ಖಾಸಗಿ ಬಸ್ ಪಲ್ಟಿ ಆರು ಜನರ ದುರ್ಮರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ.
ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಭೀಕರ ಶನಿವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಖಾಸಗಿ ಬಸ್ಸೊಂದು ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಪಾವಗಡಕ್ಕೆ 5 ಕಿಲೋಮೀಟರ್ ಸಮೀಪವಿರುವ ಪಳವಳ್ಳಿ ಕಟ್ಟೆ ಬಳಿ ವೈ.ಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಬರುತ್ತಿದ ಎಸ್ ವಿ ಟಿ ಎಂಬ ಖಾಸಗಿ ಬಸ್ಸು ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಉರುಳಿಬಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು 25 ಅಧಿಕ ಮಂದಿಗೆ ತೀವ್ರ ತರನಾಗಿ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹಾಗೂ ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವೈಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಸುಮಾರು 27 ಕಿಲೋಮೀಟರ್ ದೂರವಿದ್ದು ಎಂದಿನಂತೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ಸು ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಪರಿಣಾಮ ಉರುಳಿಬಿದ್ದು ಈ ದುರ್ಘಟನೆ ಸಂಭವಿಸಿದೆ
ಇನ್ನು ಪಾವಗಡ ವೈ.ಎನ್. ಹೊಸಕೋಟೆ ರಸ್ತೆಯಲ್ಲಿ ಅಂಕು ಡೊಂಕು ರಸ್ತೆಯಿದ್ದು ಬಸ್ ಚಲಾಯಿಸುವ ವೇಳೆ ವಿದ್ಯಾರ್ಥಿಗಳು ಬಸ್ ಚಾಲಕನಿಗೆ ನಿಧಾನವಾಗಿ ಬಸ್ಸನ್ನು ಚಲಾಯಿಸುವಂತೆ ಮನವಿ ಮಾಡಿದ್ದರೂ ಸಹ ಅದಕ್ಕೆ ಲಕ್ಷ್ಯ ನೀಡದ ಚಾಲಕ ಅತಿವೇಗವಾಗಿ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಬಸ್ಸಿನ ಒಳಗೆ ಸುಮಾರು 60ಕ್ಕೂ ಹೆಚ್ ಉ ಮಂದಿ ಹಾಗೂ ಬಸ್ ನ ಮೇಲೆ 40ಕ್ಕೂ ಅಧಿಕ ಮಂದಿ ಸುಮಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು.
ಸ್ಥಳದಲ್ಲೇ ಮೃತಪಟ್ಟ ನಾಲ್ಕು ಮಂದಿ ವಿದ್ಯಾರ್ಥಿಗಳ ಪೈಕಿ ಸೂಲನಾಯಕನಹಳ್ಳಿಯ ಅಮೂಲ್ಯ(16) ಅಜಿತ್(28) ಬೆಸ್ತರಹಳ್ಳಿಯ ಶಹನವಾಜ್ (18) ವೈ.ಎನ್.ಹೊಸಕೋಟೆಯ ಕಲ್ಯಾಣ್(18) ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಾವಗಡದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರೆ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ಕಾರ್ಯ ನಡೆಸಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
ವರದಿ_ಮಾರುತಿ ಪ್ರಸಾದ್ ತುಮಕೂರು