ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಿರುಕುಳ ಖಂಡಿಸಿದರು ರುಪ್ಸ ಸಂಘಟನೆ.

ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಿರುಕುಳ ಖಂಡಿಸಿದರು ರುಪ್ಸ ಸಂಘಟನೆ.

 

 

ತುಮಕೂರು_  ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಟಿಸಿಯನ್ನು ಆಡಳಿತ ಮಂಡಳಿಯ ಅನುಮತಿ ಇಲ್ಲದೆ ಸರ್ಕಾರ ನೇರವಾಗಿ ನೀಡುವ ಪ್ರಕ್ರಿಯೆಗೆ ಕೈಹಾಕಿದ್ದು .

 

ಈ ಮೂಲಕ ಖಾಸಗಿ ಶಾಲೆಗಳ ಹಕ್ಕನ್ನು ಶಿಕ್ಷಣ ಇಲಾಖೆ ಕಸಿದು ಕೊಳ್ಳುವ ದೊಡ್ಡ ಹುನ್ನಾರವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದು ರುಪ್ಸ ಸಂಘಟನೆಯ ರಾಜ್ಯಾಧ್ಯಕ್ಷ ಹಾಲನುರು ಲೇಪಾಕ್ಷ ಖಂಡಿಸಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಸುಪ್ರೀಂ ಕೋರ್ಟಿನ ಆದೇಶವನ್ನು ರಾಜ್ಯ ಶಿಕ್ಷಣ ಇಲಾಖೆ ಧಿಕ್ಕರಿಸಿದೆ ಈ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು ಅದರ ಪ್ರಕಾರ ವಿದ್ಯಾರ್ಥಿಗಳ ಶುಲ್ಕ ಪಾವತಿಸದೆ ಇರುವ ಪೋಷಕರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸೂಚಿಸಿದೆ.

 

ಆದಾಗ್ಯೂ ಇದನ್ನು ಗಮನಿಸಿದ ಶಿಕ್ಷಣ ಇಲಾಖೆ ಆರ್ಟಿಇ ಆಕ್ಟ್  1963 ಸೆಕ್ಷನ್ 106 2b ಅರ್ಥಮಾಡಿಕೊಳ್ಳದೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಟಿ.ಸಿ ಕೇಳಿದಲ್ಲಿ ಶಾಲೆಯ ಆಡಳಿತ ಮಂಡಳಿ ನಿರಾಕರಿಸಿದಲ್ಲಿ ಇಲಾಖೆಯೇ ಕ್ರಮಕೈಗೊಳ್ಳಲು ನಿರ್ಧರಿಸಿರುವುದು ಖಂಡನೀಯ ಎಂದು ರಾಜ್ಯ ರುಪ್ಸ ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಸಂಬಂಧ ಮುಂದಿನ ಡಿಸೆಂಬರ್ 15ರ ಒಳಗಾಗಿ ಸರ್ಕಾರ ಈ ಆದೇಶವನ್ನು ಹಿಂಪಡೆಯದೆ ಇದ್ದರೆ ಡಿಸೆಂಬರ್ 15ರ ನಂತರ ಶಿಕ್ಷಣ ಸಚಿವರ ಮನೆ ಮುಂದೆ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ನೇರ ಎಚ್ಚರಿಕೆಯನ್ನು ರವಾನಿಸಿದ್ದಾರೆ.

 

ಇದೇ ಸಂದರ್ಭದಲ್ಲಿ ರುಪ್ಸ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.

 

ವರದಿ_ ಮಾರುತಿ ಪ್ರಸಾದ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version