ನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ.

ನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ.

 

 

ತುಮಕೂರು_ನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತುಮಕೂರಿನ ಗೋಕುಲ ಬಡಾವಣೆಯ ಗಣಪತಿ ಕಲ್ಯಾಣಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು.

 

 

ಇನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಬಿ. ಜಿ ಕೃಷ್ಣಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತುಮಕೂರು ನಗರದಲ್ಲಿ ಕನ್ನಡದ ಅರಿವನ್ನು ಮೂಡಿಸುತ್ತಿರುವುದರಿಂದ ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ಅರಿವನ್ನು ತಿಳಿಸಲಾಗುತ್ತಿದೆ ಎಂದರು.

 

 

ನಗರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಕಮಲ ಬಡ್ಡಿಹಳ್ಳಿ ರವರು ಮಾತನಾಡಿ ಕನ್ನಡ ಸಾಹಿತ್ಯ ಎಂಬುದು ಒಂದು ದೊಡ್ಡ ಆಲದ ಮರವಿದ್ದಂತೆ ಅದರ ಪರಿಚಯ ಪ್ರತಿ ಮನೆ ಮನದಲ್ಲೂ ತಿಳಿಯುವಂತಾಗಬೇಕು ಈ ಮೂಲಕ ಕನ್ನಡ ಸಾಹಿತ್ಯ ಸಂಘಟನೆಗಳ ಶಕ್ತಿಯನ್ನು ಹೆಚ್ಚಿಸಿ ನಗರದ ಪ್ರತಿ ಮನೆಗಳಲ್ಲೂ ಕನ್ನಡದ ಅರಿವನ್ನು ಮೂಡಿಸುವ ಮೂಲಕ ಹೊಸ ಹೊಸ ಸಾಹಿತ್ಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಕನ್ನಡದ ಮೌಲ್ಯವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಕನ್ನಡ ಸಾಹಿತ್ಯಾಸಕ್ತರ ಕರ್ತವ್ಯವಾಗಿದೆ ಎಂದರು.

 

 

ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಕೆ .ಎಸ್ ಸಿದ್ದಲಿಂಗಪ್ಪ , ಹಿರಿಯ ಸಾಹಿತಿ ಪದ್ಮಪ್ರಸಾದ್, ಉಪನ್ಯಾಸಕ ಹನುಮಂತರಾಯಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಮರಿಬಸಪ್ಪ, ತಾಲೂಕು ಅಧ್ಯಕ್ಷರಾದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಹಿರಿಯ ಸಾಹಿತಿ ನಾಗಪ್ಪ, ಸಣ್ಣಹೊನ್ನಯ್ಯ ಕಂಟಲಗೆರೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

ಇನ್ನು ಕಾರ್ಯಕ್ರಮದಲ್ಲಿ ಡಾ. ಜಯಭಾಸ್ಕರಾಚಾರ್ಯ, ರಾಜೇಶ್ವರಿ ಪ್ರಾರ್ಥಿಸಿದರು ,ಮುದುಗೆರೆ ರಮೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಇನ್ನು ಕಾರ್ಯಕ್ರಮದಲ್ಲಿ ಕವಿಗಳಾದ ಡಾಕ್ಟರ್ ಬಿ ತೇಜಸ್ವಿ ಕಿರಣ್ ಸೇರಿದಂತೆ ಹಲವು ಕನ್ನಡ ಸಾಹಿತ್ಯ ಆಸಕ್ತರು ಸೇರಿದಂತೆ ಬಡಾವಣೆಯ ನಾಗರಿಕರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version