ಎಂಇಎಸ್ ನಿಷೇಧಕ್ಕೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯ.

ಎಂಇಎಸ್ ನಿಷೇಧಕ್ಕೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯ.

 

 

ಬೆಳಗಾವಿ ನಗರದಲ್ಲಿ ಪೊಲೀಸ್ ವ್ಯವಸ್ಥೆ, ಸರ್ಕಾರದ ವ್ಯವಸ್ಥೆ ಇದ್ದರೂ ಸಹ ಎಂಇಎಸ್ ಪುಂಡರು ಕರ್ನಾಟಕ ಸರ್ಕಾರದ ವಿರುದ್ಧ ಮಹಾಮೇಳ ಮಾಡಲು ಹೊರಟಿದ್ದರು ಇದರ ವಿರುದ್ಧ ಕನ್ನಡಿಗರು ಹೋರಾಟ ಮಾಡಿದರು ಆದರೆ ಕನ್ನಡಿಗರನ್ನು ಜೈಲಿಗೆ ಅಟ್ಟಿದ ಸರ್ಕಾರ ಕನ್ನಡಪರ ಹೋರಾಟಗಾರರಿಗೆ ಶಿಕ್ಷೆ ಆಗುವಂತೆ ಸರ್ಕಾರ ನಡೆದಿದೆ.

 

 

ಆದರೆ ನಂತರದ ಬೆಳವಣಿಗೆಯಲ್ಲಿ ಎಂಇಎಸ್ ಪುಂಡರು ಸರ್ಕಾರಿ ವಾಹನ, ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಧ್ವಂಸ ಮಾಡಿ, ಕರ್ನಾಟಕದ ಭಾಗಗಳನ್ನು ತನ್ನದು ಎಂದು ಹೇಳುವ ಮೂಲಕ ನಮ್ಮ ಸರ್ಕಾರದ ಶವಯಾತ್ರೆ ಮಾಡ್ತೀವಿ ಅಂತ ಹೇಳಿಕೆ ಕೊಟ್ಟಿದ್ದಾರೆ ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ನಡೆಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

 

ಇನ್ನು ಬೆಳಗಾವಿಯ ಸುವರ್ಣಸೌಧವನ್ನು ಸೋಮವಾರ ಮುತ್ತಿಗೆ ಹಾಕುವ ಸಲುವಾಗಿ ತೆರಳುವ ವೇಳೆ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ನೂ ಎಂಇಎಸ್ ಪುಂಡರು ಕರ್ನಾಟಕದ ನೆಲ-ಜಲ ನಾಡು-ನುಡಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಇದ್ದುಕೊಂಡು ನಮ್ಮ ಹಾಗೂ ಸರ್ಕಾರದ ವಿರುದ್ಧ ಹೇಳಿಕೆ ಕೊಡುವ ಮೂಲಕ ಕನ್ನಡಿಗರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ ಹಾಗಾಗಿ ಕೂಡಲೇ ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

ಕರ್ನಾಟಕದ ಸಂಸದರು ಕಡ್ಲೆಪುರಿ ತಿನ್ನುತ್ತಿದ್ದಾರೆ ಪ್ರವೀಣ್ ಶೆಟ್ಟಿ ಆಕ್ರೋಶ…..

ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ದೌರ್ಜನ್ಯ ಎಸಗುತ್ತಿರುವ ಇಂತಹ ಪುಂಡರ ಮೇಲೆ ಗೂಂಡಾ ಕಾಯ್ದೆ ಮೂಲಕ ಗಡಿಪಾರು ಮಾಡಬೇಕು, ಇನ್ನೂ ಕರ್ನಾಟಕ ರಾಜ್ಯದಲ್ಲಿ 25ಕ್ಕೂ ಹೆಚ್ಚು ಬಿಜೆಪಿ ಸಂಸದರು ಇದ್ದರು ಸಹ ರಾಷ್ಟ್ರಪತಿ ಮೇಲೆ ಒತ್ತಡ ಹಾಕಬಹುದಿತ್ತು ಆದರೆ ಇಂತಹ ಕೆಲಸಕ್ಕೆ ನಮ್ಮ ರಾಜ್ಯದ ಸಂಸದರು ಮುಂದಾಗುತ್ತಿಲ್ಲ ಇನ್ನು ನಮ್ಮ ರಾಜ್ಯದ ಸಂಸದರು ಕಡ್ಲೆ ಪುರಿ ತಿಂತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

ಕೂಡಲೇ ರಾಜ್ಯದಲ್ಲಿ ಇರುವ ಎಲ್ಲಾ ನಾಯಕರು ಗಡಿ ಭಾಗದ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು, ಎಂಇಎಸ್ ವಿರುದ್ಧ ಎಲ್ಲಾ ನಾಯಕರು ಧ್ವನಿಯೆತ್ತಬೇಕು ಇಂತಹ ಸಮಯದಲ್ಲಿ ಬ್ಯಾಲೆನ್ಸಿಂಗ್, ಡ್ರೈವಿಂಗ್ ಬೇಕಿಲ್ಲ ಈ ನೆಲದ ಕನ್ನಡಿಗರ ಓಟು ಪಡೆದು ಗೆದ್ದಿರುವ ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿ ಎನ್ಇಎಸ್ನ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

 

 

ಇನ್ನು ಸೋಮವಾರ 11ಗಂಟೆಗೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

 

ಇದೇ ಸಂದರ್ಭದಲ್ಲಿ ಮಾತನಾಡಿದ ಕರವೇ ತುಮಕೂರು ಜಿಲ್ಲಾಧ್ಯಕ್ಷ ಡಮರುಗೇಶ್ ಮಾತನಾಡಿ ಕನ್ನಡಿಗರ ಮೇಲಿನ ನಿರಂತರ ದಬ್ಬಾಳಿಕೆ ಮಾಡುತ್ತಿರುವ ಎಂಇಎಸ್ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಇನ್ನೂ ತುಮಕೂರು ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಕಾರ್ಯಕರ್ತರು ನಾಳೆ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿರುವುದಾಗಿ ತಿಳಿಸಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version