ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ -ಕರ್ನಾಟಕ ಲೇವಾದೇವಿದಾರರ ವಿಧೇಯಕ ಅಂಗೀಕಾ

 

 

ವಿಧಾನಸಭೆಯಲ್ಲಿ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ-2021 ಅಂಗೀಕಾರವಾಗಿದೆ._ ತಿದ್ದುಪಡಿಯಾದ ವಿಧೇಯಕದ ಅಡಿಯಲ್ಲಿ ಕಾನೂನು ಪ್ರಕಾರ ಸಾಲಗಾರನಿಂದ ಸಾಲ ವಸೂಲಿ ಮಾಡಬೇಕು. ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ. ಒಂದು ವೇಳೆ ಇಂತಹ ಕೃತ್ಯವನ್ನು ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುವುದು. 6 ತಿಂಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಅಥವಾ ಸುಮಾರು 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.ಜೊತೆಗೆ, ದಂಡದ ಬದಲಿಗೆ 1 ವರ್ಷದವರೆಗೆ ಶಿಕ್ಷೆ ವಿಧಿಸಬಹುದು ಅಥವಾ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸುವುದಕ್ಕೆ ತಿದ್ದುಪಡಿ ಮಾಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version