ಶಿರಾ ತಾಲ್ಲೂಕು ತಹಸೀಲ್ದಾರ ವಾಹನವನ್ನು ತಡೆದ ಟೋಲ್ ಸಿಬ್ಬಂದಿ.
ಶಿರಾ ತಾಲೂಕು ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಮಮತಾ ಅವರು ತೆರಳುತ್ತಿದ್ದ ವಾಹನವನ್ನು ಕಳ್ಳಂಬೆಳ್ಳ ಬಳಿ ಇರುವ IRB ಟೋಲ್ (ಕರೆಜೀವನಹಳ್ಳಿ )ಸಿಬ್ಬಂದಿ ವಾಹನವನ್ನು ತೆರಳಲು ಬಿಡದೆ ಟೋಲ್ ಹಣ ಕಟ್ಟಲು ಪಟ್ಟು ಹಿಡಿದ ಘಟನೆ ನಡೆದಿದ್ದು. ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಘಟನೆ ನಡೆದ ಸಂದರ್ಭದಲ್ಲಿ ತಾಸಿಲ್ದಾರರು ಐಡಿ ಕಾರ್ಡ್ ತೋರಿಸಿದರು ಸಹ ಟೋಲ್ ಕಟ್ಟಬೇಕೆಂದು ಪಟ್ಟು ಹಿಡಿದ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲೆಯಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಟೋಲ್ ನಲ್ಲಿ ಕಾರ್ಯನಿರ್ವಹಿಸುವ ಹೊರರಾಜ್ಯದ ಸಿಬ್ಬಂದಿಗಳಿಗೆ ಮಣೆ ಹಾಕುವ ಮೂಲಕ ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡದೆ ತಾರತಮ್ಯವೇ ಸಾಗುತ್ತಿರುವ ವಿರುದ್ಧ ಜಿಲ್ಲೆಯಾದ್ಯಂತ ಸಾರ್ವಜನಿಕರು ಸೇರಿದಂತೆ ಜನಪ್ರತಿನಿಧಿಗಳು ಸಹ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ತಾಲ್ಲೂಕು ದಂಡಾಧಿಕಾರಿಗಳ ಕಾರನ್ನೇ ಬಿಡದ ಸಿಬ್ಬಂದಿಗಳು ಸ್ಥಳೀಯವಾಗಿ ಪ್ರತಿದಿನವೂ ಸಂಚರಿಸುವ ವಾಹನ ಸವಾರರ ಜೊತೆ ಕಿರಿಕಿರಿ ಉಂಟು ಮಾಡುತ್ತಿರುತ್ತಾರೆ. ಇನ್ನು ಟೋಲ್ ನಲ್ಲಿ ಸರ್ವಿಸ್ ರಸ್ತೆ ಬಿಡದೆ ಸಂಪೂರ್ಣವಾಗಿ ಎಲ್ಲಾ ಮಾರ್ಗಗಳನ್ನುಹಣ ಕಟ್ಟಿಸಿಕೊಂಡು ವಾಹನಗಳನ್ನ ಬಿಡುವ ಮೂಲಕ ಟೋಲ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.
ಇನ್ನು ಘಟನೆಗೆ ಸಂಬಂಧಪಟ್ಟಂತೆ ನೆನ್ನೆ ಶಿರಾ ತಾಲ್ಲೂಕು ಪಂಚಾಯತ್ ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಟೋಲ್ ಸಿಬ್ಬಂದಿಗಳ ವಿರುದ್ಧ ವಿಧಾನಪರಿಷತ್ ಶಾಸಕರಾದ ಚಿದಾನಂದಗೌಡ ನಡೆದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಚಿದಾನಂದಗೌಡ, ರಾಮಕೃಷ್ಣ ಸೇರಿದಂತೆ ಅನೇಕರು ಪ್ರಗತಿ ಪರಿಶೀಲನಾ ಸಭೆಯಲ್ಲಿ ರ್ಗIRB ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.