿಸಿದರು.

 

 

ವರದಿ_ಮಾರುತಿ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version