ನಾವು 17 ಜನ ಪಕ್ಷ ಸೇರುತ್ತೇವೆ ಅಂತಾ ಅಪ್ಲಿಕೇಶನ್ ಹಾಕಿದ್ವಾ ?…_ ಎಸ್ ಟಿ ಸೋಮಶೇಖರ್

 

 

ಮೈಸೂರು

ಪಕ್ಷಕ್ಕೆ  ದ್ರೋಹ ಬಗೆದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ

ನಾವು 17 ಜನ ಪಕ್ಷ ಸೇರುತ್ತೇವೆ ಅಂತಾ ಅಪ್ಲಿಕೇಶನ್ ಹಾಕಿದ್ವಾ ?

ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗಿದ್ವಾ ? ಎಂದು

ಸಚಿವ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು..

 

ಸರ್ಕಾರಿ ಆತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು

ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು

ಕಾಂಗ್ರೆಸ್‌ಗೆ ಹೋದ ಗಿರಾಕಿ

ನಾವು ಯಾರ ಹತ್ತಿರನಾ ಹೇಳಿದ್ದೀವಾ ಪಕ್ಷಕ್ಕೆ ಬರುತ್ತೇವೆ ಅಂತಾ

ಪಕ್ಷ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದೆ

ನಾವು ಗೌರವಯುತವಾಗಿ ಸರ್ಕಾರ ಪಕ್ಷದ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ…

 

ಡಿಕೆಶಿ ಸಿದ್ದರಾಮಯ್ಯ ಅವರಿಬ್ಬರ ನಡುವೆ ಸಮನ್ವಯತೆ ಇಲ್ಕ

ಒಬ್ಬರು ಹೊಡೆದ ರೀತಿ ಒಬ್ಬರು ಅಳುವ ರೀತಿ ಮಾಡುತ್ತಾರೆ

ಯತ್ನಾಳ್ ಸೋಮಶೇಖರ್ ನನ್ನ ಸಂಪರ್ಕದಲ್ಲಿದ್ದಾರೆ ಹೇಳಿಕೆ ವಿಚಾರ

ನಾನು ಯಾವತ್ತು ಡಬಲ್ ಗೇಮ್ ರಾಜಕಾರಣ ಮಾಡಿಲ್ಲ

ಹಾದಿಯಲ್ಲಿ ಬೀದಿಯಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು

ಇದಷ್ಟೇ ನಾನು ಹೇಳಿದ್ದೇನೆ

ಒಂದು ಸೀಟು ಇದ್ದಾಗಲಿಂದಲೂ ಯಡಿಯೂರಪ್ಪ ಹೋರಾಟ ಮಾಡಿದ್ದಾರೆ

ಅದಕ್ಕೆ ಗೌರವ ಕೊಡಿ ಅಂತಾ ಹೇಳಿದ್ದೇನೆ ಎಂದರು.

 

*ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರ ಸಾಲ ಮನ್ನಾ ವಿಚಾರ*

 

ಇದರ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಲು ಹೇಳಿದ್ದೇನೆ

ಇನ್ನು ಮೂರು ದಿನದಲ್ಲಿ ಈ ಬಗ್ಗೆ ಮಾಹಿತಿ ಸಿಗಲಿದೆ

ಸಿಎಂ ಜೊತೆ ಈ ಬಗ್ಗೆ ಮಾತನಾಡಿ ಅಂತಿಮ ನಿರ್ಧಾರ

ಈಗಾಗಲೇ ಸಿಎಂ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು..

 

ಕೇಂದ್ರದಲ್ಲಿ ಸಹಕಾರಿ ಸಚಿವಾಲಯ ರಚನೆ ವಿಚಾರ

ಪ್ರಧಾನಿ‌ ನರೇಂದ್ರ ಮೋದಿಗೆ ಅಭಿನಂದನೆ

ರಾಜ್ಯ ಸಹಕಾರ ಇಲಾಖೆ ಸಚಿವ ಎಸ್ ಟಿ ಸೋಮಶೇಖರ್ ಅಭಿನಂದನೆ

ಇದರಿಂದ ರಾಜ್ಯಕ್ಕೆ ಬೇಕಾದ ಸವಲತ್ತು ನೇರವಾಗಿ ಇಲಾಖೆಗೆ ಕೇಳಬಹುದು

ಸಹಕಾರಿಗಳಿಂದ ಪ್ರಧಾನಿ ಗೃಹಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು

7 ರಿಂದ 8 ವರ್ಷಗಳಿಂದ ಸಹಕಾರಿಗಳು ಒತ್ತಡ ಹಾಕಿದ್ದರು

ಈ ಸಂಬಂಧ ಭೇಟಿ ನಿಗದಿಯಾಗಿತ್ತು

ಲಾಕ್‌ಡೌನ್ ಹಿನ್ನೆಲೆ ಭೇಟಿ ಸಾಧ್ಯವಾಗಿರಲಿಲ್ಲ

ಆದರೆ ಇದರ ಅವಶ್ಯಕತೆ ಅರಿತು ಪ್ರಧಾನಿಗಳು ಮಾಡಿದ್ದಾರೆ

ಇದೊಂದು ಐತಿಹಾಸಿಕ ತೀರ್ಮಾನ ಆಗಿದೆ

ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೇರವಾಗಿ ಸಿಗಲಿದೆ ಎಂದು ತಿಳಿಸಿದರು

One thought on “ನಾವು 17 ಜನ ಪಕ್ಷ ಸೇರುತ್ತೇವೆ ಅಂತಾ ಅಪ್ಲಿಕೇಶನ್ ಹಾಕಿದ್ವಾ ?…_ ಎಸ್ ಟಿ ಸೋಮಶೇಖರ್

  1. ರಾಜಕೀಯದಲ್ಲಿರುವ ಹೆಚ್ಚಿನವರಿಗೆ ನ್ಯಾಯ, ನೀತಿ, ಧರ್ಮ, ಸಿದ್ಧಾಂತಗಳು, ಪ್ರಾಮಾಣಿಕತೆ, ಅತ್ಯುತ್ತಮ ಜನ ಸೇವೆ, ದೇಶಭಕ್ತಿ, ದೇಶದ ಅಭಿವೃದ್ಧಿ ಇತ್ಯಾದಿ ಮೌಲ್ಯಗಳ ಬಗ್ಗೆ, ಚಾಣಕ್ಯನ ನೀತಿ ಸಿದ್ದಾಂತಗಳಂತೆ ಪ್ರಾಥಮಿಕ ವರ್ಷದಲ್ಲಿ ಪರೀಕ್ಷೆ ನಿಗದಿಪಡಿಸಬೇಕು ಎನ್ನುವುದು ನನ್ನ ಅನಿಸಿಕೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version