ಪರವಾನಿಗೆ ರದ್ದುಗೊಳಿಸುವಂತೆ ಒತ್ತಾಯಿಸಿ ಆಲನಹಳ್ಳಿ ಗ್ರಾಮಸ್ಥರು ಪ್ರತಿಭಟನೆ

 

ಮೈಸೂರು

ಆಲನಹಳ್ಳಿ ಗ್ರಾಮದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅಬಕಾರಿ ಇಲಾಖೆಯವರು ನೀಡಿರುವ ಪರವಾನಿಗೆ ರದ್ದುಗೊಳಿಸುವಂತೆ ಒತ್ತಾಯಿಸಿ ಆಲನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು .

 

ಉರಿಲಿಂಗ ಪೆದ್ದೇಶ್ವರ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಇಂದು ಆಲನಹಳ್ಳಿ ಸಾಯಿ ರೆಸಿಡೆನ್ಸಿ ಅಂಡ್ ಹೋಟೆಲ್ ಮುಂಭಾಗ ಪ್ರತಿಭಟನೆ ನಡೆಸಿದ ಅವರು ಬಾರ್‌ ತೆರೆಯಲು ಅಬಕಾರಿ ಇಲಾಖೆಯವರು ಅನುಮತಿ ನೀಡಿರುವ ಸ್ಥಳದ ಸಮೀಪದಲ್ಲಿ ಶಾಶ್ವತ ಸೇವಾ ಶಾಲೆ , ಮಹದೇಶ್ವರ ದೇವಸ್ಥಾನ , ಅಂಬೇಡ್ಕರ್ ಸಾರ್ವಜನಿಕರ ಬಸ್ ನಿಲ್ದಾಣ , ಅಂಬೇಡ್ಕರ್‌ ಆಟೋ ನಿಲ್ದಾಣವಿದೆ . ಜೊತೆಗೆ ಸುತ್ತಮುತ್ತ ಬಡ ಕುಟುಂಬದವರು ವಾಸಿಸುತ್ತಿದ್ದಾರೆ .

 

 

ಇಲ್ಲಿ ಬಾರ್ ತೆರೆದರೆ ತೊಂದರೆಯಾಗಲಿದೆ ಅಲ್ಲದೆ , ಈಗಾಗಲೇ ಆಲನಹಳ್ಳಿ ಗ್ರಾಮದ ಸುತ್ತಮುತ್ತ ಹಲವಾರು ಬಾರ್ ಅಂಡ್ ರೆಸ್ಟೋರೆಂಡ್ ಗಳಿವೆ . ಈಗ ಮತ್ತೆ ಗ್ರಾಮ ಠಾಣೆಯ ಮಧ್ಯಭಾಗದಲ್ಲಿ ಬಾರ್ ತೆರೆಯುವ ಅವಶ್ಯಕತೆಯಿಲ್ಲ ಎಂದು ಸರ್ಕಾರದ ಆದೇಶವಿದೆ .

 

ಆದರೂ ಸರ್ಕಾರದ ನಿಯಮವನ್ನು ಮೀರಿ ಬಾರ್ ತೆರೆಯಲು ಅನುಮತಿ ನೀಡಲಾಗಿದೆ . ಬಾರ್ ತೆರೆಯದಂತೆ ಅಬಕಾರಿ ಇಲಾಖೆಗೆ ಎರಡು ಬಾರಿ ಆಕ್ಷೇಪಣೆ ಅರ್ಜಿಯನ್ನು ನೀಡಿದ್ದರೂ ಸಹ ಬಾರ್ ತೆರೆಯಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು . ಈ ಕೂಡಲೇ ಬಾರ್ ತೆರೆಯಲು ಅಬಕಾರಿ ಇಲಾಖೆಯವರು ನೀಡಿರುವ ಪರವನಿಗೆಯನ್ನು ರದ್ದು ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು .

 

ಪ್ರತಿಭಟನೆಯಲ್ಲಿ ಶಿವ ಮಾದೇವ , ಚಿಕ್ಕ ಮಾದೇವ , ಮಹಾದೇವ , ರಾಜಣ್ಣ , ಮೂರ್ತಿ , ಸಿದ್ದಯ್ಯ , ಹೇಮಂತ್, ಮರಿದೇವಯ್ಯ ಇತರರು ಹಾಜರಿದ್ದರು .

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version