ಸಾಹಿತಿ ಬರಗೂರು ರಾಮಚಂದ್ರಪ್ಪ ನವರ ವಿರುದ್ಧ ತುಮಕೂರು ಜಿಲ್ಲಾ ಗಂಗಾಮತಸ್ಥ ಸಮಾಜದ ವತಿಯಿಂದ ಪ್ರತಿಭಟನೆ.
ತುಮಕೂರು_ ಗಂಗಾಮತ ಬೆಸ್ತರ ಕುಲದೇವತೆಯಾದ ಗಂಗಾಮಾತೆಯನ್ನು ಕೇಳಲಾಗದ ಭಾಷೆಯಲ್ಲಿ ಬರೆದು ಅವಮಾನ ಮಾಡಿರುವುದು ಸಮಾಜಕ್ಕೆ ನೋವನ್ನು ಉಂಟುಮಾಡಿರುತ್ತಾರೆಂದೂ ಅವರ ‘ಭರತ ನಗರಿ’ ಕಾದಂಬರಿಯನ್ನು ಮತ್ತು ಮುದ್ರಿಸಿರುವ ಪ್ರತಿಗಳನ್ನು ಸರ್ಕಾರ ಮುಟ್ಟುಗೋಲು ಮಾಡಲು ಒತ್ತಾಯಿಸಿ ತುಮಕೂರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಛೇರಿ ತಲುಪಿ ಮನವಿ ಸಲ್ಲಿಸಲಾಯಿತು.
ಇದೆ ಸಂದರ್ಭದಲ್ಲಿ ಕಲ್ಲೂರು ಗಂಗಾಮತ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಕೆ. ಟಿ ಸೋಮಶೇಖರ್ ಮಾತನಾಡಿ ಬರಗೂರು ರಾಮಚಂದ್ರಪ್ಪನವರು ನಮ್ಮ ತುಮಕೂರು ಜಿಲ್ಲೆಯ ಕೀರ್ತಿಯನ್ನೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಸ್ಥಾನ ಮಾನ ಪಡೆದ ವ್ಯಕ್ತಿ ಇವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ
ಆದರೆ ಇವರು ಬರೆದ
‘ಭರತ ನಗರಿ’ ಕಾದಂಬರಿಯಲ್ಲಿ ಗಂಗೆಯನ್ನು ಅವಮಾನಿಸಿರುವುದನ್ನು ಖಂಡಿಸುತ್ತೇವೆ ವಿರೋಧಿಸುತ್ತೇವೆ ಬರಗೂರು ರಾಮಚಂದ್ರಪ್ಪ ನವರ ಬಗ್ಗೆ ಅಪಾರ ಗೌರವವಿದೆ ಎಂದರು
ತುಮಕೂರು ಜಿಲ್ಲೆಯ ಗಂಗಾಮತಸ್ಥ ಬೆಸ್ತರ ಸಮಾಜದ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ರವರು ಮಾತನಾಡಿ ಬರಗೂರು ರಾಮಚಂದ್ರಪ್ಪನವರು ತಪ್ಪು ಒಪ್ಪಿಕೊಂಡು ರಾಜ್ಯದ ಗಂಗಾಮತ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ದಿವಾಕರ್ ರವರು ಮಾತನಾಡಿ ಬರಗೂರು ತಮ್ಮ ಕಾದಂಬರಿಯಲ್ಲಿ ಗಂಗೆಯನ್ನು ಹಾದರದ ಗಂಗೆ ಎಂದು ಮೂಲವನ್ನು ತಿರುಚಿ ಬರೆದಿದ್ದಾರೆ ಬರಗೂರುರವರು ವಿಚಾರವಂತರು ವಾಘ್ಮೀಗಳು ತಿಳಿದವರು ಹೀಗೆ ಮೂಲವನ್ನು ತಿರುಚಿ ಬರೆದಿರುವುದು ತಪ್ಪು, ಸರ್ಕಾರವನ್ನು ಈ ಮುದ್ರಿಸಿದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಕರಿಯಪ್ಪ ಕೃಷ್ಣಪ್ಪ ಶ್ರೀನಿವಾಸ್ ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಪಾಂಡುರಂಗ ಉಪಾನ್ಯಸಕರಾದ ಚಂದ್ರಪ್ಪ, ಶಶಿಕುಮಾರ್ ಸೋಮಶಂಖರ್ ಯುವ ಸಾಹಿತಿ ಕಿರುಚಿತ್ರ ನಿರ್ದೇಶಕ ಅರುಣ್ ಕುಮಾರ್ ಸದಾಶಿವ ಹಾಗೂ ಸಮಾಜದವರು ಭಾಗವಹಿಸಿದ್ದರು