ಪುರಸಭಾ ಸದಸ್ಯರ ಮೋಜು ಮಸ್ತಿಗೆ ಸಾರ್ವಜನಿಕರ ಆಕ್ರೋಶ.

ಪುರಸಭಾ ಸದಸ್ಯರ ಮೋಜು ಮಸ್ತಿಗೆ ಸಾರ್ವಜನಿಕರ ಆಕ್ರೋಶ.

 

 

ಪಾವಗಡ _ತುಮಕೂರು ಜಿಲ್ಲೆಯಲ್ಲಿ  ಬರಪೀಡಿತ ಪ್ರದೇಶ ಎಂದು ಪಟ್ಟ ಕಟ್ಟಿಕೊಂಡಿರುವ ಪಾವಗಡ  ತಾಲೂಕು ಹಲವಾರು ಮೂಲಭೂತ ಸೌಕರ್ಯಗಳಿಂದ ಸುರಗುತ್ತದೆ.

 

 

ಪಾವಗಡ ತಾಲೂಕು ಅತಿ ಬರಪೀಡಿತ ಪ್ರದೇಶವಾಗಿದ್ದು ಇಂತಹ ಪ್ರದೇಶದಲ್ಲಿರುವ ರೈತರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಪಕ್ಕದ ಆಂಧ್ರ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ವಲಸೆ ಹೋಗಿ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ .

 

 

ಇಂತಹ ಬರಪೀಡಿತ ತಾಲೂಕು ಎಂದು ಕರೆಸಿಕೊಳ್ಳುವ ಪಾವಗಡ ಪಟ್ಟಣದಲ್ಲಿ ಹಲವಾರು ಮೂಲಭೂತ ಸೌಕರ್ಯಗಳು ಎದ್ದು ಕಾಡುತ್ತಿದೆ.

 

ಇನ್ನು ಪಾವಗಡ ಪಟ್ಟಣದಲ್ಲಿ ಸರಿಯಾದ ರಸ್ತೆ, ನೀರು ,ಚರಂಡಿ ,ಕುಡಿಯುವ ನೀರು ,ಬೀದಿ ದೀಪ ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದು ಅವುಗಳನ್ನ ಬಗೆಹರಿಸಬೇಕಾದ ಪುರಸಭಾ ಸದಸ್ಯರು ಪ್ರವಾಸದ ಹೆಸರಿನಲ್ಲಿ ಮೋಜು ಮಸ್ತಿಗೆ ಮೊರೆ ಹೋಗಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

 

 

ಪಾವಗಡ ಪುರಸಭಾ ಸದಸ್ಯರ ರೆಸಾರ್ಟ್ ಗಳಲ್ಲಿ ಸಾರ್ವಜನಿಕವಾಗಿ ಕುಣಿದು ಕುಪ್ಪಳಿಸಿ ಮೋಜು ಮಸ್ತಿ ಮಾಡುತ್ತಿರುವ  ವಿಡಿಯೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

 

ಪುರಸಭಾ ಸದಸ್ಯರು ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ಪಾವಗಡ ಪಟ್ಟಣದ ಬಜರಂಗದಳದ ಮುಖಂಡ ರಾಮಾಂಜಿನಿ , ರಾಮಯ್ಯ, ಕುಮಾರ್  ಸೇರಿದಂತೆ ಹಲವು ಪ್ರಗತಿಪರ ಮುಖಂಡರು ಹಾಗೂ  ಹಲವು ಸಾರ್ವಜನಿಕರು ಪುರಸಭಾ ಸದಸ್ಯರ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version