ಪಂಜಿನ ಸೇವೆ ಹಬ್ಬ ಆಚರಣೆ ಕ್ಷಣ ಮಾತ್ರದಲ್ಲೇ ತಪ್ಪಿದ ಅನಾಹುತ
ಕೊಳ್ಳೇಗಾಲ :- ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದ ಪಂಜಿನ ಸೇವೆ ಎಂಬ ಆಚರಣೆಯಲ್ಲಿ ಪಟಾಕಿ ಶಬ್ದ ಮತ್ತು ಬೆಂಕಿಯ ಬೆಳಕಿಗೆ ಹೆದರಿ ಭಾರಿ ಗಾತ್ರದ ಎರಡು ಎತ್ತುಗಳು ಗಾಬರಿಗೊಂಡು ಕ್ಷಣ ಮಾತ್ರದಲ್ಲೇ ಭಾರಿ ಅನಾಹುತ ತಪ್ಪಿದೆ.
ಗ್ರಾಮೀಣ ಭಾಗದ ಆಚರಣೆಯಂತೆ ರಾತ್ರಿ ಸಮಯದಲ್ಲಿ ಬೆಂಕಿಯನ್ನು ಹಚ್ಚಿ ಪಂಜಿನ ಬೆಳಕಿನ್ನು ಹಿಡಿದು ಎತ್ತುಗಳನ್ನು ಬೆಂಕಿಯ ಮೇಲೆ ನೆಗೆಸುವ ಪದ್ಧತಿಯಂತೆ ಆಚರಿಸುವಂತಿದೆ. ಇನ್ನು ಇದೆ ವೇಳೆಯಲ್ಲಿ ಪಟಾಕಿ ಶಬ್ದ ಮತ್ತು ಬೆಂಕಿಯ ಬೆಳಕಿಗೆ ಗಾಬರಿಗೊಂಡ ಹಸು ಮತ್ತೊಂದು ಹಸುವಿನ ಮೇಲೆ ನೆಗೆದಿದೆ.ಹತ್ತಿರದಲ್ಲೇ ಇದ್ದ ವ್ಯಕ್ತಿ ಎತ್ತು ನೆಗೆದ ರಭಸಕ್ಕೆ ಕೆಳಗಡೆ ಬಿದ್ದಿದ್ದಾನೆ.ಹಾಗೂ ಸುತ್ತಲೂ ನೆರಿದಿದ್ದ ಜನರು ಕ್ಷಣ ಮಾತ್ರದಲ್ಲೇ ಆಗುತಿದ್ದ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.
ಇನ್ನು ಜೋರಾಗಿ ನೆಗೆದ ರಭಸಕ್ಕೆ ಎತ್ತುಗಳು ಒಂದಕೊಂದು ಗಾಯಗೊಂಡು ಪೆಟ್ಟಾಗಿದೆ ನಂತರ ಕಾಮಗೆರೆ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯರು ಎತ್ತಿಗೆ (ಬಸವ)ಚಿಕಿತ್ಸೆ ಕೊಟ್ಟು ಐದು ಹೋಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ವೇಳೆಯಲ್ಲಿ ಜನರಿಗೆ ಯಾವುದೇ ಅಪಾಯವಾಗಿರುವುದಿಲ್ಲ.ಇನ್ನು ಇಂತಹ ಆಚರಣೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಷರತ್ತುಗಳನ್ನೊಳಗೊಡಂತೆ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿರುವುದು ಮೂಲ ಕರ್ತವ್ಯವಾಗಿದೆ.
ವರದಿ :- ನಾಗೇಂದ್ರ ಪ್ರಸಾದ್