ಗ್ರಾಮ್ ಒನ್ ಕೇಂದ್ರದ ಐಡಿ ಕೊಡಲು ೧೦-೧೫ ಸಾವಿರ ಪಿಕುತ್ತಿರುವ ನಾರಾಯಣಸ್ವಾಮಿ- ಮೊಬೈಲ್,ಜೆರಾಕ್ಸ್ ಅಂಗಡಿಳಿಗೆ ಹಣಪಡೆದು ಐಡಿ ನೀಡಿದ ಆರೋಪ.
ತುಮಕೂರು:ಕರ್ನಾಟಕ ರಾಜ್ಯದ ಸರ್ಕಾರದ ಗ್ರಾಮ್ ಒನ್ ಕೇಂದ್ರದ ಐಡಿ ಕೊಡಲು ೧೦-೧೫ ಸಾವಿರ ಹಣ ಪಡೆದು ಐಡಿ ಕೋಟ್ಟರೆ ಮತ್ತೆ ಕೆಲವು ಕಡೆ ಮೊಬೈಲ್,ಜೆರಾಕ್ಸ್ ಅಂಗಡಿಳಿಗೆ ಗ್ರಾಮ್ ಒನ್ ಐಡಿ ನೀಡಿ ಹಣಪಡೆಯುತ್ತಿರುವ ಸೇವಾಸಿಂಧುವಿನ ಜಿಲ್ಲಾ ಸಂಯೋಜಕ ನಾರಾಯಣಸ್ವಾಮಿ ಯವರಿಗೆ ಕಡಿವಣ ಹಾಕುವರು ಯಾರು?.ಜಿಲ್ಲಾ ಅಧಿಕಾರಿಗಳ ಕಾಚೇರಿಯಲ್ಲಿ ಇರೀತಿಯಾದರೆ ಗತಿಯೇನು…ಇನ್ನು ಸೇವಾಸಿಂದು ಐಡಿ ಮತ್ತು ಆಯುಷ್ಮಾನ ಐಡಿ ಕೋಡಲು ಹಣ ಪಡೆದಿದ್ದಾರೆ ಎಂದು ವಿಎಲ್‌ಇಗಳು ಆರೋಪಿಸಿದ್ದಾರೆ.
ಆರೋಪ ಮಾಡುತ್ತಿರುವ ಮಹಿಳೆ
ಚಿಕ್ಕನಾಯಕನ ಹಳ್ಳಿ, ಕೊರಟಗೆರೆ, ತಿಪಟೂರು, ಕುಣಿಗಲ್, ಗುಬ್ಬಿ ಮತ್ತು ಪಾವಗಡ ತಾಲ್ಲೂಕುಗಳ ತುಮಕೂರು,ತುರುವೇಕೆರೆ, ಶಿರಾ ಮತ್ತು ಮಧುಗಿರಿ ತಾಲ್ಲೂಕುಗಳ ಗ್ರಾಮ್ ಒನ್ ಕೇಂದ್ರದಗಳು ಪ್ರಾರಂಭವಾಗುತ್ತಿರುವ ನಿಟ್ಟಿನಲ್ಲಿ ನಾರಾಯಣಸ್ವಾಮಿ ಅರ್ಜಿದಾರರ ಅತ್ತಿರ ಹಣಪಡೆಯುತ್ತಿವದು ಎಷ್ಟು ಸರಿ?
