ತಂದೆ ಗೆಲುವಿಗಾಗಿ ಹಗಲಿರುಳು ಶ್ರಮ ಹಾಕುತ್ತಿರುವ ಯುವ ಮುಖಂಡ ರಾಹುಲ್ ಗೌಡ
ತುಮಕೂರು ಗ್ರಾಮಾಂತರ – ರಾಜ್ಯದಲ್ಲೇ ಅತಿ ಸೂಕ್ಷ್ಮ ಕರ್ಚು ಆಧಾರಿತ ವಿಧಾನಸಭಾ ಕ್ಷೇತ್ರವಾಗಿ ಚುನಾವಣಾ ಆಯೋಗದ ಪಟ್ಟಿಯಲ್ಲಿರುವ ಕ್ಷೇತ್ರ ತುಮಕೂರು ಗ್ರಾಮಾಂತರ ಇಂದು ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿ ಬಿಂಬಿತವಾಗುತ್ತಿರುವ ಬೆನ್ನಲ್ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಿ.ಸಿ ಗೌರಿಶಂಕರ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ ಸುರೇಶ್ ಗೌಡ ರವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಹೇಗಾದರೂ ಮಾಡಿ ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕು ಎಂದು ನಾನಾ ಕಸರತ್ತು ಮಾಡುತ್ತ ರಾಜ್ಯದ ಘಟಾನುಘಟಿ ನಾಯಕರನ್ನ ಕ್ಷೇತ್ರಕ್ಕೆ ಕರೆತಂದು ಪ್ರಚಾರಕ್ಕೆ ಮುಂದಾಗಿರುವ ಮಾಜಿ ಶಾಸಕ ಸುರೇಶ್ ಗೌಡ ಶಾಸಕ ಡಿ.ಸಿ ಗೌರಿಶಂಕರ್ ರವರನ್ನು ಕಟ್ಟಿ ಹಾಕಲು ಮುಂದಾದರೆ ಮತ್ತೊಂದೆಡೆ ಸದಾ ಸಾರ್ವಜನಿಕರೊಂದಿಗೆ ಬೆರೆತು ಕೋರನ ಸಂಕಷ್ಟ ಕಾಲದಲ್ಲಿ ಸಾರ್ವಜನಿಕರೊಂದಿಗೆ ಸಾಕಷ್ಟು ಶ್ರಮಿಸಿ ಸಾಮಾಜಿಕ ಕಾರ್ಯಗಳ ಮೂಲಕ ಹಾಲಿ ಶಾಸಕ ಡಿಸಿ ಗೌರಿಶಂಕರ್ ರವರು ಎರಡನೇ ಬಾರಿಯ ಗದ್ದುಗೆ ಏರುವ ಸಲುವಾಗಿ ಬಿಜೆಪಿ ಅಭ್ಯರ್ಥಿಗೆ ನೇರ ಪೈಪೋಟಿ ನೀಡುತ್ತಿರುವ ಶಾಸಕರ ನಡುವೆ ಜಿದ್ದ ಜಿದ್ದಿನ ಪೈಪೋಟಿ ಏರ್ಪಟ್ಟಿದ್ದು.
ಇದರ ನಡುವೆ ತಂದೆಯ ಬೆನ್ನಿಗೆ ನಿಂತಿರುವ ಹಾಲಿ ಶಾಸಕ ಡಿ.ಸಿ ಗೌರಿಶಂಕರ್ ಅವರ ಪುತ್ರ ರಾಹುಲ್ ಗೌಡ ಸಹ ತುಮಕೂರು ಗ್ರಾಮಾಂತರ ಕ್ಷೇತ್ರದ ಹಳ್ಳಿಹಳ್ಳಿಗೂ ಭೇಟಿ ನೀಡಿ ತಂದೆಯ ಆಡಳಿತ ಅವಧಿಯಲ್ಲಿ ನಿರ್ವಹಿಸಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಬಿರುಸಿನ ಪ್ರಚಾರಕ್ಕೆ ಮುಂದಾಗಿರುವ ಯುವ ಮುಖಂಡ ರಾಹುಲ್ ಗೌಡ ಹೇಗಾದರೂ ಮಾಡಿ ತಂದೆಯನ್ನ ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದು ಮನೆ ಮನೆಗೂ ಭೇಟಿ ನೀಡುತ್ತಾ ತಂದೆಯ ಪರ ಪ್ರಚಾರ ಮಾಡುತ್ತಿರುವ ರಾಹುಲ್ ನಡೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ ಕ್ಷೇತ್ರದ ಮತದಾರರು ತಂದೆಯ ನಡೆಯನ್ನೇ ಅನುಸರಿಸಿತ್ತಿರುವ ಮಗನನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಕೊಂಡಾಡಿದ್ದಾರೆ.
ಇನ್ನು ಪ್ರತಿನಿತ್ಯ ತುಮಕೂರು ಗ್ರಾಮಾಂತರ ಕ್ಷೇತ್ರದ ಹಲವು ಹಳ್ಳಿಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಶುಭ ಕಾರ್ಯ, ಸಾವು ನೋವು ಹೀಗೆ ಪ್ರತಿ ಕಾರ್ಯಕ್ರಮದಲ್ಲೂ ಭಾಗಿಯಾಗುವ ಮೂಲಕ ಗ್ರಾಮಾಂತರ ಕ್ಷೇತ್ರದ ಜನರ ಮನಸನ್ನು ಗೆಲ್ಲುವ ಮೂಲಕ ಕ್ಷೇತ್ರದಲ್ಲೀ ಫೀನಿಕ್ಸ್ ನಂತೆ ಸಂಚಾರ ಮಾಡುತ್ತಿದ್ದು ಹಾಲಿ ಶಾಸಕ ಡಿ.ಸಿ ಗೌರಿಶಂಕರ್ ರವರ ಉತ್ತರಾಧಿಕಾರಿಯಾಗುವರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ.