ಬೆಂಗಳೂರು : ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿನ್ನಲೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಈ ವೇಳೆ ಮಾತನಾಡಿದ ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮಿಜಿ 3 ,ಗಂಟೆಯೊಳಗೆ ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆ ಕರೆದು ನಿರ್ಧರಿಸಬೇಕು.ಇಲ್ಲಾದ್ರೆ ವಿಧಾನಸೌಧದವರೆಗೂ ಸಮಾವೇಶದ ಸ್ಥಳದಿಂದಲೇ ತೆರಳಿ ಅಮರಣಾಂತ ಉಪವಾಸ ನಡೆಸುವುದಾಗಿ ಹೇಳಿದ್ದು,ಸರ್ಕಾರಕ್ಕೆ 3 ಗಂಟೆಗಳವರೆಗೆ ಗಡುವು ನೀಡಿದ್ದಾರೆ..ನಾವು ಬಂದಿರೋದು ಮೀಸಲಾತಿ ಆದೇಶ ತೆಗೆದುಕೊಂಡು ಹೋಗಲು ಬಂದಿರೋದು ಬರೀ ಗೈಯಲ್ಲಿ ವಾಪಸ್ ಹೋಗಲ್ಲ ಎಂದು ಸ್ವಾಮಿಜಿ ಎಚ್ಚರಿಸಿದ್ದಾರೆ..ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದೆ. ರಾಜಕೀಯ ಮುಖಂಡರು ಕೂಡ ಪಕ್ಷಾತೀತವಾಗಿ ಭಾಗಿಯಾಗಿದ್ದಾರೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ,ಸಚಿವರಾದ ಮುರುಗೇಶ್ ನಿರಾಣಿ ,ಸಿ.ಸಿ.ಪಾಟೀಲ್ ,ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಳಾಳ್ಕರ್ , ಕಾಂಗ್ರೆಸ್ ಮುಖಂಡ ಹಾಗೂ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ,ವಿಜಯನಾಂದ ಕಾಶಪ್ಪನವರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆ. ಮಳೆಯ ನಡುವೆಯು ಜನರು ಸಮಾವೇಶದಲ್ಲಿ ಮುಖಂಡರ ಒಗ್ಗಟ್ಟು ಪ್ರದರ್ಶನ ಜೋರಾಗಿ ಕಂಡುಬಂದಿದ್ದು.ಸರ್ಕಾರದ ನಡೆ ಮುಂದೆ ಏನು ಎಂಬುದನ್ನು ಕಾದು ನೋಡಬೇಕಿದೆ.