ವೇಶ್ಯಾವಾಟಿಕೆ ನಡೆಸುತ್ತಿದ್ದ ವಸತಿಗೃಹದ ಮೇಲೆ ಪೊಲೀಸರ ದಾಳಿ.
ತುಮಕೂರಿನ ಕ್ಯಾಸಂದ್ರ ಬಳಿಯ ಖಾಸಗಿ ಲಾಡ್ಜ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದ್ದ ಸಂಬಂಧ ಖಚಿತ ಮಾಹಿತಿ ತಿಳಿದ ತುಮಕೂರಿನ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಹಾಗೂ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ಸೋಮವಾರ ಸಂಜೆ ಲಾಡ್ಜ್ ಮೇಲೆ ದಾಳಿ ನಡೆಸಿ ಕೋಲ್ಕತ್ತಾ ಹಾಗೂ ಮುಂಬೈ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಿದ್ದು ದಾಳಿ ವೇಳೆ ಒಬ್ಬ ಯುವತಿ ಸ್ಥಳದಿಂದ ಪರಾರಿಯಾಗಿದ್ದು ಐದು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ತುಮಕೂರಿನ ಹೈವೇ ರಸ್ತೆಗೆ ಹೊಂದಿಕೊಂಡಂತೆ ಕ್ಯಾತ್ಸಂದ್ರ ಬಳಿಯ ನಂದಿ ಲಾಡ್ಜ್ ನಲ್ಲಿ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಸದ್ದಿಲ್ಲದೆ ನಡೆಯುತ್ತಿತ್ತು ಆದರೆ ಇದರ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲದಂತೆ ವ್ಯವಸ್ಥಿತವಾಗಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಆದರೆ ಇದ್ಯಾವುದರ ಅರಿವು ಕೂಡ ಸ್ಥಳೀಯ ನಿವಾಸಿಗಳಿಗೆ ಕಂಡು ಬರದಂತೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಿಬ್ಬಂದಿಗಳು ಗೋಪ್ಯತೆಯನ್ನು ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ಬೆನ್ನಲ್ಲೆ ಇಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಸ್ಥಳಕ್ಕೆ ಭೇಟಿ ನೀಡಿದರು.
ಲಾಡ್ಜ್ನಲ್ಲಿ ಅಡಗಿತ್ತು ಸುರಂಗ ಸುರಂಗದಲ್ಲಿ ವೇಶ್ಯಾವಾಟಿಕೆ.
ಇನ್ನು ದಾಳಿ ನಡೆದ ಸಂದರ್ಭದಲ್ಲಿ ಲಾಡ್ಜ್ನಲ್ಲಿ ಅಚ್ಚರಿಯೆಂಬಂತೆ ರಹಸ್ಯ ಸ್ಥಳವೊಂದನ್ನು ನಿರ್ಮಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಹಾಗೂ ದಾಳಿ ನಡೆದರೆ ಅಥವಾ ಅನುಮಾನ ಬಂದು ದಾಳಿ ಮಾಡಿದರೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಲಾಡ್ಜ್ನಲ್ಲಿ ರಹಸ್ಯ ಸುರಂಗ ಒಂದನ್ನ ಮಾಡಿಕೊಂಡಿದ್ದ ವೇಶ್ಯಾವಾಟಿಕೆ ದಂಧೆ ಕೋರರು ವ್ಯವಸ್ತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದು ಕಂಡುಬಂದಿದೆ.
ವೇಶ್ಯಾವಾಟಿಕೆಗೆ ಸುಳಿವು ನೀಡಿತ್ತು ಕಿಲೋಮೀಟರ್ ಗಟ್ಟಲೆ ಬಿದ್ದಿದ್ದ ಕಾಂಡೋಮ್…..
ಸೆಪ್ಟೆಂಬರ್ 8ರಂದು ವಿಜಯ್ ಭಾರತ ಡಿಜಿಟಲ್ ಮೀಡಿಯಾ ತುಮಕೂರಿನ ಕ್ಯಾಸಂದ್ರ ಬಳಿಯ ಫ್ಲೈವರ್ ಮೇಲೆ ಕಿಲೋಮೀಟರ್ ಗಟ್ಟಲೆ ಬಿದ್ದಿದ್ದ ಕಾಂಡೋಮ್ ಗಳ ಬಗ್ಗೆ ವರದಿ ಮಾಡಿತ್ತು ಇದನ್ನ ಬೆನ್ನುಹತ್ತಿದ್ದ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಹತ್ತು ದಿನಗಳಿಂದ ತುಮಕೂರಿನಲ್ಲಿ ಬೀಡುಬಿಟ್ಟು ಇದಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಕೈಗೊಂಡಿತ್ತು .
ಆನ್ಲೈನ್ ಮೂಲಕ ವೇಶ್ಯಾವಾಟಿಕೆ.
ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಆನ್ಲೈನ್ ಮೂಲಕ ವೇಶ್ಯಾವಾಟಿಕೆ ನಡೆಸುವ ಸಂಬಂಧ ಮಾಹಿತಿ ತಿಳಿದು ತುಮಕೂರಿನ ನಾನಾ ಭಾಗದಲ್ಲಿ ಸಂಚರಿಸಿ ಕೊನೆಗೆ ಕ್ಯಾತಸಂದ್ರದ ನಂದಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಕಲೆಹಾಕಿದರು ನಂತರ ತುಮಕೂರಿನ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಪೊಲೀಸರ ಸಹಕಾರ ಕೋರಿ ನಂತರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಬಂದಿಸಿ ಮಹಿಳೆಯರನ್ನು ರಕ್ಷಿಸಿ ದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.