ಜುಲೈ 21ರಂದು ಆಚರಿಸಲಾಗುವ ಬಕ್ರೀದ್ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧಿಸಿ ಆಯಾ ಮಸೀದಿಗಳಲ್ಲಿ 50 ಜನರನ್ನು ಮೀರದಂತೆ ನಿಯಂತ್ರಣ ಕ್ರಮಗಳು ಅನುಸರಿಸುವ ಮೂಲಕ ಪ್ರಾರ್ಥನೆ ಸಲ್ಲಿಸಲು ಮಾರ್ಗಸೂಚಿಯಲ್ಲಿ ಆದೇಶಿಸಲಾಗಿತ್ತು.
ಆದರೆ ಇಂದು ನೂತನ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿರುವ ಸರ್ಕಾರ ಇನ್ನು ಬಕ್ರಿದ್ ಹಬ್ಬದ ವೇಳೆ ಮಸೀದಿಗಳಲ್ಲಿ 50 ಜನ ಮೀರದಂತೆ ಬದಲಾಗಿ ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇಕಡ 50 ರಷ್ಟು ಜನರು ಮೀರದಂತೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