ಪಾವಗಡ ಬಸ್ ದುರಂತದಲ್ಲಿ ಕೈಯನ್ನು ಕಳೆದುಕೊಂಡ ಯುವಕ ರಾಜು.
ತುಮಕೂರು_ಶನಿವಾರ ನಡೆದ ಪಾವಗಡದ ಬಸ್ ದುರಂತದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದ್ದು ಇಂದು ತುಮಕೂರು ಜಿಲ್ಲೆಯಲ್ಲಿ ಜವರಾಯನ ಅಟ್ಟಹಾಸಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಚಾಲಕನ ಅಜಾಗರೂಕತೆಯ ಚಾಲನೆಇಂದ ಪ್ರಾಣ ಕಳೆದುಕೊಂಡ ಅಮಾಯಕರು ಒಂದೆಡೆಯಾದರೆ ಸಾಕಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ಪಾವಗಡ ಪಟ್ಟಣಕ್ಕೆ ಆಗಮಿಸಿ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಸಮೀಪವಿರುವ ಪರೀಕ್ಷೆಯ ಆತಂಕ ಎಡೆಮಾಡಿರುವುದರ ಜೊತೆಯಲ್ಲಿ ಸಮೀಪವಿರುವ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎನ್ನುವ ಪ್ರಶ್ನೆಗಳ ಜೊತೆಯಲ್ಲಿ ನೋವುಗಳ ಸರಮಾಲೆಯನ್ನು ಸಹ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಪಘಾತದಲ್ಲಿ ಗಾಯಗೊಂಡ ಯುವಕ ರಾಜು ಎಂಬಾತ ಅಪಘಾತದಲ್ಲಿ ತನ್ನ ಎಡಕೈ ಅನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ.
ಇತ್ತೀಚೆಗೆ ಯುವಕ ರಾಜು ಗಾರೆ ಕೆಲಸ ನಿರ್ವಹಿಸುತ್ತಿದ್ದು ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ತಾನು ಹೊತ್ತುಕೊಂಡಿದ್ದು ಇತ್ತೀಚೆಗೆ ಆತ ಇದ್ದ ತಂಗಿಯ ಮದುವೆಯನ್ನು ಸಹ ನೆರವೇರಿಸಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಾಲವನ್ನು ಮಾಡಿ ಸಾಲ ತೀರಿಸುವ ಸಲುವಾಗಿ ಪ್ರತಿನಿತ್ಯ ಗರೆ ಕೆಲಸಕ್ಕಾಗಿ ಪಾವಗಡಕ್ಕೆ ಆಗಮಿಸುತ್ತಿದ್ದ ಇದರ ನಡುವೆಯೇ ಇಂದು ನಡೆದ ಬಸ್ ಅಪಘಾತದಲ್ಲಿ ರಾಜು ತನ್ನ ಎಡಗೈಯನ್ನು ಕಳೆದುಕೊಂಡು ದಿಗ್ಬ್ರಾಂತನಾಗಿದ್ದಾನೆ.
ಇನ್ನು ಪುಡಿಪುಡಿಯಾದ ಎಡಗೈನ ವೈದ್ಯರು ಏನಾದರೂ ಮಾಡಿ ಪುನಹ ಜೋಡಿಸಬೇಕು ಎಂದು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಯುವಕ ರಾಜುನನ್ನ ವೈದ್ಯರು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ ಆದರೆ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ರಾಜು ಕೈಯನ್ನು ಕಳೆದುಕೊಳ್ಳುವ ಮೂಲಕ ತನ್ನ ನೋವನ್ನು ತಾನೇ ನುಂಗುತ್ತಾ ಮೌನವಾಗಿದ್ದು ದುರಂತವೇ ಸರಿ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯುವಕ ರಾಜುವಿನ ಸಂಬಂಧಿ ಕೂಲಿ ಕೆಲಸ ಮಾಡುತ್ತಿದ್ದ ನನ್ನ ತಮ್ಮ ಈಗ ಕೈಯನ್ನ ಕಳೆದುಕೊಂಡು ಮನೆಯಲ್ಲಿ ಕೂರುವಂತಾಗಿದೆ ಈಗ ನಮ್ಮ ಕುಟುಂಬದ ನಿರ್ವಹಣೆಗೆ ಯಾರು ಹೊಣೆ ಎನ್ನುವುದರ ಜೊತೆಗೆ ಸರ್ಕಾರದ ನಿರ್ಲಕ್ಷದಿಂದ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಇಲಾಖೆ ಸಾರ್ವಜನಿಕರ ಮನವಿಗೆ ಸ್ಪಂದಿಸಿದ್ದರೆ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ ಇಂದಿನ ಘಟನೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಯುವಕ ರಾಜುವಿನ ಸಂಬಂಧಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಒಂದೇ ಆಂಬುಲೆನ್ಸ್ ನಲ್ಲಿ ಇಬ್ಬರು ರೋಗಿಗಳ ಸ್ಥಳಾಂತರ.
ದುರಂತದಲ್ಲಿ ಸಂಪೂರ್ಣವಾಗಿ ಕೈಯನ್ನು ಕಳೆದುಕೊಂಡಿರುವ ಯುವಕ ರಾಜುನ ನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಶನಿವಾರ ಮಧ್ಯಾಹ್ನ 2:00 ವೇಳೆಯಲ್ಲಿ ಸ್ಥಳಾಂತರಿಸಲಾಯಿತು ಆದರೆ ಇದೇ ಸಂದರ್ಭದಲ್ಲಿ KA _06_G_1079 ನಂಬರಿನ ಆಂಬುಲೆನ್ಸ್ ನಲ್ಲಿ ಕೈ ಕಳೆದುಕೊಂಡಿರುವ ಯುವಕ ರಾಜು ಜೊತೆಯಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡ ಮತ್ತೋರ್ವ ರೋಗಿಯನ್ನು ಒಟ್ಟಿಗೆ ಒಂದೇ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದನು ಕಂಡ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕೇಂದ್ರದ ಆಸ್ಪತ್ರೆಯ ಆವರಣದಲ್ಲಿಯೇ ಸರ್ಕಾರಿ ಆಂಬುಲೆನ್ಸ್ ಗಳಿಗೆ ದುಸ್ಥಿತಿ ಬಂದಿದೆಯಾ……? ಎನ್ನುವ ಸಾಕಷ್ಟು ಪ್ರಶ್ನೆಗಳಿಗೆ ಇಂದು ನಡೆದ ಘಟನೆ ಸಾಕ್ಷಿ ಎನ್ನಬಹುದು…..?
ವರದಿ _ಮಾರುತಿ ಪ್ರಸಾದ್