ಕರಪತ್ರದ ಮೂಲಕ ಭಾವೈಕ್ಯತೆ ಸಾರಲು ಮುಂದಾದ ಮುಸ್ಲಿo ಯುವಕ.

ಕರಪತ್ರದ ಮೂಲಕ ಭಾವೈಕ್ಯತೆ ಸಾರಲು ಮುಂದಾದ ಮುಸ್ಲಿo ಯುವಕ.

 

ತುಮಕೂರು_ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಹಲವು ದಿನಗಳಿಂದ ಒಂದಲ್ಲ ಒಂದು ವಿಚಾರದಿಂದ ಧರ್ಮ-ಧರ್ಮಗಳ ನಡುವೆ ಸಂಘರ್ಷ ಹಾಗೂ ಸಾಮರಸ್ಯದ ವಿಚಾರದಲ್ಲಿ ಗೊಂದಲ ಉಂಟಾಗುತ್ತಿದೆ ಇದನ್ನರಿತ ತುಮಕೂರಿನ ಮುಸ್ಲಿಂ ಯುವಕನೊಬ್ಬ ವಿನೂತನ ಕರಪತ್ರ ಹಂಚುವ ಮೂಲಕ ಸಾಮರಸ್ಯ ಕಾಪಾಡಲು ಮುಂದಾಗಿದ್ದಾನೆ.

 

ತುಮಕೂರು ನಗರದ ಯುವಕ ಸೈಯದ್ ಬರ್ಹನುದ್ದಿನ್ ಎಂಬುವವರು ವಿನೂತನವಾಗಿ ಕರಪತ್ರವನ್ನು ಹಂಚುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಮುಂದಾಗಿದ್ದಾನೆ.

 

ಕರ್ನಾಟಕ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಪ್ರತಿಯೊಂದು ಜಾತಿ ಧರ್ಮಕ್ಕೂ ಜೀವನ ನಡೆಸಲು ಸಂವಿಧಾನ ಹಕ್ಕು ನೀಡಿದೆ ಅದರಂತೆ ಪ್ರತಿಯೊಬ್ಬ ನಾಗರಿಕನ ದೇಶದಲ್ಲಿ ನೆಮ್ಮದಿಯಿಂದ ಬದುಕಲು ಉತ್ತಮ ವಾತಾವರಣದ ನಿರ್ಮಾಣದ ಅವಶ್ಯಕತೆ ಇದೆ ಎನ್ನುವ ಸಂದೇಶವನ್ನು ಕರಪತ್ರದ ಮೂಲಕ ತಿಳಿಸಲು ಮುಂದಾಗಿದ್ದಾನೆ.

 

 

ಇನ್ನು ದೇಶದಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರ ಸದಾ ದಾಳಿ ನಡೆಸಿ ಜೀವ ಹಾಗೂ ಸ್ವತ್ತನ್ನು ಬಲಿ ತೆಗೆದುಕೊಳ್ಳಲು ಮುಂದಾಗುತ್ತಿದೆ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ಮಧ್ಯೆ ಸಾಮರಸ್ಯಕ್ಕೆ ಏನು ಸಮಸ್ಯೆ ಇಲ್ಲ ಶಾಂತಿ ಕದಡುತಿರುವುದು ಹಿಂದೂಗಳಲ್ಲ ಅದರ ಬದಲಾಗಿ ಆರ್.ಎಸ್ ಎಸ್ , ಬಜರಂಗದಳ ,ವಿಶ್ವ ಹಿಂದು ಪರಿಷತ್ ಅಂತಹ ಸ್ವಯಂಘೋಷಿತ ಹಿಂದು ಸಂರಕ್ಷಕರಿಂದ .

 

 

ಇಂದು ನಾವೆಲ್ಲ ಅನಾವಶ್ಯಕ ವಿವಾದಗಳನ್ನು ಬಹಿಷ್ಕಾರ ಮಾಡಬೇಕು , ಬೆಲೆ ಏರಿಕೆ ಗಮನವನ್ನು ಬೇರೆಡೆ ಸೆಳೆಯಲು ಇಲ್ಲಸಲ್ಲದ ವಿವಾದಗಳನ್ನು ಹುಟ್ಟುಹಾಕುತ್ತಾ ಸಹೋದರರಂತೆ ಇರುವ ಹಿಂದೂ ಮುಸ್ಲಿಮರಲ್ಲಿ ಪರಸ್ಪರ ದ್ವೇಷ ಬೆಳೆಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಹಾಗಾಗಿ ಯಾವುದೇ ಅನಾವಶ್ಯಕ ವಿಷಯಗಳಿಗೆ ತಲೆ ಹಾಕದಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ ಎಲ್ಲರೂ ಎಲ್ಲ ಸಮುದಾಯ ಧರ್ಮದವರು ಸಹ ಒಟ್ಟಾಗಿ ಅಣ್ಣ-ತಮ್ಮಂದಿರಂತೆ ಸಮಾಜದಲ್ಲಿ ಬದುಕಬೇಕು

 

ಇದೆಲ್ಲದರ ನಡುವೆ ವಿಶ್ವ ಹಿಂದೂ ಪರಿಷತ್ ನ ವಿರುದ್ಧವಾಗಿ ನಾವೆಲ್ಲರೂ ಪ್ರೀತಿಯನ್ನು ಹಂಚೋಣ ಸಾಮರಸ್ಯ ಸ್ಥಾಪಿಸೋಣ ಮತ್ತೆ ನಮ್ಮ ಕರ್ನಾಟಕವನ್ನು ಸ್ನೇಹ ಮಯವನ್ನಾಗಿ ಮಾಡಿ ರಾಷ್ಟ್ರಕವಿ ಕುವೆಂಪುರವರ ಕನಸಿನ ಸರ್ವಜನಾಂಗದ ಶಾಂತಿಯ ತೋಟ ಕಟ್ಟೋಣ ಆ ಮೂಲಕ ಎಲ್ಲಾ ಮುಸ್ಲಿಂ ಸಮುದಾಯದ ಜನರು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎನ್ನದೆ ಎಲ್ಲಾ ಅಂಗಡಿಗಳಲ್ಲು ವ್ಯಾಪಾರ ವಹಿವಾಟಿಗೆ ಮುಂದಾಗಿ ಸೌಹಾರ್ದತೆಯನ್ನು ಸಾರೋಣ ಎನ್ನುವ ಕರಪತ್ರದ ಮೂಲಕ ವಿನೂತನವಾಗಿ ಶಾಂತಿ,ಸಾಮರಸ್ಯ, ಸಹೋದರತ್ವ ಕಾಪಾಡಲು ಮುಂದಾಗಿದ್ದಾನೆ.

 

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version