ಚಿತ್ರ_ ಲಂಚದ ಆರೋಪ ಬೇಡಿಕೆ ಹೊತ್ತ ನೌಕರ ನಾರಾಯಣಸ್ವಾಮಿ
ತುಮಕೂರು ಜಿಲ್ಲೆಯ ಸಿಎಸ್ಸಿ ಕಾಮನ್ ಸರ್ವಿಸ್ ಸೆಂಟರ್ ಜಿಲ್ಲೆಯ ಸಂಯೋಜಕರಾಗಿ ನೇಮಕವಾಗಿರುವ ನಾರಾಯಣಸ್ವಾಮಿ ಎಂಬುವರು ಯಾವುದೇ ಕೆಲಸ ಮಾಡಿಕೊಡಲು ಹಣವಿಲ್ಲದೆ ಕೆಲಸ ಮಾಡುತ್ತಿಲ್ಲ ಎಂಬುದು ತುಮಕೂರು ಜಿಲ್ಲೆಯ ವಿಎಲ್‌ಇಗಳ ಆರೋಪವಾಗಿದೆ. ಹಾಗೂ ಈ ಹಿಂದೆ ಆಯುಷ್ಮಾನ ಐಡಿ ಕೊಡಲು ರೂ.೮೦೦೦ ತೆಗೆದುಕೊಂಡು ಆಯುಷ್ಮಾನ ಐಡಿ ಕೊಟ್ಟಿದ್ದಾರೆ. ಸಿಎಸ್ಸಿಯಲ್ಲಿ ಯಾವುದೇ ಕೆಲಸ ಮಾಡದಿದ್ದರೂ ಅಂತವರಿಗೆ ಆಯುಷ್ಮಾನ ಇಡೀ ಕೊಟ್ಟಿದ್ದು ಜಿಲ್ಲೆಗಳು ರಾಜ್ಯಮಟ್ಟದ ಅಧಿಕಾರಿಗಳಿಗೆ ಈ ಹಿಂದೆ ದೂರು ನೀಡಿದ್ದರು. ತದನಂತರ ಎಲ್ಲರಿಗೂ ಆಯುಷ್ಮಾನ ಕೊಟ್ಟಿದ್ದಾರೆ ಆದನಂತರ ಕೊರೊನಾದಿಂದ ಕೆಲವು ತಿಂಗಳಲ್ಲಿ ತಾಲ ಆಯುಷ್ಮಾನ ಐಡಿಯನ್ನು ಸ್ಥಗಿತಗೋಳೀಸಿದ್ದಾರು. ನಂತರ ಅವರಿಗೆ ಬೇಕಾದವರಿಗೆ ಹಣಪಡೆದು ಆಯುಷ್ಮಾನ್ ಐಡಿಕೊಟ್ಟಿದ್ದಾರೆ. ಬೇರೆಯವರು ಪ್ರಶ್ನೇಮಾಡಿದರು ನನದೆ ಗೊತ್ತಿಲ್ಲ ಎಂದು ಪೊನ್ ರಿಸಿವ ಮಾಡದೆ ಕಾಲ್ ಮಾಡುವರ ಪೊನ್ ನಂಬರನ್ನು ಬ್ಲಕ್‌ಲಿಟ್ಸ್‌ಗೆ ಹಾಕುತ್ತರೆ ಎಂಬ ಆರೋಪ ಜಿಲ್ಲೆಯ ಎಲ್ಲಾ ವಿಎಲ್‌ಇಗಳದ್ದು.
ನಾರಾಯಸ್ವಾಮಿ ಯಾವುದೆ ಕೇಲಸಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಹಣ ಕಡದೆ ಇದ್ದರೆ ಕೆಲಸಮಾಡುವುದಿಲ್ಲ, ಎಂದು ಕೆಲವರು ತಮ್ಮ ವೀಡಿಯೋಮಾಡಿ ಗಂಬೀರ ಆರೋಪಮಾಡಿದರೆ ಮತ್ತೆ ಕೇಲವರು ವಾಯ್ಸ ರೆಕಡ್ ಮಾಡಿ ಹೇಳಿದ್ದಾರೆ. ರಾಜ್ಯ ಸರ್ಕಾರ ಹೊಸದಾಗಿ ಹೊರಡಿಸಿರುವ ಗ್ರಾಮವನ್ನು ಕೇಂದ್ರವನ್ನು ತೆರೆಯಲು ಅರ್ಜಿ ಕರೆಯಲಾಗಿತ್ತು ಅರ್ಜಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿದ್ಯಾವಂತ ಹಾಗೂ ಅನುಭವ ಮತ್ತು ಈಗಾಗಲೇ ಸಿಎಸ್‌ಇ ಎಲ್ಲಿ ಕೆಲಸ ಮಾಡುತ್ತಿರುವವರಿಗೆ ಆದ್ಯತೆ ನೀಡಲಾಗಿತ್ತು ಇದೆಲ್ಲವನ್ನು ಗಾಳಿಗೆ ತೂರಿ ನಾರಾಯಣಸ್ವಾಮಿ ಎಂಬ ಹಣ ಮಾಡುವ ಉದ್ದೇಶದಿಂದ ಅವರಿಗೆ ಬೇಕಾದವರಿಗೆ ಹಾಗೂ ವಿದ್ಯಾರ್ಥಿ ಕಮ್ಮಿ ಇದ್ದರು ಯಾವುದೇ ಅನುಭವ ಇಲ್ಲದಿದ್ದರೂ,ಇನ್ನು ಕೆಲವಿ ಕಡೆ ಗ್ರಾಮಲೆಕ್ಕಿಗರಿಂದ್ದ ಯಾವುದೆ ವೆರಿಪಿಕಷ್ನ್ ಮಾಡದೆಮತ್ತು ದಾಖಲೆ ಗ್ರಾಮಗಳನ್ನು ಪಡೆಯದೆ ಗ್ರಾಮ್ ಒನ್ ಕೇಂದ್ರದ ಐಡಿ ಕೊಟ್ಟಿದ್ದಾರೆ.
