ತುಮಕೂರಿನ ಗಣೇಶೋತ್ಸವದಲ್ಲಿ ಯಾವುದೇ ರೀತಿಯಾದ ಡಿ.ಜೆ.ಗೆ ಆಸ್ಪದವಿಲ್ಲ : ಎಸ್.ಪಿ. ಖಡಕ್ ಆದೇಶ

ತುಮಕೂರಿನ ಗಣೇಶೋತ್ಸವದಲ್ಲಿ ಯಾವುದೇ ರೀತಿಯಾದ ಡಿ.ಜೆ.ಗೆ ಆಸ್ಪದವಿಲ್ಲ : ಎಸ್.ಪಿ. ಖಡಕ್ ಆದೇಶ

ತುಮಕೂರು : ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಪೂರ್ವಾಡ್‌ಐಪಿಎಸ್ ರವರ ಮಾರ್ಗದರ್ಶನದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಎಲ್ಲಾ ಸಮುದಾಯದ ಮುಖಂಡರುಗಳನ್ನು ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುತ್ತಿರುವ ಸಂಘ-ಸಂಸ್ಥೆಗಳು, ಮುಖಂಡರುಗಳನ್ನು ಕರೆಯಿಸಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡಲಾಯಿತು.

 

ಇದೇ ಸಂದರ್ಭದಲ್ಲಿ ಎಸ್.ಪಿ.ರವರು ಮಾತನಾಡುತ್ತಾ ಗಣಪತಿ ಕೂಡಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸುವುದರೊಂದಿಗೆ ಯಾವುದೇ ರೀತಿಯಾದ ಅಹಿತಕರ ಘಟನೆಗಳಿಗೆ ಆಸ್ಪದವನ್ನು ನೀಡದಂತೆ ತಿಳಿಸಿದರು. ಮುಂದುವರೆದು ಈ ಭಾರಿಯ ಗಣೇಶೋತ್ಸವದ ಮೆರವಣಿಗೆಗಳಲ್ಲಿ, ಗಣೇಶ ಕೂರಿಸುವ ಸ್ಥಳದಲ್ಲಿ ಯಾವುದೇ ರೀತಿಯಾದ ಡಿ.ಜೆ ಮತ್ತು ಬೃಹತ್ ಸ್ಪೀಕರ್‌ಗಳ ಅಳವಡಿಕೆಗೆ ತಮ್ಮ ಇಲಾಖೆಯಿಂದ ಅನುಮತಿಯನ್ನು ನೀಡಲಾಗುತ್ತಿಲ್ಲ, ಒಂದು ವೇಳೆ ಆ ರೀತಿಯಾಗಿ ಯಾರಾದರೂ ಅಳವಡಿಸಿದರೆ, ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

 

ಗಣೇಶೋತ್ಸವದ ಸಂದರ್ಭದಲ್ಲಿ ಅಳವಡಿಸಲಾಗುವ ಫ್ಲೆಕ್ಸ್‌ಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ಅನುಮತಿಯನ್ನು ಪಡೆದು ಹಾಕಬಹುದಾಗಿರುತ್ತದೆ, ಅದಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾದ ಅಡಚಣೆಯಿರುವುದಿಲ್ಲ ಜೊತೆಗೆ ತಮ್ಮ ಫ್ಲೆಕ್ಸ್ ಬ್ಯಾನರ್‌ಗಳು ಪ್ರಚೋದನಕಾರಿಯಾಗದೇ, ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಪ್ರತೀರೂಪವಾಗಿರಬೇಕೆಂದು ಮನವಿ ಮಾಡಿದರು. ಜೊತೆಗೆ ತಮ್ಮ ಫ್ಲೆಕ್ಸ್ ಬ್ಯಾನರ್‌ಗಳನ್ನು ತಾವೇ ಕಾಪಾಡಿಕೊಳ್ಳುವ ಹೊಣೆಯನ್ನು ಹೊರಬೇಕಾಗಿಯೂ ತಿಳಿಸಿದರು.

 

ಈ ಸಭೆಯಲ್ಲಿ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಪೊಲೀಸ್ ಅದೀಕ್ಷಕರಾದ ರಾಹುಲ್ ಕುಮಾರ್ ಶಹಪೂರವಾಡ್, ಹೆಚ್ಚವರಿ ಪೊಲೀಸ್ ಅದೀಕ್ಷಕರು, ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾರವರು, ಬೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಠಾಣೆಯ ಮುಖ್ಯಸ್ಥರು, ಹಾಗೂ ಬೇರೆ ಬೇರೆ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು, ನಗರ ಡಿಎಸ್ಪಿ ಶ್ರೀನಿವಾಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ನಗರದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version