ಗಂಗಾಕಲ್ಯಾಣ ಯೋಜನೆ: ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯ.
ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ಹಿಚ್ಚಿಸಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸರ್ಕಾರವನ್ನು ಒತ್ತಾಯಿಸಿದರು.
ಅವರು ತಾಲ್ಲೋಕಿನ ನಾಗವಲ್ಲಿಯಲ್ಲಿ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಪಂಪು ಮೋಟಾರುಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರ ವಿವಿಧ ನಿಗಮಗಳ ಅಡಿಯಲ್ಲಿ ಗಂಗಾಕಲ್ಯಾಣ ಯೋಜನೆಗೆ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಆಗ ಮಾತ್ರ ನಿಜವಾಗಿಯೂ ರೈತರಿಗೆ ಅನುಕೂಲವಾಗುತ್ತದೆ.
ಕೇವಲ ಕೆಲವೇ ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ರೈತರಿಗೆ ನ್ಯಾಯ ದೊರೆಕಿಸಿಕೊಡಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್ ಅಭಿವುದ್ಧಿ ನಿಗಮ ವಾಲ್ಮೀಕಿ ಅಭಿವೃದ್ಧಿ ನಿಗಮ ದೇವರಾಜ ಅರಸು ಅಭಿವೃದ್ಧಿ ನಿಗಮ ಹೀಗೆ ವಿವಿಧ ನಿಗಮಗಳ ಅಡಿಯಲ್ಲಿ ವರ್ಷಕ್ಕೆ ಕನಿಷ್ಟ 50 ಮಂದಿ ರೈತರಿಗೆ ಅವಕಾಶ ನೀಡಿದರೆ ಒಂದು ತಾಲ್ಲೋಕಿನ ಸುಮಾರು 250 ರಿಂದ 300 ಮಂದಿ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಇನ್ನು ಸಕಾಲಕ್ಕೆ ಮೋಟಾರು ಪಂಪ್ ವಿತರಣೆಯ ಕುರಿತು ಮಾತನಾಡಿದ ಶಾಸಕರು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ ಕೊರೆದ ಮೂರು ತಿಂಗಳೊಳಗಾಗಿ ಮೋಟರ್ ಪಂಪ್ ಸೆಟ್ ಗಳನ್ನು ರೈತರಿಗೆ ವಿತರಿಸಿದರೆ ಅವರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಅದನ್ನು ಬಿಟ್ಟು ಸರ್ಕಾರ 2018 19 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಈಗ ಮೋಟರ್ ಮುಖ್ಯಾಂಶಗಳನ್ನು ವಿತರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಎಷ್ಟು ಬೋರ್ವೆಲ್ ಗಳು ನೀರಿಲ್ಲದೆ ಒಣಗಿ ಹೋಗಿರುವ ಉದಾಹರಣೆಗಳು ಸಹ ಇವೆ ಆದ್ದರಿಂದ ಕಾಲಕಾಲಕ್ಕೆ ಸರ್ಕಾರ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಸಲಕರಣೆಗಳನ್ನು ವಿತರಿಸಿದರು ರೈತರು ನೆಮ್ಮದಿಯಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಹಾಲನೂರು ಅನಂತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು