ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಪೋಟೋ ನೋಡಿ ಹಳೆ ಪ್ರೇಯಸಿ ಹುಡುಕಿ ಬಂದು ಮಾರಣಾಂತಿಕ ಹಲ್ಲೆ; ಆರೋಪಿ ಬಂಧನ

 

ಗೋಕರ್ಣ: ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹರಿಯಾಣ ಮೂಲದ ಪ್ರವಾಸಿಯೊಬ್ಬಳಿಗೆ ಅವಳ ಮಾಜಿ ಪ್ರಿಯತಮ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

ಮಾಜಿ ಪ್ರೇಯಸಿ ಗೋಕರ್ಣಕ್ಕೆ ಬಂದ ಬಗ್ಗೆ ಇನ್ಸ್ಟಾ ಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಳು. ಫೆÇೀಟೋ ನೋಡಿ ಮಾಹಿತಿಯನ್ನು ಪಡೆದುಕೊಂಡು ಗೋಕರ್ಣದ ಕುಡ್ಲೆ ಬೀಚ್‍ನಲ್ಲಿರುವ ರೇಸಾರ್ಟವೊಂದರಲ್ಲಿ ಉಳಿದುಕೊಂಡಿರುವ ಮಾಹಿತಿ ಪಡೆದು ಗೋಕರ್ಣಕ್ಕೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದ. ತುಷಾರ ಮರಾಠ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನ ಪಟ್ಟ ಆರೋಪಿ. ಈತ ಮಹಾರಾಷ್ಟ್ರದ ಪುಣೆ ಮೂಲದವನೆಂದು ತಿಳಿದುಬಂದಿದೆ.

 

ಪುಣೆಯಿಂದ ಬಸ್ ಮುಖಾಂತರ ಕುಮಟಾ ಬಂದು ಅಟೋ ರಿಕ್ಷಾ ಮೂಲಕ ಗೋಕರ್ಣದ ಕುಡ್ಲೆ ಬೀಚ್ ಗೆ ಬಂದು ಇನ್ಸ್ಟಾ ಗ್ರಾಂನಲ್ಲಿ ಅಪ್ಲೋಡ್ಡ್ ಮಾಡಿದ ಫೋಟೊ ಸಹಾಯದಿಂದ ಅವಳು ಉಳಿದುಕೊಂಡಿರುವ ರೆಸಾರ್ಟ್ ಪತ್ತೆ ಹಚ್ಚಿ ಅವಳು ಉಳಿದಿರುವ ರೂಂ ಸಹ ಖಾತ್ರಿಪಡಿಸಿಕೊಂಡು, ಅವಳ ಚಲನ ವಲನ ಗಮನಿಸಿ ಅವಳ ಗೆಳತಿಯರು ಇಲ್ಲದ ಸಮಯ ನೋಡಿ ಅವಳ ರೂಂ ಪ್ರವೇಶಿಸಿ ಮುಖಕ್ಕೆ ಬಲವಾಗಿ ಹಲ್ಲೆ ಮಾಡಿದ್ದಲ್ಲದೇ, ಹೆರ್ ಡ್ರೈಯರ್ ವಾಯರ್ ನಿಂದ ಕತ್ತು ಹಿಸುಕಿ ಪೆನ್ ನಿಂದ ಕುತ್ತಿಗೆ ಮತ್ತು ಕಣ್ಣುಗಳಿಗೆ ಚುಚ್ಚಿ ಪ್ರಜೆ ತಪ್ಪಿದಾಗ ಮೃತಪಟ್ಟಳೆಂದು ಮತ್ತೆ ಪುಣೆಗೆ ಪರಾರಿಯಾಗಿದ್ದ. ಮಾಹಿತಿಯನ್ನು ಕಲೆ ಹಾಕಿದ ಗೋಕರ್ಣ ಪೋಲಿಸರು ವೇಶ ಬದಲಿಸಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂದಿಸಿ ಗೋಕರ್ಣಕ್ಕೆ ಎಳೆದು ತಂದಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version