ಪಂಚರತ್ನ ಯೋಜನೆ ಮನೆ ಮನೆಗೆ ತಲುಪಿಸಲು ಜನ ಸಮ್ಮಿಲನ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಕರೆ

 

ಪಂಚರತ್ನ ಯೋಜನೆ ಮನೆ ಮನೆಗೆ ತಲುಪಿಸಲು ಜನ ಸಮ್ಮಿಲನ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಕರೆ

 

ತುಮಕೂರು: ಜೆಡಿಎಸ್ ಪಂಚರತ್ನಯೋಜನೆಗಳು ಜನ ಸಾಮಾನ್ಯರಿಗೆ ಉಪಕಾರಿಯಾಗಿದ್ದು ಮನೆ ಮನೆಗೆ ಕಾರ್ಯಕರ್ತರು ತಲುಪಿಸಬೇಕು ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು.

 

 

 

 

ಅವರು ನಗರದ ಜಿಲ್ಲಾ ಜೆಡಿಎಸ್‌ ಕಛೇರಿಯಲ್ಲಿ ಭಾನುವಾರ ಸಂಜೆ ನಡೆದ ನೂತನ ನಗರಾಧ್ಯಕ್ಷ ಕೆ.ಟಿ ವಿಜಯ್ ಗೌಡರ ಪದಗ್ರಹಣ ಹಾಗೂ ನಗರ ಅಭ್ಯರ್ಥಿ ಗೋವಿಂದರಾಜು ನೇತೃತ್ವದ ಜನ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಬಡವರು ಅನಾರೋಗ್ಯದಿಂದ ಬಳಲುತ್ತಿದ್ದು, ರಾಜ್ಯದಲ್ಲಿ ಸಿಗಾಬೇಕಾದ ಮುಖ್ಯಮಂತ್ರಿ ಆರೋಗ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಸೌಲಭ್ಯಗಳನ್ನು ಪಂಚರತ್ನ ಯೋಜನೆಗಳು ದೊರಕಿಸಲುಸಹಕಾರಿಯಾಗಿವೆ.ಇನ್ನು ಸಧ್ಯ ಯುವಕರು ಆನ್‌ ಲೈನ್ ಗಳಿಂದ ಹಾಳಾಗುತ್ತಿದ್ದಾರೆ. ಅದನ್ನು ತಪ್ಪಿಸಬೇಕು ಎಂದು ಹೇಳಿದರು.

 

 

 

ತುಮಕೂರು ನಗರ ಅಭ್ಯರ್ಥಿ ಗೋವಿಂದರಾಜು ಮಾತನಾಡಿ ಕುಮಾರಸ್ವಾಮಿಯವರು ತುಮಕೂರು ಜಿಲ್ಲೆಗೆ 5 ರಿಂದ 6 ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಬಡ್ಡಿ ರಹಿತ ಸಾಲವನ್ನು ನೀಡುವ ಮುಖೇನ ಜನರ ಜೀವನವನ್ನು ಮಂಜು ಉತ್ತಮವಾಗಿ ರೂಪಿಸುವ ಭರವಸೆಯನ್ನು ನೀಡಿದ್ದಾರೆ. ಪಂಚರತ್ನ ಯೋಜನೆಗಳಿಂದ ಬಡ ಮ ಕಳಿಗೆ ಶಿಕ್ಷಣ, 60 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ಪೆನ್ನನ್ , ಮಹಿಳೆಯರನ್ನು ಸಬಲಿಕರಣ ಮಾಡುವ ಕನಸನ್ನು ಹೊಂದಿದ್ದಾರೆ ಎಂದು ತಿಳಿಸಿದರು. ನಗರದಲ್ಲಿ ಯುವ ಜೆಡಿಎಸ್‌ ಕಾರ್ಯಕರ್ತರು ಶಿವಕುಮಾರ ಸ್ವಾಮಿ ವೃತ್ತದಿಂದ ನಗರದ ಜೆಡಿಎಸ್‌ ಕಛೇರಿವರೆಗೂ ಬೈಕ್ ಘೋ ರಾಲಿ ನಡೆಸಿದರು.

 

 

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್ .ನಾಗರಾಜು, ಉಪ ಮೇಯರ್ ಟಿ.ಕೆ ನರಸಿಂಹಮೂರ್ತಿ, ರಾಜ್ಯ ವಕ್ತಾರ ಹಾಲನೂರು ಲೇಪಾಕ್ಷಿ, ಪಾಲಿಕೆ ಸದಸ್ಯ ಬಿ.ಎಸ್ ಮಂಜುನಾಥ್, ನಗರಾಧ್ಯಕ್ಷ ಕೆ.ಟಿ ವಿಜಯ್ ಗೌಡ, ವಕ್ತಾರಮಧುಸೂದನ್, ಸೇವಾದಳದ ಕೆಂಪರಾಜು, ರೈತ ಘಟಕದ ರಂಗನಾಥ್ ಮಹಿಳಾ ಜಿಲ್ಲಾಧ್ಯಕ್ಷ ಕುಸುಮ ಲೀಲಾವತಿ ಜಯರಾಮ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version