ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ವೈದ್ಯರಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಅವರ ಆರೈಕೆ ಮಾಡಲು ಹಲವಾರು ತಂತ್ರಗಳನ್ನು ರೂಪಿಸುತ್ತಿದೆ, ಆದರೆ ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಯ ವ್ಯವಸ್ಥೆ ಇದಕ್ಕೆ ತದ್ವಿರುದ್ಧವಾಗಿದೆ.
ಇಂದು ಕೋವಿಡ್ ರೋಗಿಯೊಬ್ಬರು ತಮ್ಮ ಪಾಸಿಟಿವ್ ರಿಪೋರ್ಟ್ ಹಿಡಿದು ವೈದ್ಯರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರು. ಅವರ ಬಳಿ ಇದ್ದ ಕೋವಿಡ್ ರಿಪೋರ್ಟನ್ನು ತೆಗೆದುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರುಗಳನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರು ಆದರೆ ಯಾವ ವೈದ್ಯರು ಸಹ ಆ ರೋಗಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಲ್ಲೇ ಪಾಪ ಪರದಾಡಿ ಕೊನೆಗೆ ಎಮರ್ಜೆನ್ಸ್ ವಾರ್ಡ್ ಬಳಿಯಿದ್ದ ಒಬ್ಬ ವೈದ್ಯರನ್ನು ಸಂಪರ್ಕಿಸಿ, ತಮ್ಮ ರೋಗ ಲಕ್ಷಣಗಳ ಬಗ್ಗೆ ತಿಳಿಸಿ ಅವರಿಂದ ಮಾತ್ರೆಗಳ ಚೀಟಿ ಬರೆಯಿಸಿಕೊಂಡು, ಆಸ್ಪತ್ರೆಯಲ್ಲಿ ನೀಡಲಾಗುವ ಔಷಧಿಯ ಬಗ್ಗೆ ಮಾಹಿತಿ ತಿಳಿಯಲು ಸಾಕಷ್ಟು ಅಲೆದಾಡುವ ಪರಿಸ್ಥಿತಿ ಉಂಟಾಯಿತು. ರೋಗಿಗಳಿಗೆ ಧೈರ್ಯ ತುಂಬಿ ಅವರ ಆತ್ಮಸ್ಥೈರ್ಯ ಹೆಚ್ಚಿಸಿ ಅವರಿಗೆ ನೆರವಾಗ ಬೇಕಾಗಿದ್ದ ವೈದ್ಯರು ಇಂತಹ ಅಸಡ್ಡೆ ತೋರಿಸಿದರೆ ರೋಗಿಗಳ ಪಾಡೇನು?
ಇನ್ನು ಕೋವಿಡ್ 19 ರೋಗಿಗಳಿಗೆ ಸರ್ಕಾರದಿಂದ ಉಚಿತವಾಗಿ ಔಷಧಿಗಳನ್ನು ನೀಡುತ್ತಿದ್ದು ರೋಗಲಕ್ಷಣಗಳಿಂದ ರೋಗಿಗಳಿಗೆ ಮನೆಯಲ್ಲಿಯೇ ಹೋಂ ಕೊರಂಟೈನ್ ಆಗಲು ಸರ್ಕಾರ ಮಾನದಂಡ ಹೊರಡಿಸಿದ್ದು ಅದರ ಪ್ರಕಾರ ಅವರಿಗೆ ನೀಡುವ ಔಷಧಿಯಲ್ಲಿ ಕೆಲವು ಔಷಧಿಗಳನ್ನು ಮಾತ್ರ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದು ಇನ್ನು ಕೆಲವು ಔಷಧಿಗಳನ್ನು ಖಾಸಗಿ ಮೆಡಿಕಲ್ ಸ್ಟೋರ್ ನಲ್ಲಿ ತೆಗೆದುಕೊಳ್ಳಲು ಸೂಚಿಸುತ್ತಿದ್ದಾರೆ ಟ್ಯಾಮಿಫ್ಲೂ ಎನ್ನುವ ದುಬಾರಿ ಮೊತ್ತದ ಮಾತ್ರೆಯನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ಖರೀದಿಸಲು ಚೀಟಿ ನೀಡುತ್ತಿದ್ದಾರೆ. ಹಾಗಾದರೆ ಸರ್ಕಾರದಿಂದ ಟ್ಯಾಮಿಫ್ಲೂ ಟ್ಯಾಬ್ಲೆಟ್ ಸರಿಯಾಗಿ ಸರಬರಾಜು ಆಗುತ್ತಿದೆಯೋ ಅಥವಾ ಇದು ಕೃತಕ ಅಭಾವ ಸೃಷ್ಟಿಸುವ ತಂತ್ರವೋ….?? ಸಂಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ಉತ್ತರಿಸಬೇಕಾಗಿದೆ.