ಕುರುಬ ಸಮುದಾಯದಿಂದ ಎಸ್ಟಿ ಮೀಸಲಾತಿ ಗಾಗಿ “ಹಕ್ಕೊತ್ತಾಯ ” ಪಾದಯಾತ್ರೆ.

ಕುರುಬ ಸಮುದಾಯದಿಂದ ಎಸ್ಟಿ ಮೀಸಲಾತಿ ಗಾಗಿ “ಹಕ್ಕೊತ್ತಾಯ ” ಪಾದಯಾತ್ರೆ.

 

 

ಎಸ್ಟಿ  ಪಟ್ಟಿಯಲ್ಲಿದ್ದರೂ ಸಹ ಮೀಸಲಾತಿಯಿಂದ ವಂಚಿತರಾಗಿರುವ ರಾಜ್ಯ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಲು ಕುರುಬ ಸಮುದಾಯದಿಂದ ಜಾಗೃತಿ ಪಾದಯಾತ್ರೆ.

 

ಮೂಲತಹ ಬುಡಕಟ್ಟು ಜನಾಂಗ ಆಗಿರುವ ಕುರುಬ ಸಮುದಾಯವನ್ನು ಕರ್ನಾಟಕ ರಾಜ್ಯದಲ್ಲಿ ಜೇನುಕುರುಬ, ಕಾಡುಕುರುಬ ,ಎಸ್ಟಿ ಪಟ್ಟಿಯಲ್ಲಿದೆ ಹಾಗೂ ಎಸ್ ಟಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 28ರಲ್ಲಿ ಇರುವ ಕುರುಬ ಸಮುದಾಯ ಕೇವಲ ಕೊಡಗು ಜಿಲ್ಲೆಗೆ ಸೀಮಿತ ಗೊಂಡಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಇಲ್ಲಿವರೆಗೂ ಮನವಿ ಮಾಡುತ್ತಾ ಬಂದಿದ್ದೇವೆ.

 