ಯಾರಾದರೂ ಪ್ರಶ್ನೆ ಮಾಡಿದರೆ ತಾಲೂಕಿನ ತಾಸಿಲ್ದಾರ್ ಅವರು ಆಯ್ಕೆ ಮಾಡಿರುವುದು ನಾವಲ್ಲ ಎಂದು ಜವಾಬು ಹೇಳುತ್ತಿರುವ ನಾರಾಯಣಸ್ವಾಮಿ ಈ ಬಗ್ಗೆ ಕೇಲವು ತಾಲೂಕಿನ ತಾಸಿಲ್ದಾರ್‌ಗಳನ್ನು ಭೇಟಿ ಮಾಡಿ ಈ ಬಗ್ಗೆ ವಿಚಾರಿಸಿದಾಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಯಾವುದಾದರೂ ಕ್ರಿಮಿನಲ್ ಕೇಸ್ ಇದವೇ ಎಂಬ ಬಗ್ಗೆ ಮಾಹಿತಿ ಕೇಳಿದರು ಅದನ್ನು ಬಿಟ್ಟರೆ ನಮಗೆ ಯಾವುದೇ ಆಯ್ಕೆ ಮಾಡುವ ಅಧಿಕಾರವನ್ನು ಕೊಟ್ಟಿಲ್ಲ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆಗುತ್ತಿದೆಯೆಂದು ಎಂದು ತಿಲಿಸಿದ್ದಾರೆ.
ಅರ್ಜಿ ಸಲ್ಲಿಸಿದವರು ರಿಜೆಕ್ಟ್ ಆಗಲು ಮತ್ತು ತಾಲೂಕು ತಾಸಿಲ್ದಾರ್ ಅವರು ವರದಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದರೆ. ಅವರ ಯಾವುದೇ ದೂರವಾಣಿ ಕರೆಯನ್ನು ರಿಸೀವ್ ಮಾಡದೆ ಬ್ಲಕ್‌ಲಿಟ್ಸ್‌ಗೆ ಹಾಕುತ್ತg. ಈ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ತಿಳಿಸುತ್ತೆವೆ ಎಂದರೆ ನೀವು ಏನು ಬೇಕಾದರೂ ಮಾಡಿಕೊಳ್ಳಿ, ನೀವು ಯಾರಿಗೆ ಬೇಕದರು ಹೇಳಿಕೊಲ್ಲಿ ಹೋಗಿ ಎಂದು ಪೊನ್ ಕಟ್ಟ್‌ಮಾಡುತ್ತಾರೆ.
ನನಗೆ ಡಿಸಿ ಚೆನ್ನಬಸಪ್ಪನವರ ಬೆಂಬಲವಿದೆ ನಾನು ಏನು ಮಾಡಿದರೂ ನಡೆಯುತ್ತದೆ ಎಂದು ಕೇಲವು ವಿಎಲ್‌ಇ ಹತ್ತಿರ ಹೇಳಿಕೊಂಡಿರುವುದು ಉಂಟು. ಗ್ರಾಮ್ ಒನ್ ಐಡಿ ಕೊಡಲು ತಾರತಮ್ಯವೇಕೆ. ಹಣ ಕೊಟ್ಟವರಿಗೆ ಮಾತ್ರ ಐಡಿಗಳನ್ನು ನೀಡಿರುವುದು ಎಷ್ಟು ಸರಿ. ೧೦-೧೫ ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿಯಲ್ಲಿ ಅನುಭವವಿಲ್ಲದೆ ಹೊಸದಾಗಿ ಮೊಬೈಲ್ ಅಂಗಡಿ ಗಳು ಜೆರಾಕ್ಸ್ ಅಂಗಡಿಗಳು ಇಂಥವರಿಗೆ ಕೊಟ್ಟಿದ್ದು. ಜಿಲ್ಲೆಯಾದ್ಯಂತ ನಾರಾಯಣಸ್ವಾಮಿ ಹಣ್ಣ ಪಿಕುತ್ತಿರುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸದಿದ್ದರೆ, ಮುಂದಿನ ದಿನಗಳಲ್ಲಿ ನಾರಾಯಣ ಸ್ವಾಮಿಯವರು ಇನ್ನು ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಹಣ ಪಡೆಯುತ್ತಾರೆ ಆ ದೇವರೇ ಬಲ್ಲ ಎಂದು ಸಿಎಸ್ಸಿ ಆಪರೇಟರ್ಗಳು ಆರೋಪಿಸಿದ್ದಾರೆ.
ಅದೇನೇ ಇರಲಿ ಇಂತಹ ಲಂಚದ ಬೇಡಿಕೆ ಇಡುತ್ತಿರುವ ಇಂತಹ ನೌಕರರ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳಬೇಕಾಗಿದೆ ಈ ಮೂಲಕ ಪಾರದರ್ಶಕ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.