ನಮ್ಮ ವಿರುದ್ಧದ ಐಟಿ ದಾಳಿ ರಾಜಕೀಯ ಪ್ರೇರಿತವಾದದ್ದು: ಡಿಕೆಶಿ ಪರ ಪ್ರಚಾರ ಸಂಸ್ಥೆಯ ಸಹಸಂಸ್ಥಾಪಕ ನರೇಶ್ ಆರೋಪ
ಬೆಂಗಳೂರು: ಐಟಿ ದಾಳಿಯು ರಾಜಕೀಯಪ್ರೇರಿತವಾದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. ವಿರೋಧ ಪಕ್ಷಕ್ಕಾಗಿ ಮತ್ತು ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿರುವುದರಿಂದ ನನ್ನನ್ನು ಹಾಗೂ ನನ್ನ ಸಹೋದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಐಟಿ ದಾಳಿ ನಡೆಸಲಾಗಿತ್ತು. ಕಾಂಗ್ರೆಸ್ ಪಕ್ಷದ ನಾಯಕರನ್ನು ಯಾವುದೇ ವಿಷಯದಲ್ಲಿ ಸಿಲುಕಿಸಲು ಸಾಧ್ಯವಾಗದಿರುವಾಗ ವೃತ್ತಿಪರವಾಗಿ ದೇಶದ ಪ್ರಮುಖ ವಿರೋಧ ಪಕ್ಷಕ್ಕೋಸ್ಕರ ಕೆಲಸ ಮಾಡದಂತೆ ಭೀತಿ ಹುಟ್ಟಿಸಲು ಎಲೆಕ್ಷನ್ ಕ್ಯಾಂಪೇನ್ ಸಂಸ್ಥೆಯ ಮೇಲೆ ವ್ಯವಸ್ಥಿತ ದಾಳಿ ಮಾಡಲಾಗಿದೆ ಎಂದು ಕೆಪಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪ್ರಚಾರ ಸಂಸ್ಥೆಯಾಗಿರುವ ಡಿಸೈನ್ ಬಾಕ್ಸ್ಡ್ ಸಹ ಸಂಸ್ಥಾಪಕ ನರೇಶ್ ಅರೋರ ಆರೋಪಿಸಿದ್ದಾರೆ .
ಡಿಸೈನ್ ಬಾಕ್ಸ್ಡ್ ಮೇಲೆ ಐಟಿ ದಾಳಿಯಾಗಿದೆ. ನಿಜ, ಆದರೆ ಯಾವುದೇ ಅನಧಿಕೃತ ಲೆಕ್ಕಾಚಾರಗಳು ಅಥವಾ ಮೌಲ್ಯಯುತವಾದಂತಹ ಯಾವುದೇ ವಸ್ತುಗಳು ನಮ್ಮಲ್ಲಿ ಸಿಕ್ಕಿಲ್ಲ. ಹೀಗಾಗಿ ನಾನು ಹಾಗೂ ನನ್ನ ಸಹೋದ್ಯೋಗಿಗಳು ಪಾರದರ್ಶಕವಾಗಿದ್ದೇವೆ. ಆದ್ದರಿಂದ ಮುಚ್ಚುಮರೆ ಮಾಡುವಂತಹುದು ಇಲ್ಲಿ ಏನೂ ಇಲ್ಲ. ನಾವು ಕಾನೂನನ್ನು ಪಾಲಿಸುವ ಪ್ರಜೆಗಳು ಮತ್ತು ತೆರಿಗೆ ಪಾವತಿದಾರರು ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಹೇಳಿದ್ದಾರೆ.
ಐಟಿ ದಾಳಿಯು ರಾಜಕೀಯಪ್ರೇರಿತವಾದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. ವಿರೋಧ ಪಕ್ಷಕ್ಕಾಗಿ ಮತ್ತು ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿರುವುದರಿಂದ ನನ್ನನ್ನು ಹಾಗೂ ನನ್ನ ಸಹೋದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಐಟಿ ದಾಳಿ ನಡೆಸಲಾಗಿತ್ತು. ಕಾಂಗ್ರೆಸ್ ಪಕ್ಷದ ನಾಯಕರನ್ನು ಯಾವುದೇ ವಿಷಯದಲ್ಲಿ ಸಿಲುಕಿಸಲು ಸಾಧ್ಯವಾಗದಿರುವಾಗ ವೃತ್ತಿಪರವಾಗಿ ದೇಶದ ಪ್ರಮುಖ ವಿರೋಧ ಪಕ್ಷಕ್ಕೋಸ್ಕರ ಕೆಲಸ ಮಾಡದಂತೆ ಭೀತಿ ಹುಟ್ಟಿಸಲು ಎಲೆಕ್ಷನ್ ಕ್ಯಾಂಪೇನ್ ಸಂಸ್ಥೆಯ ಮೇಲೆ ವ್ಯವಸ್ಥಿತ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿಪರ್ಯಾಸವೆಂದರೆ, ಆಡಳಿತದಲ್ಲಿದ್ದು ಪ್ರಬಲವಾಗಿದ್ದರೂ ಸಹ ವಿರೋಧ ಪಕ್ಷಕ್ಕಾಗಿ ಕೆಲಸ ಮಾಡುವವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ರಾಜಕೀಯ ಉದ್ದೇಶಕ್ಕಾಗಿ ತೆರಿಗೆ ಸಂಸ್ಥೆಯನ್ನು ಬಳಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿದೆ. ಇಂತಹ ಹಿಂಸೆಯನ್ನು ಅನುಭವಿಸುತ್ತಿರುವುದು ನಾವಷ್ಟೇ ಅಲ್ಲ ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು, ವಿರೋಧ ಪಕ್ಷವನ್ನು ತುಳಿಯಲು ಯತ್ನಿಸುವುದು ಕೆಟ್ಟ ಮಾದರಿ ಎಂದು ಹೇಳಲು ನಾವು ಬಯಸುತ್ತೇವೆ ಎಂದು ನರೇಶ್ ಅರೋರ ತಿಳಿಸಿದ್ದಾರೆ.