ಇದರ ಭಾಗವಾಗಿ ಇದುವರೆಗೂ ನಮ್ಮ ಸಮುದಾಯ ಸರ್ಕಾರಗಳಿಗೆ ಎಷ್ಟೇ ಮನವಿಗಳನ್ನು ಸಲ್ಲಿಸಿದ್ದರೂ ಸರ್ಕಾರಗಳು ನಮ್ಮಮನವಿಗೆ ಸ್ಪಂದಿಸದೆ ನಿರ್ಲಕ್ಷ ತೋರುತ್ತಿವೆ ಈ ದಿಸೆಯಲ್ಲಿ ನಮ್ಮ ಹಕ್ಕುಗಳಿಗಾಗಿ ಸಮಾಜದ ಜಗದ್ಗುರುಗಳು ಹಾಗೂ ಪರಮ ಪೂಜ್ಯರು ಗಳು ಜನಪ್ರತಿನಿಧಿಗಳು ಮುಖಂಡರುಗಳು ಹಾಗೂ ಸಮುದಾಯದ ಸಂಘಟನೆಗಳು ಒಕ್ಕೊರಲಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕುರುಬ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಸ್ ಟಿ ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಮಾಡಲಾಗುತ್ತಿದ್ದು. ಇದರ ಭಾಗವಾಗಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿಸ್ವಾಮಿಗಳು ಹಾಗೂ ಕನಕಗುರುಪೀಠದ ಪರಮಪೂಜ್ಯರ ಗಳ ನೇತೃತ್ವದಲ್ಲಿ ಎಸ್ಟಿ ಮೀಸಲಾತಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಿನಾಂಕ 15 ರಿಂದ ಕಾಗಿನೆಲೆಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು ಪಾದಯಾತ್ರೆಯು ಜನವರಿ15 ನೇ ತಾರೀಖಿನಿಂದ ಆರಂಭಗೊಂಡು ಫೆಬ್ರವರಿ 3ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ ಇದಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಮೂಲಕ ಬರುವ ಪಾದಯಾತ್ರೆ ತುಮಕೂರು ಜಿಲ್ಲೆಗೂ ಸಹ ಇದೇ ತಿಂಗಳ 28ರಂದು ಶಿರಾ ತಾಲೂಕಿನ ಜವಗೊಂಡನಹಳ್ಳಿ ಮೂಲಕ ಜಿಲ್ಲೆಗೆ ಆಗಮಿಸುತ್ತಿದ್ದು ಸುಮಾರು ಆರು ದಿನಗಳ ಕಾಲ ನಮ್ಮ ಜಿಲ್ಲೆಯ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಸಂಚರಿಸುತ್ತದೆ ಆದ್ದರಿಂದ ಪಾದಯಾತ್ರೆ ಜಿಲ್ಲೆಗೆ ಆಗಮಿಸುವ ದಿನದಿಂದ ಬೆಂಗಳೂರಿಗೆ ತಲುಪುವವರೆಗೂ ನಮ್ಮ ಜಿಲ್ಲೆಗಳಲ್ಲಿ ನಮ್ಮ ಸಮುದಾಯದಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಸಿದ್ಧಗೊಳಿಸಲಾಗಿದ್ದು ಹೆದ್ದಾರಿ ಮುಖಾಂತರ ಜಿಲ್ಲೆಗೆ ಆಗಮಿಸುವ ಪಾದಯಾತ್ರೆಗೆ ಅಲ್ಲಲ್ಲಿ ಪಾದಯಾತ್ರೆಗೆ ಬರುವ ಸಮುದಾಯದವರಿಗೆ ಉಳಿದುಕೊಳ್ಳಲು ಎಲ್ಲ ತರಹದ ಸೌಲತ್ತುಗಳನ್ನು ಸಿದ್ಧಗೊಳಿಸಿ ಅದಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು ಪ್ರತಿ ಸಮಿತಿಗಳು ಇದರ ಮೇಲುಸ್ತುವಾರಿಯನ್ನು ನಿರ್ವಹಿಸುತ್ತಾರೆ ಹಾಗೂ ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ಪಾದಯಾತ್ರೆ ಸಂಚರಿಸಲಿದ್ದು ಊಟ ವಸತಿ ವೈದ್ಯಕೀಯ ಸೌಲತ್ತುಗಳನ್ನು ಹಾಗೂ ಮುಂತಾದ ಎಲ್ಲಾ ಸೌಕರ್ಯಗಳನ್ನು ಸಿದ್ಧಗೊಳಿಸಲಾಗಿದೆ. ಎಂದು ಹಾಲುಮತ ಮಹಾಸಭಾ ತಿಳಿಸಿದೆ.

 

ಕುರುಬ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕೈಗೊಂಡಿರುವ ಪಾದಯಾತ್ರೆಯು ಪಕ್ಷಾತೀತ ವಾಗಿದ್ದು ಹೋರಾಟದಲ್ಲಿ ಎಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.ಇನ್ನು ಎಸ್ಟಿ ಮೀಸಲಾತಿ ವಿಷಯದಲ್ಲಿ ಎಲ್ಲ ರಾಜಕೀಯ ಮುಖಂಡರನ್ನು ಸಹಮತವಿದೆ ಪರಮಪೂಜ್ಯರ ಗಳ ನೇತೃತ್ವದಲ್ಲಿ ನಡೆಯುತ್ತಿರುವ ಕುರುಬ ಸಮುದಾಯದ ಹಕ್ಕೋತ್ತಾಯ ಪಾದಯಾತ್ರೆಯಲ್ಲಿ ಮೀಸಲಾತಿಗಾಗಿ ಸಮುದಾಯದ ಎಲ್ಲಾ ಮುಖಂಡರು ಭಾಗವಹಿಸಬೇಕೆಂದು ಹಾಲುಮತ ಮಹಾಸಭಾ ಪದಾಧಿಕಾರಿಗಳು ತಿಳಿಸಿದ್ದಾರೆ.

 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಗರುಡಯ್ಯ ,ರಾಜ್ಯ ಸಂಚಾಲಕರಾದ ಲಕ್ಷ್ಮಿನರಸಿಂಹ ರಾಜ್ಯ, ಪ್ರಧಾನ ಕಾರ್ಯದರ್ಶಿ ಟಿ ಇ ರಘುರಾಮ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version