ಪಕ್ಷೇತರ ಅಭ್ಯರ್ಥಿ ನರಸೇಗೌಡರಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ.
ತುಮಕೂರು – 2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರಸೇಗೌಡ ರವರಿಂದ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದ್ದಾರೆ.
ತಮ್ಮ ಕುಟುಂಬಸ್ಥರು ಹಾಗೂ ಅಪಾರ ಬೆಂಬಲಿಗರೊಂದಿಗೆ ತುಮಕೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಣಾಳಿಕೆ ಹಾಗೂ ದೇವರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿರುವ ಅವರು ಇದುವರೆಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಕ್ಕೆ ಪಕ್ಷದ ನಾಯಕರು ನಮ್ಮನ್ನ ಕಡೆಗಣಿಸಿದ್ದು ಕಳೆದ ಮೂರು ಚುನಾವಣೆಯಲ್ಲೂ ತಾವು ಸಹ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಆದರೆ ಪಕ್ಷ ನಮಗೆ ಟಿಕೆಟ್ ನೀಡದೇ ಇರುವುದು ಬೇಸರ ತಂದಿದ್ದು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತುಮಕೂರು ನಗರದಾದ್ಯಂತ ಉತ್ತಮ ಸ್ಪಂದನೆ ದೊರಕುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ತುಮಕೂರು ನಗರದ ನಾಗರಿಕರು ಹಾಗೂ ಮತದಾರರು ನನ್ನನ್ನ ಆಶೀರ್ವದಿಸಲಿದ್ದಾರೆ ಆ ಮೂಲಕ ತುಮಕೂರು ನಗರದ ಜನತೆಯ ಆಶೀರ್ವಾದ ನನ್ನ ಮೇಲೆ ಇರಲಿದೆ ಅದರಂತೆ ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಾಕ್ಟರ್ ಗಿರೀಶ್, ಮನೋಹರ್, ಜೋಸೆಫ್ ,ಇರ್ಫಾನ್ ,ಸೃಷ್ಟಿ ,ಬಾಂಬು ಗಿರೀಶ್ ಸೇರಿದಂತೆ ಹಲವಾರು ಹಾಜರಿದ್ದರು
ವರದಿ – ಮಾರುತಿ ಪ್ರಸಾದ್ ತುಮಕೂರು