ಚೋಳರ ಕಾಲದಲ್ಲಿ ನಿರ್ಮಿಣವಾದ ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ತುಮಕೂರು ಜಿಲ್ಲೆಯ ಮಧುಗಿರಿ ಸಮೀಪದ ಶೈವ ಮತ್ತು ವೈಷ್ಣವ ಪಂಥ ಹಾಗೂ ಜೈನ ಧರ್ಮದಿಂದ ಪೂಜಿಸುವ ಹರಿಹರೇಶ್ವರ ಸ್ವಾಮಿಯ ದೇವಾಲಯ ಹಾಗೂ ಕೊರಟಗೆರೆ ತಾಲ್ಲೂಕು ಕಲ್ಕೆರೆ ಗ್ರಾಮದ ವುಳೆನವರು ಮತ್ತು ಜೀರಿಗೆನವರ ಮನೆ ದೇವರು ಆಗಿರುವ ಶ್ರೀ ಕೋಡಿ ರಂಗನಾಥ ಸ್ವಾಮಿ ದೇವಸ್ಥಾನದ ಒಳಾಂಗಣ ಮತ್ತು ಹೋರಗಂಣಗಳನು ಸ್ವಚತೆ ಮಾಡಿ ಮೂಲ ಸ್ವರೂಪದ ರೀತಿಯಲ್ಲಿ ಕಾಣುವಂತೆ ಸ್ವಚತೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕಲ್ಕೆರೆ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದ ಟ್ರಸ್ಟಿನ ಅಧ್ಯಕ್ಷರದ ಮೋಹನ್ ಕುಮಾರ್, ಮತ್ತು ಕಾರ್ಯದರ್ಶಿ ರಾಜಣ್ಣ ಹಾಗೂ ಪರಿಸರ ಸಂರಕ್ಷಣೆ ವೇದಿಕೆಯ ಪ್ರಕಾಶ್, ಧನಂಜಯ, ರಘು ಸಮರ್ಥ , ಅಂಬುಜ ಗುಜ್ಜಾರಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು.