ವೆಂಟಿಲೇಟರ್ ಬಗ್ಗೆ ನಿಮಗೆಷ್ಟು ಗೊತ್ತು?

 

ಇಂದು ಆಕ್ಸಿಜನ್, ವೆಂಟಿಲೇಟರ್ ಗಳ ಬಗ್ಗೆಯೇ ಎಲ್ಲೆಲ್ಲೂ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೊರೋನ ಸೋಂಕಿನ ತೀವ್ರತೆಯ ಕಾರಣದಿಂದ ದೇಶದ ಹಲವು ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ಇವು ಲಭ್ಯವಾಗದಿರುವುದು ಇಂದು ಅಸಂಖ್ಯಾತ ಸಾವು ನೋವಿಗೆ ಕಾರಣವಾಗಿದೆ. ಕೃತಕ ವಾಯು ನೀಡಿ ರೋಗಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನಗಳು 20ನೇ ಶತಮಾನದಲ್ಲಿ ಸಾಂಕ್ರಾಮಿಕವಾಗಿ ಹಬ್ಬಿದ ಪೊಲೀಯೋ ರೋಗದ ಕಾರಣದಿಂದಾಗಿ ಶುರುವಾದವು. ಜೀವಾನಿಲವಾದ ಆಕ್ಸಿಜನ್ ಅಥವ ಆಮ್ಲಜನಕದ ಬಗ್ಗೆ 16ನೇ ಶತಮಾನದಲ್ಲಿ ಬಾಳಿದ ಮೈಕೆಲ್ ಸೆಂಡಿವೋಜಿಯಸ್ ರಿಂದ ಹಿಡಿದು ಜೊಸೆಫ್ ಪ್ರೀಸ್ಟ್ಲೆ, ಕಾರ್ಲ್ ಶೀಲೆ, ಆಂಟೋನಿ ಲೆವೋಸಿಯರ್, ಜಾರ್ಜ್ ಹೋಲ್ಟ್ ಝಪ್ಪಲ್, ಫಿಲಿಪ್ ಡ್ರಿಂಕರ್, ಫಾರೆಸ್ಟ್ ಬರ್ಡ್, ಜಾನ್ ಹ್ಯಾಮರ್ಸನ್ ಮೊದಲಾದವರು ಹಗಲಿರುಳು ಶ್ರಮಪಟ್ಟು, ಹಣ ಹೂಡಿ ನಡೆಸಿದ ಸಂಶೋಧನೆಗಳು, ಪ್ರಯೋಗಗಳು ಇಂದು ಮನುಕುಲಕ್ಕೆ ವರದಾನವಾಗಿವೆ. ವೆಂಟಿಲೇಟರ್ ನೆರವಿನಿಂದ ಬದುಕುಳಿದು ಬಂದವರು ಇಂತಹ ಮಹನೀಯರನ್ನು ಸ್ಮರಿಸುವುದು ಅಗತ್ಯ.

 

ಇಲ್ಲಿ ಹಾಕಿರುವ ಚಿತ್ರ 65 ವರ್ಷಗಳ ಹಿಂದೆ ಪೊಲಿಯೋ ಕಾರಣಕ್ಕಾಗಿ ಸಾಮೂಹಿಕವಾಗಿ ಬಳಸಲಾದ ಡ್ರಿಂಕರ್ ರೆಸ್ಪೆರೇಟರ್ (ಐರನ್ ಲಂಗ್) ಯಂತ್ರಗಳು. ಸಂಶೋಧಕ ಫಿಲಿಪ್ ಡ್ರಿಂಕರ್ ರೋಗಿಗಳಿಗೆ ಕೃತಕವಾಗಿ ವಾಯು ನೀಡುವ ಯಂತ್ರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ತಮ್ಮನ್ನೇ ತಾವು ಪ್ರಯೋಗಕ್ಕೆ ಒಡ್ಡಿಕೊಂಡಿದ್ದರು. ಆನಂತರ ಬೋಸ್ಟನ್ ನ ಆಸ್ಪತ್ರೆಯೊಂದರಲ್ಲಿ ಮೊದಲ ಬಾರಿ ಪೊಲೀಯೋ ಪೀಡಿತ 8 ವರ್ಷದ ಬಾಲಕಿಗಾಗಿ ಈ ಯಂತ್ರವನ್ನು ಬಳಸಲಾಯ್ತು. ಮೊದಲ ಸಲವಾದ್ದರಿಂದ ಪ್ರಜ್ಞಾಹೀನಳಾಗಿದ್ದ ಬಾಲಕಿಯನ್ನು ಒಳಗೆ ಮಲಗಿಸಿ ಸ್ವಿಚ್ ಆನ್ ಮಾಡಲು ಆಸ್ಪತ್ರೆ ಸಿಬ್ಬಂದಿ ಹೆದರಿದ್ದರು. ಆಗ ತಾವೇ ಬಂದು ಸ್ವಿಚ್ ಆನ್ ಮಾಡಿದ ಡ್ರಿಂಕರ್ ನಿಮಿಷದ ನಂತರ ಬಾಲಕಿಗೆ ಪ್ರಜ್ಞೆ ಬಂದುದನ್ನು ನೋಡಿ “ಅಲ್ಲಿಯೇ ಅಳುತ್ತಾ” ನಿಂತಿದ್ದರಂತೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version