ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 14 ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಮಾಹಿತಿಯನ್ನು ನೀಡುವಂತೆ ಶ್ರೀನಿವಾಸಪುರದ
ಮಾಹಿತಿ ಹಕ್ಕು ಕಾರ್ಯಕರ್ತ ಶಬ್ಬೀರ್ ಅಹ್ಮದ್ ದಿನಾಂಕ 08/11/2017 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕಲಂ 6(1)ರ ಅಡಿಯಲ್ಲಿ ಆರ್ಜಿ ಸಲ್ಲಿಸಿದ್ದರು .
ಆದರೆ ಪಿಡಿಒ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು . ಈ ಕುರಿತು ಶಬ್ಬೀರ್ ಅಹಮ್ಮದ್ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು . ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ದಳಸನೂರು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ
ಸಂತೋಶ್ ಪಾಲಿಸಿರಲಿಲ್ಲ . ಈ ಪ್ರಕಾಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಸತತವಾಗಿ ಆಯೋಗದ ವಿಚಾರಣೆಗಳಿಗೆ ಸೊಕ್ತವಾದ ಕಾರಣಗಳಿಲ್ಲದೆ ಗೈರುಹಾಜರಾಗಿರುತ್ತಾರೆ.
ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 7(1)ರನ್ವಯ ನಿಗಧಿತ ಅವಧಿಯೊಳಗೆ ಮಾಹಿತಿ ನೀಡಿರುವುದಿಲ್ಲ.
ಆಯೋಗದ ಆದೇಶ ದಿನಾಂಕ 24/11/2020 ಮತ್ತು ದಿನಾಂಕ 11/12/2020 ರ ಕಂಡಿಕೆ 9 ರಲ್ಲಿ ನಿರ್ದೇಶಿಸಿದಂತೆ, ಕಾರಣ ಕೇಳಿ ನೊಟೀಸ್ ಗೆ ಯಾವುದೇ ಲಿಖಿತ ಸಮಜಾಯಿಷಿಯನ್ನು ನೀಡಿರುವುದಿಲ್ಲ ಮತ್ತು ಅರ್ಜಿದಾರರಿಗೆ ಮಾಹಿತಿ ನೀಡಿಲ್ಲವೆಂದು.
ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಸಂತೋಶ್ ರವರಿಗೆ ದಂಡ ವಿಧಿಸಿದೆ.
ಸಂತೋಶ್ ರವರಿಗೆ ವಿಧಿಸಿರುವ ದಂಡದ ಮೊತ್ತವನ್ನು ಸದರಿಯವರಿಗೆ 2021 ನೇ ಸಾಲಿನ ಫೆಬ್ರುವರಿ ತಿಂಗಳಿನಲ್ಲಿ ಕೊಡಲಾಗುವ ವೇತನದಿಂದ ಒಟ್ಟು ರೊ 10 ಸಾವಿರ ಕಡಿತಗೊಳಿಸಿ , ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿ, ಜಮಾ ಮಾಡಿದ ರಸೀದಿಯೊಂದಿಗೆ ಆಯೋಗಕ್ಕೆ ವರದಿ ಸಲ್ಲಿಸಲು ಆಯೋಗವು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಕೋಲಾರ ಕೋಲಾರ ಜಿಲ್ಲೆ ರವರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 19(8)(ಎ) ಅನ್ವಯ ನಿರ್ದೇಶಿಸಿದೆ .