ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದರೂ ಕಠಿಣ ಕ್ರಮ ಕೈಗೊಳ್ಳಲು ರಾಜ್ಸ ಸರ್ಕಾರ ವಿಫಲ_ ಶಾಕುಂತಲ ನಟರಾಜ್.
ತುಮಕೂರು_ ರಾಜ್ಯದ ಹಿಂದೂ ಕಾರ್ಯಕರ್ತರ ಹತ್ಯೆ ಸಂಬಂಧ ರಾಜ್ಯ ಸರ್ಕಾರ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ತುಮಕೂರು ಜಿಲ್ಲಾ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣ ಪ್ರಕೊಷ್ಟದ ಜಿಲ್ಲಾ ಸಹ ಸಂಚಾಲಕಿ ಶಕುಂತಲಾ ನಟರಾಜ್ ತಿಳಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡದ ಬಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆ ಬೆನ್ನಲ್ಲೇ ರಾಜ್ಯದ್ಯಂತ ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ. ಅದರಂತೆ ತಾವು ಸಹ ತಮ್ಮ ಸ್ಥಾನಕ್ಕೆ ಶಕುಂತಲಾ ನಟರಾಜ ರವರು ಸಹ ಬುದವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದವು ಈಗ ಪಕ್ಷದ ಕಾರ್ಯಕರ್ತರನ್ನು ಸಹ ಬಿಡದೆ ಹತ್ಯೆ ಮಾಡುತ್ತಿರುವುದರಿಂದ ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇದುವರೆಗೂ ರಾಜ್ಯದಲ್ಲಿ ಹಲವು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರು ಸಹ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಮುಂದೆ ನಮಗೂ ಸಹ ಇಂತಹದ್ದೇ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಇನ್ನಾದರೂ ಹಿಂದೂ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರ ರಕ್ಷಣೆಗೆ ಸರ್ಕಾರ ಮುಂದಾಗ ಬೇಕಿದೆ. ಈ ಮೂಲಕ ಉತ್ತರ ಪ್ರದೇಶ ಸರ್ಕಾರದಂತೆ, ರಾಜ್ಯದಲ್ಲೂ ಸಹ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ತಮ್ಮ ಕಾರ್ಯ ವೈಖರಿಯನ್ನ ಬದಲಾಯಿಸಿಕೊಳ್ಳಬೇಕಿದೆ ಎಂದು ಅಗ್ರಹ ಮಾಡಿದ ಅವರು ರಾಜ್ಯದಲ್ಲೇ ತಮ್ಮದೇ ಸರ್ಕಾರವಿದ್ದರೂ ಸಹ ತಮ್ಮ ಕಾರ್ಯಕರ್ತರನ್ನ ರಕ್ಷಣೆ ಮಾಡಿವಲ್ಲಿ ಸಂಪೂರ್ಣ ವಿಫಲರಾಗಿದ್ದು ಪ್ರವೀಣ್ ಹತ್ಯೇಕೊರರನ್ನ ಗಲ್ಲಿಗೇರಿಸಬೇಕು. ರಾಜ್ಯದಲ್ಲಿ ಪಿ ಎಫ್ ಐ ,ಎಸ್ ಡಿ. ಪಿ ಐ ಸಂಘಟನೆಗಳನ್ನ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದರು.
ಇನ್ನು ರಾಜ್ಯದ ಮುಖ್ಯಮಂತ್ರಿಗಳು ಸಿನಿಮಾ ನೋಡಲು ಸಮಯವಿರುತ್ತದೆ ಆದರೆ ಹಿಂದೂ ಕಾರ್ಯಕರ್ತರು ಹತ್ಯೆ ಆದಾಗ ಅವರ ಮನೆಗೆ ಭೇಟಿ ನೀಡದಿರುವುದು ಕಾರ್ಯಕರ್ತರಲ್ಲೂ ಸಹ ಬೇಸರತರಿಸಿದೆ ಎಂದರು.
ಇನ್ನು ರಾಜ್ಯದ ಗೃಹ ಸಚಿವರು ಸಹ ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಯುಪಿ ಸೇರಿದಂತೆ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಗೃಹ ಸಚಿವರ ಆಡಳಿತ. ಹಾಗೂ ಕಾರ್ಯ ವೈಕರಿ ಬದಲಾಗಬೇಕಿದೆ ಈ ಮೂಲಕ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಿಲ್ಲಬೇಕಿದೆ ಎಂದರು.
ಇನ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಸದ್ಯಕ್ಕೆ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿ_ಮಾರುತಿ ಪ್ರಸಾದ್ ತುಮಕೂರು