ಸಂಘಟನೆಗಳು ಬಹುಬೇಗ ಹುಟ್ಟಿ ಬಹುಬೇಗನೆ ಕಾಣೆಯಾಗುತ್ತವೆ ಹನುಮಂತರಾಯಪ್ಪ

ಸಂಘಟನೆಗಳು ಬಹುಬೇಗ ಹುಟ್ಟಿ ಬಹುಬೇಗನೆ ಕಾಣೆಯಾಗುತ್ತವೆ ಹನುಮಂತರಾಯಪ್ಪ

 

ತುಮಕೂರು :- ಸಮಾಜದಲ್ಲಿ ಸಮುದಾಯದ ಅಭಿವೃದ್ಧಿ ಹಾಗೂ ಇತರೆ ಕಾರಣಗಳಿಗಾಗಿ ಸೃಷ್ಟಿಯಾಗುವ ಸಂಘಟನೆಗಳು ಇಂದಿನ ದಿನಮಾನಗಳಲ್ಲಿ ಬಹುಬೇಗನೆ ಹುಟ್ಟಿ ಬಹುಬೇಗನೆ ಕಾಣೆಯಾಗುತ್ತವೆ ಎಂದು ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಅವರು ಕಳವಳ ವ್ಯಕ್ತಪಡಿಸಿದರು.

 

 

ನಗರದ ರಿಂಗ್ ರಸ್ತೆಯ ಗೆದ್ದಲಹಳ್ಳಿ ಸರ್ಕಲ್ ಮಹಾಕವಿ ಕುವೆಂಪು ಸಭಾಂಗಣದಲ್ಲಿ ನಡೆದ ಉಪ್ಪಾರಳ್ಳಿ ಒಕ್ಕಲಿಗರ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಂತರ ಮಾತನಾಡಿದ ಅವರು ಸಮುದಾಯದ ಅಭಿವೃದ್ಧಿಗಾಗಿ ಬಹಳ ಉತ್ಸಾಹ ಕರಾಗಿ ಅನೇಕ ಯೋಜನೆಗಳನ್ನು ಇಟ್ಟುಕೊಂಡು ಸಂಘಗಳನ್ನು ಸ್ಥಾಪನೆ ಮಾಡುತ್ತೇವೆ ಆದರೆ ಆ ಸಂಘಗಳ ದೇಯೋದ್ದೇಶಗಳು ಈಡೇರದೇ ಹೋದಾಗ ಅಂತಹ ಸಂಘಗಳು ಯಾರ ಕಣಿಗೂ ಕಾಣದೇ ನಾಶಹೊಂದುತ್ತವೆ ಎಂದು ಹನುಮಂತರಾಯಪ್ಪ ಅವರು ತಿಳಿಸಿದರು ಸಂಘಗಳು ಸ್ಥಾಪನೆಯಾಗಬೇಕು ಆದರೆ ಬೈಲಾದಲ್ಲಿ ಸಂಘಟನೆಯನ್ನು ಎಂತಹುದೇ ಸಂದರ್ಭದಲ್ಲಿ ನಿರ್ವಹಿಸುವ ಸಾಮರ್ಥ್ಯವಿದೆ ಎಂದು ಬೈಲಾದಲ್ಲಿ ಬರೆದು ಕೊಂಡಿರುತ್ತೇವೆ ಆದರೆ ಉತ್ಸಾಹ ಕಳೆದುಕೊಂಡು ಸಂಘಗಳನ್ನು ನಾವಾಗಿಯೇ ನಾಶ ಮಾಡುತ್ತೇವೆ ಇಂತಹ ಕೆಲಸಗಳ ಆಗಬಾರದು ಇದಕ್ಕೆ ತಾಜಾ ಉದಾಹರಣೆ ಎಂದರೆ ಉಪ್ಪಾರಳ್ಳಿ ಯ ವಕ್ಕಲಿಗರ ಸಂಘ ಎಂದು ಅವರು ಈ ವೇಳೆ ತಿಳಿಸಿದರು. ಉಪ್ಪಾರಳ್ಳಿ ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಬಹಳ ಚಾಕಚಕ್ಯತೆಯಿಂದ ಸಂಘಟನೆಯನ್ನು ಮಾಡಿ ಒಕ್ಕಲಿಗ ಸಮುದಾಯದ ಸರ್ವರನ್ನು ತಮ್ಮ ಜೊತೆಗೆ ಕರೆದುಕೊಂಡು ಉತ್ತಮವಾದ ಸಂಘಟನೆ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವಾದದ್ದು ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾಪುರಸ್ಕಾರ ಮಾಡುವುದು ಕೂಡ ಅತ್ಯುತ್ತಮವಾದ ಕೆಲಸವಾಗಿದೆ ಎಂದು ಅವರು ಈ ವೇಳೆ ತಿಳಿಸಿದರು..

ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಬಿ ಬೋರೇಗೌಡ ಮಾತನಾಡಿ ವಿದ್ಯೆ ಸಾಧಕನ ಸ್ವತ್ತು ಯಾರು ಶ್ರಮವಹಿಸಿ ಹಸಿವಿನಿಂದ ಶ್ರದ್ಧಾಭಕ್ತಿಯಿಂದ ಕರೆಯುತ್ತಾರೆ ಅವರ ಅವರಿಗೆ ವಿದ್ಯೆ ಒಲಿಯುತ್ತದೆ ವಿದ್ಯಾರ್ಥಿಗಳು ಕೇವಲ ಉತ್ತಮವಾದ ಅಂಕಗಳನ್ನು ಗಳಿಸಿದರೆ ಸಾಲದು ಜೊತೆಗೆ ನಮ್ಮ ಸಮಾಜದ ಹಾಗೂ ನಮ್ಮ ದೇಶದ ಸಂಸ್ಕಾರಗಳನ್ನು ಕೂಡ ರೂಢಿಸಿಕೊಳ್ಳಬೇಕು ಇದರಲ್ಲಿ ಪೋಷಕರು ಕೂಡ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕೊಡುವಲ್ಲಿ ಮುಖ್ಯಪಾತ್ರ ವಹಿಸಬೇಕು ಇಂದು ನಮ್ಮ ಸಮಾಜದಲ್ಲಿ ಅತ್ಯುನ್ನತವಾದ ಪದವಿಗಳನ್ನು ಪಡೆದು ದೊಡ್ಡ ದೊಡ್ಡ ಸರ್ಕಾರಿ ಹುದ್ದೆಗಳಲ್ಲಿ ನಮ್ಮ ಸಮುದಾಯದವರು ಇದ್ದಾರೆ ಇಂಥವರು ನಮ್ಮ ಸಮುದಾಯದವರ ಬೆಳವಣಿಗೆಗೆ ಶ್ರಮಿಸಬೇಕಾಗಿರುವುದು ಉತ್ತಮವಾದ ಕಾರ್ಯ ಅವರು ಈ ವೇಳೆ ತಿಳಿಸಿದರು..

 

 

ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹಾಗೂ ಅರೆ ಶಂಕರ ಮಠ ಕಿತ್ತ ಮಂಗಲ ಕಾಡು ಮತ್ತಿಕೆರೆ ಕಸಬಾ ಹೋಬಳಿ ಕುಣಿಗಲ್ಲು ತಾಲೂಕಿನ ಜಗದ್ಗುರು ಶ್ರೀ ಶ್ರೀ ಸಿದ್ದರಾಮಯ್ಯ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಆಶೀರ್ವಚನ ನೀಡಿದರು.

 

ಇದೇ ವೇಳೆ ಉಪ್ಪಾರಳ್ಳಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಒಕ್ಕಲಿಗ ಸಮುದಾಯದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನ ಹಾಗೂ ಗೌರವಧನದ ಪ್ರತಿಭಾ ಪುರಸ್ಕಾರವನ್ನು ಮಾಡಿದರು.

 

 

ಈ ಸಂದರ್ಭದಲ್ಲಿ ಉಪ್ಪಾರಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಭೈರವ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಗಿರೀಶ್ ತುಮಕೂರು ಕರವೇ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಜೆಡಿಎಸ್ ಯುವ ಅಧ್ಯಕ್ಷ ಬೋರೇಗೌಡ ವಕೀಲರಾದ ದೊಡ್ಡ ನಾನಯ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ರಂಗಪ್ಪ ಮಹಾನಗರ ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಒಕ್ಕಲಿಗರ ವಿಕಾಸ ವೇದಿಕೆಯ ಹಾಗೂ ಸ್ನೇಹ ಸಮಿತಿಯ ಅಧ್ಯಕ್ಷ ರಂಗಸ್ವಾಮಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಪದಾಧಿಕಾರಿಗಳ ರಾಜು ಉಪ್ಪಾರಳ್ಳಿ ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಬೆಳ್ಳಿ ಲೋಕೇಶ್, ಉಪ್ಪಾರಳ್ಳಿ ಕುಮಾರ್, ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version