ಪೇ ಎಂ.ಎಲ್.ಎ ಪೋಸ್ಟರ್‌ ಬಗ್ಗೆ ಪ್ರತಿಭಟನೆ ಮಾಡಿದ್ದೇ ನನ್ನ ದೊಡ್ಡ ತಪ್ಪೇ : ಶಶಿಹುಲಿಕುಂಟೆ

ಪೇ ಎಂ.ಎಲ್.ಎ ಪೋಸ್ಟರ್‌ ಬಗ್ಗೆ ಪ್ರತಿಭಟನೆ ಮಾಡಿದ್ದೇ ನನ್ನ ದೊಡ್ಡ ತಪ್ಪೇ : ಶಶಿಹುಲಿಕುಂಟೆ

 

ತುಮಕೂರು : ಇತ್ತೀಚೆಗೆ ಅಂದರೆ ಕಳೆದ ಶನಿವಾರ ರಾತ್ರಿ ತುಮಕೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯ ಅವ್ಯವಹಾರ ಹಾಗೂ ಭ್ರಷ್ಠ ಬಿಜೆಪಿ ಸರ್ಕಾರದ ವಿರುದ್ಧ ಪೇ ಎಂ.ಎಲ್.ಎ. ಪೋಸ್ಟರ್‌ ಗಳನ್ನು ಜಿಲ್ಲಾ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಅಂಟಿಸಲಾಗಿತ್ತು, ಆ ಸಮಯದಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರು ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ನಮ್ಮ ಯೂತ್ ಕಾಂಗ್ರೆಸ್‌ ಕಾರ್ಯಕರ್ತರನ್ನು ‌ ಬಂಧಿಸುವಂತೆ ಹೇಳಿರುತ್ತಾರೆ, ಅದರಂತೆ ಅಂದು ರಾತ್ರಿ ಬಂಧಿಸಿರುತ್ತಾರೆ.

 

 

 

 

 

 

ಈ ವಿಚಾರವಾಗಿ ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳು ಮಾತನಾಡಲು ಬರಲು ಹೇಳಿದ್ದರು, ಆದ್ದರಿಂದ ನಾನು ಈ ಪೋಸ್ಟರ್‌ಗಳ ಕುರಿತಾಗಿ ಮಾತನಾಡಲು ತೆರಳಿದಾಗ ಪ್ರಸ್ತುತ ಆರೋಪ ಮಾಡಿರುವ ರತ್ನಮ್ಮ ಅವರು ಸ್ಥಳದಲ್ಲಿ ಇರಲಿಲ್ಲ, ಅಲ್ಲಿ ಹಾಲಿ ಕರ್ತವ್ಯದಲ್ಲಿದ್ದ ಕೆಲ ಪೊಲೀಸ್‌ ಪೇದೆಗಳು ರತ್ನಮ್ಮ ಅವರೊಂದಿಗೆ ಫೋನ್‌ ನಲ್ಲಿ ಮಾತನಾಡುವಂತೆ ನನಗೆ ಫೋನ್‌ ನೀಡಿರುತ್ತಾರೆ, ಅವರೊಂದಿಗೆ ನಾನು ಏರಧ್ವನಿಯಲ್ಲಿಯಷ್ಟೇ ಮಾತನಾಡಿರುತ್ತೇನೆ, ಯಾವುದೇ ರೀತಿಯಾದ ಅಸಭ್ಯ ವರ್ತನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಿಲ್ಲವೆಂದು ಸ್ಪಷ್ಟನೆಯನ್ನು ನೀಡಿದರು.

 

 

 

 

ನಂತರ ನಮ್ಮ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರನ್ನು ಆರೋಪಿಗಳಂತೆ ಕೆಲಗಡೆ ಕೂರಿಸಿದ್ದರು, ಕೆಲವರಿಗೆ ಲಾಠಿಯಲ್ಲಿ ಬಾರಿಸಿದ್ದರು ಎಂದು ಸಹ ಆರೋಪಿಸಿದರಲ್ಲದೇ, ಆ ದೃಶ್ಯಗಳನ್ನು ಕಂಡು ನಾನು ಆಕ್ರೋಷಭರಿತನಾಗಿದ್ದು ಸತ್ಯ, ಆದರೆ ಯಾವುದೇ ರೀತಿಯಾದ ಅಸಭ್ಯ ವರ್ತನೆಯನ್ನಾಗಲೀ ಮಾಡಿರುವುದಿಲ್ಲ, ನನ್ನ ಮೇಲೆ ದುರುದ್ದೇಶಪೂರಿತವಾಗಿ ಇಲ್ಲ ಸಲ್ಲದ ಸೆಕ್ಷನ್‌ ಗಳಡಿ ಪ್ರಕರಣ ಸಿಲುಕಿಸಿ, ಪ್ರತಿಭಟನೆ ಮಾಡಿದ್ದೇ ದೊಡ್ಡ ತಪ್ಪು ಎನ್ನುವಂತೆ ಜೈಲಿಗೆ ಕಳುಹಿಸಿರುತ್ತಾರೆಂದು ಹೇಳಿದ್ದಾರೆ.

