ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಷ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ 

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಷ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ 

ಕಸ್ಟಮ್ಸ್  ಅಧಿಕಾರಿಗಳಿಗೆ ಸಿಕ್ಕಿಬಿದ್ದ ಗುದನಾಳದಲ್ಲಿ  ಕ್ಯಾಪ್ಸುಲ್  ನೊಳಗೆ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ  ಮಹಿಳೆ.

 

ದೇವನಹಳ್ಳಿ ಗುದನಾಳದಲ್ಲಿ ಮರೆಮಾಚಿ  ಕ್ಯಾಪ್ಸುಲ್ ಗಳನ್ನ ಇಟ್ಟುಕೊಂಡು  ಕ್ಯಾಪ್ಸುಲ್ ನೊಳಗೆ ಚಿನ್ನ ಕಳ್ಳ ಸಾಗಣಿಕೆ  ಮಾಡುತ್ತಿದ್ದ ಮಹಿಳೆಯನ್ನ ಬೆಂಗಳೂರು  ಕಸ್ಟಮ್ಸ್  ಅಧಿಕಾರಿಗಳು  ಬಂಧಿಸಿದ್ದು, ಆರೋಪಿಯಿಂದ  535 ಗ್ರಾಂ  ತೂಕದ  26.11 ಲಕ್ಷ ಮೌಲ್ಯದ  ಚಿನ್ನ ಜಪ್ತಿ ಮಾಡಿದ್ದಾರೆ.

ಮಂಗಳವಾರ  ರಾತ್ರಿ 9: 30 ಕ್ಕೆ ಶಾರ್ಜಾದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಅರೇಬಿಯಾ  ಜಿ9 498 ವಿಮಾನದಲ್ಲಿ ಬಂದ ಮಹಿಳಾ ಪ್ರಯಾಣಿಕೆಯನ್ನ ಬೆಂಗಳೂರು  ಕಸ್ಟಮ್ಸ್ ಅಧಿಕಾರಿಗಳು  ವಿಚಾರಣೆ ನಡೆಸಿದ್ದಾಗ ಆಕೆ ತನ್ನ ಗುದನಾಳದಲ್ಲಿ ಕ್ಯಾಪ್ಸುಲ್  ಗಳನ್ನ ಅಡಗಿಸಿಕೊಂಡು ಕ್ಯಾಪ್ಸುಲ್ ಗಳಲ್ಲಿ ಚಿನ್ನವನ್ನ ಕಳ್ಳ ಸಾಗಣಿಕೆ  ಮಾಡುತ್ತಿದ್ದ  ಪ್ರಕರಣವನ್ನ ಪತ್ತೆ ಮಾಡಿದ್ದಾರೆ..

 

ಸುಡಾನ್ ದೇಶದ ಪಾಸ್ ಪೋರ್ಟ್  ಹೊಂದಿದ ಆಕೆ ವೈದಕೀಯ ವೀಸಾದಲ್ಲಿ ಭಾರತದಕ್ಕೆ ಬಂದಿದ್ದಳು, ಏರ್ ಪೋರ್ಟ್   ಟರ್ಮಿನಲ್  ಅನುಮಾನಸ್ಪದ ರೀತಿಯಲ್ಲಿ ಕಂಡ ಆಕೆಯನ್ನ ವಿಚಾರಣೆ ನಡೆಸಿದ್ದಾಗ ಚಿನ್ನ ಕಳ್ಳಸಾಗಾಣಿಕೆ  ಮಾಡುತ್ತಿರುವುದು  ಬೆಳಕಿಗೆ  ಬಂದಿದೆ,

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version