 

 

 

 

 

 

 

 

 

 

ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅವೈಜ್ಞಾನಿಕ ಮತ್ತು ಕಳಪೆಗಾಮಗಾರಿಗಳು ನಡೆದಿದ್ದು, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಈ ಹಿಂದೆಯೂ ಸಹ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದು, ಅದರಂತೆಯೇ ಪೇ ಎಂ.ಎಲ್.ಎ ಪ್ರತಿಭಟನೆಯೂ ಸಹ ಒಂದು ಎಂದು ಹೇಳಿದರು.  ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ನೀತಿಯನ್ನು ನಗರದ ಹಾಲಿ ಶಾಸಕರು ಹಾಗೂ ಪೋಲೀಸರು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

 

 

 

 

 

 

 

 

 

 

ಮುಂದುವರೆದು ಕಾಂಗ್ರೆಸ್‌ ಮುಖಂಡರು ಮಾಜಿ ಶಾಸಕರಾದ ಡಾ. ಎಸ್.ರಫೀಕ್‌ ಅಹ್ಮದ್‌ ರವರು ಮಾತನಾಡಿ ನಾನು ಸಹ ಸ್ವತಃ ಆರ್.ಟಿ.ಐ. ಮೂಲಕ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ಕೋರಲಾಗಿ, ಅದರಲ್ಲಿ ಅಸ್ಪಷ್ಟ ಮಾಹಿತಿಯನ್ನು ನೀಡಿ ಅಧಿಕಾರಿಗಳು ನಮ್ಮನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ, ಯಾವೊಂದು ಕಾಮಗಾರಿ ಕುರಿತಾಗಿ ಸ್ಪಷ್ಟ ಮತ್ತು ವಿವರವಾದ ಮಾಹಿತಿಯನ್ನು ನೀಡದೇ ಕೇವಲ ಕಾಮಗಾರಿಗೆ ತಗುಲಿರುವ ವೆಚ್ಚದ ಕುರಿತಾದ ಮಾಹಿತಿಯನ್ನು ಮಾತ್ರ ನೀಡಿರುತ್ತಾರೆ.

 

 

 

 

 

ಇಂತಹ ಸಾಕಷ್ಟು ಉದಾಹರಣಗಳು ಇವೆ, ಆದರೆ ಸದ್ಯದಲ್ಲಿಯೇ ಅವೆಲ್ಲವನ್ನೂ ಬಹಿರಂಗಪಡಿಸುವುದಾಗಿ ತಿಳಿಸಿದರು, ನಂತರ ಸದುದ್ದೇಶದಿಂದ ನಮ್ಮ ಕಾರ್ಯಕರ್ತರು ಮಾಡಿರುವ ಪ್ರತಿಭಟನೆಯನ್ನು ಇವರು ಇಷ್ಟರ ಮಟ್ಟಿಗೆ ಬಿಂಬಿಸಿ, ಬಂಧಿಸುವಂತೆ ಪೊಲೀಸ್‌ ಇಲಾಖೆಗೆ ಯಾವ ರೀತಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆಯನ್ನು ಮಾಡಿದರು.

 

 

 

 

 

 

 

 

 

ಸದ್ಯದಲ್ಲಿಯೇ ಅಂದರೆ ಮಾರ್ಚ್‌ 2 ರಂದು ಬಿಜೆಪಿಯವರು ಹಮ್ಮಿಕೊಂಡಿರುವ ಟಿಪ್ಪು ಅವರ ನಿಜ ಕನಸುಗಳು ಎಂಬ ನಾಟಕದ ವಿರುದ್ಧ ನಾವು ಸಹ ಬೊಮ್ಮಾಯಿ, ಮೋದಿ, ಇನ್ನಿತರೆ ಬಿಜೆಪಿ ಮುಖಂಡರ ಕುರಿತಾಗಿ ವಿಭಿನ್ನವಾದ ಪ್ರತಿಭಟನೆಗಳನ್ನು ನಾವು ನಡೆಸಲಿದ್ದೇವೆಂದು ತಿಳಿಸಿದರು.

 

 

 

 

ಪತ್ರಿಕಾಗೋಷ್ಠಿಯಲ್ಲಿ ಶಶಿಹುಲಿಕುಂಟೆ, ಜಿಲ್ಲಾಧ್ಯಕ್ಷ ಚಂದ್ರಶೇಖರ್‌ ಗೌಡ, ಮಾಜಿ ಶಾಸಕ ರಫೀಕ್‌ ಅಹ್ಮದ್‌, ನಗರ  ಶಾಸಕ ಸ್ಥಾನದ ಆಕಾಂಕ್ಷಿಗಳಾದ ಅತಿಕ್‌ ಅಹಮ್ಮದ್‌, ಇಕ್ಬಾಲ್‌ ಅಹಮದ್‌ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version